‘ಕಡಲೂರ ಕಣ್ಮಣಿ’ ಚಿತ್ರ ಬಿಡುಗಡೆಗೆ ಸಿದ್ದ.

Vijayanagara Vani
‘ಕಡಲೂರ ಕಣ್ಮಣಿ’ ಚಿತ್ರ ಬಿಡುಗಡೆಗೆ ಸಿದ್ದ.

ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡ ಕಡಲೂರ ಕಣ್ಮಣಿ ಕನ್ನಡ ಚಲನಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ, ಇದರನಿರ್ಮಾಪಕರು ಕೊಳ ಶೈಲೇಶ್ ಆರ್ ಪೂಜಾರ್, ಬಸವರಾಜ್ ಗಚ್ಚಿ, ಮತ್ತು ಸಹ ನಿರ್ಮಾಪಕರಾದ ವಿನೋದ್ ರಾಮ್, ಹೊಳೆನರಸಿಪುರ್ ಮತ್ತು ಮಹೇಶ್ ಕುಮಾರ್ ಎಂ, ನಿರ್ಮಾಣದಲ್ಲಿ ಯುವ ಪ್ರತಿಭೆ ರಾಮ್ ಪ್ರಸಾದ್ ಹುಣಸೂರ, ಅವರ ನಿರ್ದೇಶನದಲ್ಲಿ’ ಈ ಚಲನಚಿತ್ರ ಮೂಡಿ ಬಂದಿದೆ.
ಇನ್ನು ಈ ಚಿತ್ರದಲ್ಲಿ ಹೀರೋ ಆಗಿ ಶಿರಸಿ ಮೂಲದ ಅರ್ಜುನ್‌ ನಗರ್ಕರ್‌ ಎಂಟ್ರಿಕೊಟ್ಟಿದ್ದಾರೆ.
ನಿಶಾ ಯಾಲಿನಿ ಈ ಸಿನಿಮಾದಲ್ಲಿಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರಿಕರಣವನ್ನು ಉಡುಪಿ, ಮಂಗಳೂರು ಹೊನ್ನಾವರ, ಮಂಕಿ, ಮುರುಡೇಶ್ವರಸುತ್ತಮುತ್ತ ರಮಣೀಯ ಲೊಕೇಶನ್ ಗಳಲ್ಲಿ ಕ್ಯಾಮೆರಾಮೆನ್ ಮನೋಹರ್, ರವಿರಾಮ್ ಸುಂದರವಾಗಿಚಿತ್ರೀಕರಿಸಿದ್ದಾರೆ.ಕಡಲೂರ ಕಣ್ಮಣಿ’ ಚಿತ್ರಕ್ಕೆ ನಿರ್ದೇಶಕರಾದ ರಾಮ್ಪ್ರಸಾದ್ ಅವರು ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

‘ಕಡಲೂರ ಕಣ್ಮಣಿ’ ಅಂದರೆ
ವಜ್ರ ಎಂದೂ ಅರ್ಥ.
ಚಿತ್ರಕಥೆ ಯುವ ಮನಸುಗಳ ಪ್ರೀತಿ ಪ್ರೇಮದ ಮೇಲೆ ಸಾಗುತ್ತದೆ.
ಸಿಟಿಯ ಹುಡುಗ ಕಡಲ ತೀರದಹುಡುಗಿಯ ಪ್ರೇಮ ಕಥೆಯೇ ಈ ಕಡಲೂರ ಕಣ್ಮಣಿ.ಈ ಸಿನಿಮಾದ ಕೊನೆಯ ಇಪ್ಪತ್ತು ನಿಮಿಷ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತದೆ. ಇದರ ಕಥೆ ಈಗಲೇ ಪೂರ್ತಿ ಹೇಳಲಾಗದು. ಚಿತ್ರದಲ್ಲಿ ಎಲ್ಲ ಕಲಾವಿದರು ತುಂಬಾ ಚಂದವಾಗಿ ನಟಿಸಿದ್ದಾರೆ.ಹಾಡುಗಳು ತುಂಬಾ ಚೆನ್ನಾಗಿಮೂಡಿಬಂದಿವೆ.ಸಂಕಲನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ನಿಶಿತ್ ಪೂಜಾರಿ ತಮ್ಮ ಕೈಚಳಕ ತೋರಿಸಿದ್ದಾರೆ.ಬಂಡೆ ಚಂದ್ರು ರವರ್ ಸಾಹಸ ಚಿತ್ರಕ್ಕಿದೆ ಫೈಟ್ ಗಳುತುಂಬಾ ಚೆನ್ನಾಗಿ ಮೂಡಿಬಂದಿವೆ.’ಕಡಲೂರ ಕಣ್ಮಣಿ’ಚಿತ್ರವನ್ನು ಡಿಎಸ್‌ಕೆ ಸಿನಿಮಾ’ಸ್ ಸಂಸ್ಥೆಯ Dr. ಸುನೀಲ್ ಕುಂಬಾರ್ ರವರು ವಿಶಾಲಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!