ಕೊರೊನಾ ಲಸಿಕೆಗಳ ಹಿಂಪಡೆದ ಆಸ್ಟ್ರಾಜೆನೆಕಾ ನಮ್ಮದೇಶದಲ್ಲಿ ದೊರೆಯುತ್ತಾ ?

Vijayanagara Vani
ಕೊರೊನಾ ಲಸಿಕೆಗಳ ಹಿಂಪಡೆದ ಆಸ್ಟ್ರಾಜೆನೆಕಾ ನಮ್ಮದೇಶದಲ್ಲಿ  ದೊರೆಯುತ್ತಾ ?

5 ವರ್ಷದ ಹಿಂದೆ ಮನುಕುಲಕ್ಕೆ ಕಂಟಕವಾಗಿ ಕಾಡಿದ್ದ ಕೋವಿಡ್ ವಿಶ್ವದಾದ್ಯಂತ ಕೋಟಿ ಕೋಟಿ ಜೀವಗಳ ಬಲಿಪಡೆದಿತ್ತು. ಹೀಗಾಗಿ ಕೋವಿಡ್‌ಗೆ ಲಸಿಕೆ ಕಂಡುಕೊಳ್ಳಲು ತಜ್ಞರು ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದರು. ಇದರ ಫಲವಾಗಿ ಒಂದಿಷ್ಟು ಸಂಸ್ಥೆಗಳ ಕೋವಿಡ್ ಲಸಿಕೆಯು ಹೊರಬಂದಿತ್ತು.

ಈ ಲಸಿಕೆ ತಯಾರಿಕ ಕಂಪನಿಗಳಲ್ಲಿ ಆಸ್ಟ್ರಾಜೆನೆಕಾ ಸಹ ಒಂದಾಗಿತ್ತು, ಆದರೆ ಇತ್ತೀಚಿಗೆ ತನ್ನ ಲಸಿಕೆಯಲ್ಲಿ ಅಲ್ಪ ಪ್ರಮಾಣದ ಅಡ್ಡಪರಿಣಾಮವಿದೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡಿತ್ತು. ದಿ ಆಕ್ಸ್‌ಫರ್ಡ್‌ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆ ಕೋವಿಶೀಲ್ಡ್, ವ್ಯಾಕ್ಸ್‌ಜೆವೆರಿಯಾ ಮುಂತಾದ ಬ್ರ್ಯಾಂಡ್‌ನ ಅಡಿಯಲ್ಲಿ ಲಸಿಕೆಯನ್ನು ನೀಡಿದೆ.

ಈ ಕಂಪನಿ ವಿರುದ್ಧ ಕೋರ್ಟ್‌ನಲ್ಲಿ ಕೇಸ್‌ ಹಾಕಲಾಗಿತ್ತು. ಲಸಿಕೆ ಪಡೆದ ಬಳಿಕ ಗಂಭೀರ ಅಡ್ಡಪರಿಣಾಮ ಹಾಗೂ ಸಾವು ಸಂಭವಿಸಿರುವುದರಿಂದ ಕಂಪನಿ ವಿರುದ್ಧ ಕೋರ್ಟ್‌ನಲ್ಲಿ ಕೇಸ್‌ ಹಾಕಲಾಗಿತ್ತು. ಹಲವಾರು ಜನರು ಈ ಲಸಿಕೆ ವಿರುದ್ಧ ಕೇಸ್‌ ಹಾಕಿದ್ದರು. ಆದರೆ ಇದೀಗ ಈ ಕಂಪನಿ ವಿಶ್ವದಾದ್ಯಂತ ಇರುವ ತನ್ನ ಲಸಿಕೆಗಳನ್ನು ಹಿಂಪಡೆದಿದೆ ಎಂದು ವರದಿಯಾಗಿದೆ. ಬ್ರಿಟಿಷ್ ಮೂಲದ ಔಷಧೀಯ ಕಂಪನಿಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ ಎಂದು ವರದಿ ಮಾಡಿದ ದಿನಗಳ ನಂತರ ಈ ನಿರ್ಧಾರ ಹೊರಬಿದ್ದಿದೆ. ವಿಶ್ವದಾದ್ಯಂತ ವಾಣಿಜ್ಯ ಕಾರಣದಿಂದಾಗಿ ಲಸಿಕೆಗಳ ಹಿಂಪಡೆಯಲಾಗಿದೆ ಎಂದು ಕಂಪನಿ ಮಾಹಿತಿ ಹಂಚಿಕೊಂಡಿದೆ. ಕಂಪನಿಯು ಐರೋಪ್ಯ ಒಕ್ಕೂಟದಲ್ಲಿ ತನ್ನ ವ್ಯಾಪಾರ ಅಧಿಕಾರವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡಿತು, ಲಸಿಕೆಯನ್ನು ಇನ್ನು ಮುಂದೆ ಉತ್ಪಾದಿಸಲಾಗುವುದಿಲ್ಲ ಮತ್ತು ಇನ್ನು ಮುಂದೆ ಬಳಸಲಾಗುವುದಿಲ್ಲ ಎಂದು ಸೇರಿಸಿದೆ. ಲಸಿಕೆಯನ್ನು ಬಳಸುತ್ತಿರುವ ಇತರ ದೇಶಗಳಲ್ಲಿಯೂ ಲಸಿಕ ಹಿಂಪಡೆಯಲು ಮುಂದಾಗಲಿದೆ ಎನ್ನಲಾಗಿದೆ.

ಕೋವಿಡ್ ಲಸಿಕೆ ಹಲವಾರು ಜನರಿಗೆ ಸಾವು ಮತ್ತು ಅಡ್ಡ ಪರಿಣಾಮಕ್ಕೆ ಕಾರಣವಾಗಿತ್ತು ಎಂಬ ಆರೋಪದ ಮೇಲೆ ಫಾರ್ಮಾಸ್ಯುಟಿಕಲ್ ದೈತ್ಯ ಯುಕೆಯಲ್ಲಿ 100 ಮಿಲಿಯನ್ ಪೌಂಡ್ ಪ್ರಕರಣ ಎದುರಿಸುತ್ತಿದೆ. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ ಈ ಲಸಿಕೆ TTS ಅಥವಾ ಥ್ರಂಬೋಸಿಸ್ನೊಂದಿಗೆ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ಗೆ ಕಾರಣವಾಗಬಹುದು ಎಂದು ಫೆಬ್ರವರಿಯಲ್ಲಿ ಅಸ್ಟ್ರಾಜೆನೆಕಾ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡರು. TTS ಎಂಬುದು ಮಾನವರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಲಿದೆ ಎಂದು ಆರೋಪ ಎದುರಾಗಿತ್ತು. ಜೊತೆಗೆ ಇಂಗ್ಲೆಂಡ್‌ನಲ್ಲಿ ಕನಿಷ್ಠ 81 ಸಾವುಗಳಿಗೆ ಈ ಅಂಶಗಳು ಕಾರಣವಾಗಿವೆ. ಆದರೆ ಇಷ್ಟೆಲ್ಲಾ ಸಂಭವಿಸಿದ್ದರೂ ಕೋವಿಶೀಲ್ಡ್ ಲಸಿಕೆ ಹಿಂಪಡೆದಿರಲು ನ್ಯಾಯಾಲಯ ಪ್ರಕರಣ ಕಾರಣವಲ್ಲ ಎಂದು ಕಂಪನಿ ತಿಳಿಸಿದೆ.

TTS (TTS – Thrombosis with Thrombocytopenia Syndrome) ಎಂದರೆ ಕೊರೊನಾ ಲಸಿಕೆ ಪಡೆದಾಗ ಬರುವ ಅಪರೂಪದ ಸಮಸ್ಯೆಯಾಗಿದೆ. ಇದರಿಂದ ರಕ್ತಹೆಪ್ಪುಗಟ್ಟುವುದು, ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿ ಅನಾರೋಗ್ಯಕ್ಕೆ ಕಾರಣವಾಹುದು ಎಂದು ಅಂದಾಜಿಸಲಾಗಿದೆ. ರಕ್ತ ಹೆಪ್ಪುಗಟ್ಟಿದಾಗ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ತೊಂದರೆಯಾಗುವುದು, ಇನ್ನು ಪ್ಲೇಟ್‌ಲೆಟ್‌ ಕಡಿಮೆಯಾದರೆ ಅತ್ಯಧಿಕ ರಕ್ತಸ್ರಾವ ಉಂಟಾಗುವುದು, ಇದೆರಡೂ ತುಂಬಾನೇ ಅಪಾಯಕಾರಿಯಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್‌ನಲ್ಲಿ ಸಾವುಗಳು ಸಂಭವಿಸಿದ್ದು ಎಂದು ಆರೋಪಿಸಿ ಕಂಪನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಭಾರತದಲ್ಲೂ ಇದೇ ಕಂಪನಿಯ ಲಸಿಕೆಯನ್ನು ಪಡೆದಿದ್ದಾರೆ. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಆಗಿ ಈ ಕಂಪನಿಯ ಲಸಿಕೆಯನ್ನೇ ಬಹುಪಾಲು ಮಂದಿಗೆ ನೀಡಲಾಗಿತ್ತು. ಆದರೆ ಈ ಲಸಿಕೆಯಿಂದ ಅಡ್ಡಪರಿಣಾಮವಿದೆಯೇ ಎಂದು ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಕೆಲವರಲ್ಲಿ ಅಡ್ಡಪರಿಣಾಮ ಉಂಟಾಗಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆ ತಿಳಿಸಿತ್ತು.

 

WhatsApp Group Join Now
Telegram Group Join Now
Share This Article
error: Content is protected !!