ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಕರ್ನಾಟಕದ ಜೆಡಿಎಸ್ ಪಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸದ್ಯ ಅವರ ಮುಂದೆ ಕರ್ನಾಟಕದ ಅಭಿವೃದ್ಧಿ ಅದರಲ್ಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವು ಬೇಡಿಕೆಗಳನ್ನು ಇಡಲಾಗಿದೆ.
ಬಹುಕಾಲದಿಂದಲೂ ಸರ್ಕಾರಗಳಿಂದ ನಿರ್ಲಕ್ಷ್ಯ, ಕಡೆಗಣನೆಗೆ ಒಳಗಾದ ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಕೈಗಾರಿಕೆಗಳು ಕಾರ್ಖಾನೆಗಳು ನಿರ್ಮಾಣವಾದರೂ ಇಲ್ಲಿಂದ ವಲಸೆ ಹೋಗುವುದು ತಪ್ಪುತ್ತದೆ. ಸ್ಥಳೀಯವಾಗಿ ಕ್ರಮೇಣ ಅಭಿವೃದ್ಧಿ ಆಗುತ್ತದೆ ಎಂಬ ಬೇಡಿಕೆಗಳು ವರ್ಷಗಳಷ್ಟು ಹಳೆಯ ಬೇಡಿಕೆ
ಈ ಬೇಡಿಕೆಗಳು ಇದೀಗ ಮತ್ತೆ ಮುನ್ನೆಲಡೆ ಬಂದಿವೆ. ಸದಾ ರೈತಪರ ಕಾಳಜಿ ವಹಿಸುವ ಮತ್ತು ಕೃಷಿ ಇಲಾಖೆ ನೀಡುವಂತೆ ಆಗ್ರಹಿಸಿದ್ದ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ‘ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ’ ನೀಡಲಾಗಿದೆ. ಈ ಬಗ್ಗೆ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡು, ಪ್ರಧಾನಮಂತ್ರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಈ ಪೋಸ್ಟ್‌ಗೆ ಕನ್ನಡಿಗರು ಕಾಮೆಂಟ್ ಮೂಲಕ ಜಲ್ವಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಕೈಗಾರಿಕಾ ವಲಯದ ಬಗ್ಗೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಉತ್ತರ ಕರ್ನಾಟಕಕ್ಕೆ ಕೈಗಾರಿಕೆ ಪ್ರಾಮುಖ್ಯತೆಗೆ ಒತ್ತಾಯ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ, ”ಕುಮಾರಸ್ವಾಮಿಯವರೇ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳು ಬರುವಲ್ಲಿ ನಿಮ್ಮ ಪಾತ್ರ ಮುಖ್ಯವಾಗಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಜನ ನೆನಪಿಟ್ಟಿದ್ದಾರೆ. ನೀವು ಅದೇ ಹಾದಿಯಲ್ಲಿ ಉತ್ತರ ಕರ್ನಾಟಕ ಜನರ ಹೃದಯಲ್ಲಿ ನೆಲೆಸಬೇಕು ಸಾರ್’ ಎಂದು ಕೇಳಿ ಕೊಂಡಿದ್ದಾರೆ.
ಕರ್ನಾಟಕದ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಈ ಖಾತೆಯಿಂದ ಅನುಕೂಲ ಆಗಬೇಕಿದೆ. ಅಲ್ಲಿಗೆ ಹೊಸ ಕೈಗಾರಿಕೆ ತಂದರೆ ನಾಡಿನ ಏಳಿಗೆಯ ಜೊತೆಗೆ ನಿಮ್ಮ ಪಕ್ಷದ ವಿಸ್ತರಣೆ ಆಗುವುದು. ಒಕ್ಕೂಟದ ಸಚಿವರು ಆಗಿದ್ದರೂ ನಾಡಿನ ಏಳಿಗೆಯನ್ನು ನೀವು ಮರೆಯುವುದಿಲ್ಲ ಎಂಬ ಭರವಸೆ ಈ ಭಾಗದ ಜನರಲ್ಲಿದೆ ಎಂದು ಬೇಡಿಕೆ ಇಟ್ಟಿದ್ದಾರೆ.
ಉತ್ತರದ ಜಿಲ್ಲೆಗಳಿಗೂ ಕೈಗಾರಿಕೆ ತನ್ನಿ: ಮನವಿ ರಾಜ್ಯದಿಂದ ಕೇಂದ್ರ ಮಂತ್ರಿ ಸ್ಥಾನ ಪಡೆದಿರುವ ನೀವು, ಸಿಕ್ಕಿರುವ ಈ ಅವಕಾಶ ಬಳಸಿಕೊಂಡು ಬೆಂಗಳೂರು ಬಿಟ್ಟು, ಕಲಬುರಗಿ, ಬೀದರ್,ಬೆಳಗಾವಿ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಉತ್ತರ ಕನ್ನಡದಲ್ಲಿ ಹೆಚ್ಚು ಕಾರ್ಖಾನೆಗಳ ಸ್ಥಾಪನೆಗೆ ಅನುಮೋದಿಸಿ. ಜೊತೆಗೆ ತುಮಕೂರು ಮತ್ತು ರಾಮನಗರದಂತ ನಗರಗಳಲ್ಲಿ ಕೈಗಾರಿಕೆ ತಂದು ಬೆಂಗಳೂರಿಗೆ ವಲಸೆ ತಪ್ಪಿಸಿಸಬೇಕು. ಹಾಗೆಯೇ ಮಂಡ್ಯ ಜಿಲ್ಲೆಗೆ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ನೆಟ್ಟಿಗರು ಕೇಳಿಕೊಂಡಿದ್ದಾರೆ.
ವಿದೇಶ ಬಂಡವಾಳ ಹೆಚ್ಚಿಸಲು ಒತ್ತಾಯ ಕರ್ನಾಟಕ ರಾಜ್ಯಕ್ಕೆ ವಿದೇಶ ಬಂಡವಾಳ ಹೂಡಿಕೆ ಹರಿದು ಬರುವಂತೆ ಮಾಡಬೇಕು. ನೀವು ಮತ್ತು ರಾಜ್ಯ ಕೈಗಾರಿಕೆ ಸಚಿವರಿಂದ ಇದೆಲ್ಲ ಸಾಧ್ಯತೆ ಎಂದು ಕನ್ನಡಿಗರು ಹಲವು ಬೇಡಿಕೆಗಳನ್ನು ನೂತನ ಸಚಿವ ಕುಮಾರಸ್ವಾಮಿ ಅವರ ಮುಂದಿಟ್ಟಿದ್ದಾರೆ. ಅಧಿಕಾರ ಸ್ವೀಕರಿಸುತ್ತಿದ್ದಂತೆ ದೆಹಲಿಯ ಕಚೇರಿ ಪೂಜೆ ನೆರವೇರಿಸಿದ್ದಾರೆ. ಕುಟುಂಬಸ್ಥರು ಈ ವೇಳೆ ಪಾಲ್ಗೊಂಡಿದ್ದರು, ಶುಭಹಾರೈಸಿದ್ದಾರೆ. ಕುಮಾರಸ್ವಾಮಿ ಸೇರಿದಂತೆ ಕರ್ನಾಟಕದ ಐವರು ಸಚಿವರು ಇನ್ನುಮುಂದೆ ದೆಹಲಿಯಲ್ಲಿ ಹಾಗೂ ತಮ್ಮ ಕ್ಷೇತ್ರದಲ್ಲಿ ಠಿಕಾಣಿ ಹೂಡಲಿದ್ದಾರೆ. ಈ ಸಂಸದರಿಂದ ಆಯಾ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಜನರು ನಿರೀಕ್ಷಿಸುತ್ತಿದ್ದಾರೆ.