Ad image

‘ಲಿಲ್ಲಿ’ ಚಲನಚಿತ್ರ ಟೀಸರ್ ಬಿಡುಗಡೆ

Vijayanagara Vani
‘ಲಿಲ್ಲಿ’ ಚಲನಚಿತ್ರ ಟೀಸರ್ ಬಿಡುಗಡೆ

ಬೆಂಗಳೂರು : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಬೃಂದ ವಿದ್ಯಾ ಪಿಕ್ಚರ್ಸ್ ಬ್ಯಾನರ್‌ನ ಅಡಿಯಲ್ಲಿ ಹಗದೂರು ಅಶೋಕ್ ರೆಡ್ಡಿ,ಮುತ್ತುಸಂದ್ರ ವೆಂಕಟರಾಮ್ ಸತ್ಯವಾರ ನಾಗೇಶ್ ರವರು ಜಂಟಿಯಾಗಿ ನಿರ್ಮಿಸುತ್ತಿರುವ ‘ಲಿಲ್ಲಿ’ ಕನ್ನಡ ಚಲನಚಿತ್ರದ ಟೀಸರ್ ನ್ನು ಹೊಸಕೋಟೆ ಯಾದವ ಮಹಾಸಭಾ ಅಧ್ಯಕ್ಷ ಆನಂದಪ್ಪನವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು.
ಸಾಕಷ್ಟು ಯುವ ಪ್ರತಿಭಾವಂತ ಕಲಾವಿದರು ಗ್ರಾಮೀಣ ಮಟ್ಟದಲ್ಲಿದ್ದರೂ ಸೂಕ್ತ ಅವಕಾಶವಿಲ್ಲದೆ ಪ್ರತಿಭಾವಂಚಿತರಾಗುತ್ತಿದ್ದಾರೆ .ಅಂತವರನ್ನು ಗುರತಿಸಿ ಪ್ರೋತ್ಸಾಹಿಸುವ ಕಾರ್ಯ ಚಿತ್ರರಂಗದವರಿ0ದ ಆಗಬೇಕು. ಹೊಸ ಹೊಸ ಕಲಾವಿದರು ಚಿತ್ರರಂಗಕ್ಕೆ ಬರಬೇಕು. .ಅಂತಹದ್ದರಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಕೊಟ್ಟು ಚಲನಚಿತ್ರ ನಿರ್ಮಿಸಿದ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಧನ್ಯವಾದಗಳನ್ನು ತಿಳಿಸಿದರು. ಸಿನಿಮಾ ನಿರ್ದೇಶಕನೊಬ್ಬನ ಜೀವನದಲ್ಲಿ ನಡೆಯುವ ಒಂದು ಘಟನೆ ಇಡೀ ಚಿತ್ರರಂಗವನ್ನು ಭಯಭೀತಿಗೊಳಿಸುವ ಕಥಾಹಂದರವಿರುವ ‘ಲಿಲ್ಲಿ’ ಚಿತ್ರದಲ್ಲಿ ಸುರೇಶ್ ಸೂರ್ಯ, ಖುಷಿಗೌಡ, ಅನು, ಅಶೋಕ್ ರೆಡ್ಡಿ, ಎಂ ವಿ ಸಮಯ್, ಚಂದ್ರಶೇಖರ್, ನಾಗೇಶ್, ಭಕ್ತರಹಳ್ಳಿ ರವಿ, ರಾಧಾ, ವೆಂಕಟರಾಮ್, ಬೇಬಿ ಜಯಲಲಿತ ಮೊದಲಾದವರು ನಟಿಸಿದ್ದಾರೆ
ಆರ್.ಕೆ. ಗಾಂಧಿ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ‘ಲಿಲ್ಲಿ’ ಸಿನಿಮಾ ಗೆ ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಬಿ ಯುವರಾಜ್ ಛಾಯಾಗ್ರಹಣ, ಸಂಕಲನ, ಸೂರ್ಯಕಿರಣ್‌ರ ನೃತ್ಯ ಸಂಯೋಜನೆ ಇದ್ದು ಡಾ ಪ್ರಭು ಗಂಜಿಹಾಳ , ಡಾ ವೀರೇಶ ಹಂಡಗಿ ಅವರ ಪತ್ರಿಕಾ ಪ್ರಚಾರವಿದೆ. ಸಧ್ಯ ಚಿತ್ರಕ್ಕೆ ಸಂಬ0ಧಿಸಿದ ಎಲ್ಲ ಕಾರ್ಯ ಭರದಿಂದ ಸಾಗಿದ್ದು ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ನಿರ್ದೇಶಕ ಗಾಂಧಿ ತಿಳಿಸಿದ್ದಾರೆ.

- Advertisement -
Ad imageAd image
Share This Article
error: Content is protected !!
";