Ad image

ಮಕ್ಕಳಿಗೆ ಅಪೌಷ್ಟಿಕತೆಯ ಸಮಸ್ಯೆ ಕಾಡದಿರಲಿ……

Vijayanagara Vani
ಮಕ್ಕಳಿಗೆ ಅಪೌಷ್ಟಿಕತೆಯ ಸಮಸ್ಯೆ ಕಾಡದಿರಲಿ……

ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ನೂರು ಮಕ್ಕಳಲ್ಲಿ 32 ಮಕ್ಕಳು (ಅಂದಾಜು ಮೂರರಲ್ಲಿ ಒಬ್ಬರು) ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ 36 ಮಕ್ಕಳು ಅಪೌಷ್ಟಿಕತೆಯಿಂದಾಗಿ ಕುಬ್ಬರಾಗಿದ್ದಾರೆ, ಮಗುವಿಗೆ ಸರಿಯಾಗಿ ಎದೆಹಾಲನ್ನು ಕುಡಿಸದೆ ಇರುವುದು, ಆರು ತಿಂಗಳ ನಂತರವೂ ಮಗುವಿಗೆ ಆಹಾರ ನೀಡುವುದನ್ನು ಪ್ರಾರಂಭಿಸದೇ ಇರುವುದು, ಬಾಟಲಿಯಲ್ಲಿ ಹಾಲು ಕುಡಿಸುವ ಅಭ್ಯಾಸ, ಆಗಾಗ ಮಗುವಿಗೆ ಆರೋಗ್ಯ ಕೈಕೊಡುತ್ತಿರುವುದು, ಬಡತನ ಮೊದಲಾದ ಕಾರಣಗಳಿಂದ ಅಪೌಷ್ಟಿಕತೆ ತಲೆದೋರುತ್ತದೆ. ದೀರ್ಘಕಾಲದಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿನ ತೂಕ ಕಡಿಮೆಯಾಗುತ್ತದೆ ಮತ್ತು ಬೆಳವಣಿಗೆಯು ಕುಂಠಿತವಾಗಿಬಿಡುತ್ತದೆ.

ಅಪೌಷ್ಟಿಕತೆಯನ್ನು ಕಂಡುಹಿಡಿಯುವುದು ಹೇಗೆ? ಮಗುವಿನ ತೂಕ ಮತ್ತು ಎತ್ತರ. ಅವರ ವಯಸ್ಸಿನ ಇತರ ಆರೋಗ್ಯವಂತ ಮಕ್ಕಳಿಗೆ ಹೋಲಿಸಿ ನೋಡಿದಾಗ ಹೆಚ್ಚಿದೆಯೋ, ಸರಿಯಿದೆಯೇ ಅಥವಾ ಕಡಿಮೆ ಇದೆಯೇ ಎಂಬುದು ತಿಳಿಯುತ್ತದೆ. ವಯಸ್ಸಿಗೆ ತಕ್ಕ ತೂಕವಿಲ್ಲದಿದ್ದರೆ ‘ಕಡಿಮೆ ತೂಕ’ ಎಂದೂ, ವಯಸಿಗೆ ತಕ್ಕ ಉದ್ದವಿಲ್ಲದಿದ್ದರೆ ‘ಕುಂಠಿತ ಬೆಳವಣಿಗೆ’ ಎಂದೂ, ಉದ್ದಕ್ಕೆ ತಕ್ಕ ತೂಕವಿಲ್ಲದಿದ್ದರೆ ‘ಕ್ಷೀಣ ಬೆಳವಣಿಗೆ’ ಎಂದೂ ಕರೆಯುತ್ತಾರೆ. ಸಾಧಾರಣವಾಗಿ ಆಯಾ ವಯಸ್ಸಿನ ಮಕ್ಕಳ ತೂಕ ಮತ್ತು ಎತ್ತರ ಎಷ್ಟಿರುತ್ತದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆಯವರು ಲೆಕ್ಕ ಹಾಕಿ ಸುಲಭವಾಗಿ ಅರ್ಥವಾಗುವ ಹಾಗೆ ರೇಖಾನಕ್ಷೆಯನ್ನು ಮಾಡಿದ್ದಾರೆ. ಅದು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. ಮಕ್ಕಳ ತಜ್ಞರ ಬಳಿಯೂ ಇರುತ್ತದೆ. ಅದರಲ್ಲಿ ಉದ್ದ ಮತ್ತು ಬೇಕಾಗುತ್ತದೆ. ಹಾಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ತೂಕವನ್ನು ನಮೂದಿಸಿದಾಗ ಅಪೌಷ್ಟಿಕತೆ ಇದೆಯೇ, ಇಲ್ಲವೇ ಎಂದು ಸುಲಭವಾಗಿ ಹೇಳಬಹುದು. ಇದ್ದರೆ ಅದರ ತೀವ್ರತೆ ಎಷ್ಟಿದೆ ಎಂಬುದೂ ತಿಳಿಯುತ್ತದೆ.ಆರು ತಿಂಗಳಿನಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ತೋಳಿನ ಸುತ್ತಳತೆಯನ್ನು ಬಳಸಿಯೂ ಅಪೌಷ್ಟಿಕತೆಯನ್ನು ಕಂಡುಹಿಡಿಯಬಹುದು. ಅದು II.5 ಸೆಂ.ಮೀ.ಗಿಂತ ಕಡಿಮೆ ಇದ್ದರೆ ತೀವ್ರ ಮಟ್ಟದ ಅಪೌಷ್ಟಿಕತೆ ಎಂದೂ, II.5 ರಿಂದ 12.5 ಸೆಂ.ಮೀ. ಇದ್ದರೆ ಸಾಧಾರಣ ಮಟ್ಟದ ಅಪೌಷ್ಟಿಕತೆ ಎಂದೂ ಹಾಗೂ 13.5 ಸೆಂ.ಮೀ.ಗಿಂತ ಹೆಚ್ಚಿದ್ದರೆ ಅಪೌಷ್ಟಿಕತೆ ಇಲ್ಲದ ಆರೋಗ್ಯವಂತ ಮಗು ಎಂದೂ ಕರೆಯಲಾಗುತ್ತದೆ.

ಬಾಟಲಿ ಹಾಲು ಕುಡಿಸಬಹುದೇ? : ಎದೆಹಾಲಿನಲ್ಲಿರುವ ಸಂತುಲಿತ ಪೋಷಕಾಂಶಗಳು, ರೋಗನಿರೋಧಕಗಳು ಬಾಟಲಿ ಹಾಲಿನಲ್ಲಿರುವುದಿಲ್ಲ.ತೀವ್ರಅಪೌಷ್ಟಿಕತೆ ಐದು ಪರಿಹಾರವಾಗಲು ಸಾಧಾರಣ ಮೂರರಿಂದಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ದಾದಿಯರಿಂದ ಸಹಾಯ ಪಡೆದುಕೊಳ್ಳಬೇಕು.

ಅಪೌಷ್ಟಿಕತೆ ನಿವಾರಣೆಗೆ ಕೆಲವು ಟಿಪ್ಸ್

ಮೊದಲ ಆರು ತಿಂಗಳವರೆಗೆ ಮಗುವಿಗೆ ಎದೆಹಾಲು ಮಾತ್ರ ಕೊಡಿ ಹಾಗೂ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ಮುಂದುವರೆಸಿ, ಮಕ್ಕಳಿಗೆ ಬಾಟಲ್, ನಿಪ್ಪಲ್ ಅಭ್ಯಾಸ ಮಾಡಿಸದಿರಿ.

ಪ್ಯಾಕೆಟ್ ಅಥವಾ ಡಬ್ಬಗಳಲ್ಲಿ ಸಿಗುವ ಹುಡಿ ಅಥವಾ ಆಹಾರಗಳನ್ನು ಉಪಯೋಗಿಸಬೇಡಿ, ಮೂರು ವರ್ಷದವರೆಗೆ ಆರು ತಿಂಗಳಿಗೊಮ್ಮೆ ‘ಎ’ ಜೀವಸತ್ವದ ಬಿಂದುಗಳನ್ನು ಕೊಡಿಸಿ. ಸರಕಾರಿ ಆಸ್ಪತ್ರೆಗಳಲ್ಲಿ ಐದು ವರ್ಷಗಳವರೆಗೆ ಅದನ್ನು ಉಚಿತವಾಗಿ ನೀಡುತ್ತಾರೆ. ಮೊದಲ ಒಂದು ವರ್ಷದವರೆಗೆ ಪ್ರತಿದಿನ ‘ಡಿ’ ಜೀವಸತ್ವದ ಬಿಂದುಗಳನ್ನು ನೀಡಿರಿ.

 

Share This Article
error: Content is protected !!
";