Ad image

ಸಿರಿಗೇರಿ:ರಕ್ತಹೀನತೆ ಹೋಗಲಾಡಿಸಲು ಸಹಕರಿಸಿ!! ನಡವಿ: ವಿವೇಕಾನಂದ ಸಂಘದಿ0ದ ರಕ್ತದಾನ ಶಿಬಿರ!!

Vijayanagara Vani
ಸಿರಿಗೇರಿ:ರಕ್ತಹೀನತೆ ಹೋಗಲಾಡಿಸಲು ಸಹಕರಿಸಿ!! ನಡವಿ: ವಿವೇಕಾನಂದ ಸಂಘದಿ0ದ ರಕ್ತದಾನ ಶಿಬಿರ!!

ಇಲ್ಲಿನ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಸ್ಥಳೀಯ ಆರೋಗ್ಯ ಕೇಂದ್ರದಿ0ದ ಅನಿನಿಯಾ(ರಕ್ತ ಹೀನತೆ)ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂಧರ್ಭದಲ್ಲಿ ಮಾತನಾಡಿದ ಕ್ಷೇತ್ರಾ ಆರೋಗ್ಯ ಶಿಕ್ಷಣ ಅಧಿಕಾರಿ ಮಹಮ್ಮದ್ ಖಾಸಿಂ”ಇತ್ತೀಚಿನ ವಿಧ್ಯಮಾನಗಳಲ್ಲಿ ಮಕ್ಕಳು ಹಾಗೂ ತಾಯಂದಿರಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಾಡುತ್ತಿದೆ. ಇದಕ್ಕೆ ಕಾರಣ ಪೌಷ್ಠಿಕಾಂಶ ಆಹಾರದ ಕೊರತೆ. ಇದನ್ನು ಸರಿದೂಗಿಸಲು ತರಕಾರಿ ಹಾಗೂ ಹಾಲು ಹೈನ ಮೂಲದ ಆಹಾರ ಸೇವನೆ ಉಪಯುಕ್ತ ಎಂದರು. ತದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹೇಮಾವತಿ ಹಾಗೂ ತಾಪಂ ವ್ಯವಸ್ಥಾಪಕರಾದ ಸುಜಾತ ತಾಯಂದಿರು ಹಾಗೂ ಮಕ್ಕಳು ಆಗಿದ್ದಾಗ್ಗೆ ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ವಿಟಮಿನ್ ಮಾತ್ರೆ ತೆಗೆದುಕೊಳ್ಳಬೇಕು. ರಕ್ತ ಹೀನತೆಯನ್ನು ಹೋಗಲಾಡಿಸುವ ಸಲುವಾಗಿ ಪೌಷ್ಠಿಕ ಆಹಾರವನ್ನು ಪಡೆದುಕೊಂಡು ಆರೋಗ್ಯವನ್ನು ಧ್ರುಢವಾಗಿಸಿಕೊಳ್ಳಬೇಕೆಂಬ ಸಲಹೆ ನೀಡಿದರಲ್ಲದೆ ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ಆ ನಂತರ ಗ್ರಾಪಂ ಪಿಡಿಓ ಯು.ರಾಮಪ್ಪ” ಆರೋಗ್ಯ ಇಲಾಖೆಯ ಯಾವುದೇ ಸಮಸ್ಯೆ ಇದ್ದರೂ ಗ್ರಾಮಾಳಿತದ ಗಮನಕ್ಕೆ ತಂದರೆ ಸಂಪೂರ್ಣ ಸಹಾಯ ಸಹಕಾರ ನೀಡಲಾಗುವುದೆಂಬ ಭರವಸೆ ನೀಡಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷಿö್ಮ ಹೆಚ್.ದ್ಯಾವಣ್ಣ, ಗ್ರಾಪಂ ಕಾರ್ಯದರ್ಶಿ ವೀರೇಶ, ಲಕ್ಷಿö್ಮ,ರುದ್ರಮ್ಮ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -
Ad imageAd image


ಗಾಂಧಿ ಜಯಂತಿ ನಿಮಿತ್ತ ಸಮೀಪದ ನಡವಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘಟನೆಯಿ0ದ ಬುಧವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಲಾಯಿತು. ಸಂಘಟನೆಯ ಅಧ್ಯಕ್ಷö್ಯ ದೇವನಾಯ್ಕ ಮಾತನಾಡಿ ರಕ್ತದಾನ ಮಾಡುವುದರಿಂದ ಒಬ್ಬ ಜೀವಿ ಮಾತ್ರವಲ್ಲ ಅವರ ಕುಟುಂಬ ವರ್ಗವನ್ನೇ ರಕ್ಷಿಸಿದಂತಾಗುತ್ತದೆ. ಅಲ್ಲದೆ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆಗೊಂಡು ಮನುಷ್ಯನಿಗೆ ಹೊಸ ಚೈತನ್ಯ ಮೂಡುತ್ತದೆ ಎಂದರು. ಈ ಸಂಧರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಶಿಬಿರದಲ್ಲಿ ಆರೋಗ್ಯ ಸಹಾಯಕರಾದ ಮೋಹನ್,ಸುಮಲತಾ,ಶಶಿಕಲಾ, ಗ್ರಾಪಂ ಸಿಬ್ಬಂದಿ ಮುತ್ತು, ಪಾಂಡು, ಸಂಘದ ಆಯೋಜಕರಾದ ತಿಪ್ಪೇಸ್ವಾಮಿ, ಶಂಕ್ರಿ,ಶರಣಪ್ಪ, ಪರಮೇಶ, ಚಂದ್ರ,ಬಸವ,ರಾಮ,ಗಾದಿ ಅಡಿವೇಶ ಸೇರಿದಂತೆ ಆಶಾ ಕಾರ್ಯಕರ್ತರು ಗ್ರಾಮಸ್ತರು ಉಪಸ್ಥಿತರಿದ್ದರು.

Share This Article
error: Content is protected !!
";