ಯಾವ ವಸ್ತುಗಳನ್ನು ಫ್ರಿಡ್ಜ್ನಲ್ಲಿ ಹೇಗೆ ಸ್ಟೋರ್ ಮಾಡಿದರೆ ಹೆಚ್ಚು ಬಾಳಿಕೆ ಬರುತ್ತದೆಯೇ ಗೊತ್ತೇ

Vijayanagara Vani
ಯಾವ ವಸ್ತುಗಳನ್ನು ಫ್ರಿಡ್ಜ್ನಲ್ಲಿ ಹೇಗೆ ಸ್ಟೋರ್ ಮಾಡಿದರೆ ಹೆಚ್ಚು ಬಾಳಿಕೆ ಬರುತ್ತದೆಯೇ ಗೊತ್ತೇ

ನಾವು ಹಾಲಿನ ಉತ್ಪನ್ನಗಳನ್ನು ಫ್ರಿಡ್ಜ್ನಲ್ಲಿ ಸಾಕಷ್ಟು ಬಾರಿ ಸರಿಯಾಗಿ ಇಡದೆ ಅವುಗಳು ಬೇಗನೆ ಹಾಳಾಗುತ್ತದೆ, ಉದಾಹರಣೆ ಗೆ ಹಾಲು, ನಾವು ಹಾಲನ್ನು ಡೋರ್ತೆಗೆಯುವಾಗ ಸಿಗುವ ಕಂಪಾರ್ಟ್ನಲ್ಲಿ ಇಡುತ್ತೇವೆ, ಕೆಲವರು ಫ್ರೀಝರ್ನಲ್ಲಿ ಕೂಡ ಇಡುತ್ತಾರೆ, ಆದರೆ ಹಾಲನ್ನು ನಾವು ಸರಿಯಾಗಿ ಇಡದಿದ್ದರೆ ಹಾಲು ಹಾಳಾಗುತ್ತದೆ, ಹಾಗೆ ಇತರ ವಸ್ತುಗಳು ಕೂಡ ಅಷ್ಟೇ….

ಬನ್ನಿ ಹಾಲಿನ ಉತ್ಪನ್ನಗಳನ್ನು ಹೇಗೆ ಇಡಬೇಕು ಎಂದು ನೋಡೋಣ ಬನ್ನಿ: ಫ್ರಿಡ್ಜ್ನಲ್ಲಿ ಹಾಲನ್ನು ಎಲ್ಲಿಡಬೇಕು? ಯಾವುದೇ ಹಾಳಾದರೂ ಸರಿ ನೀವು ಅದನ್ನು ಒಳಗಡೆಯ ಶೆಲ್ಫ್ನಲ್ಲಿ ಇಡಬೇಕು, ಡೋರ್ನಲ್ಲಿ ಇಡಬೇಡಿ. ಏಕೆಂದರೆ ನಾವು ಡೋರ್ಆಗಾಗ ತೆಗೆಯುತ್ತೇವೆ ಅಲ್ವಾ, ಇದರಿಂದಾಗಿ ಹಾಲು ಬೇಗ ಹಾಳಾಗುವುದು. ಇದರಲ್ಲಿ ಸ್ಕಿಮ್ ಹಾಲಾದರೂ ಸರಿ ಪೂರ್ಣ ಹಾಲಾದರೂ ಸರಿ(ಕೆನೆಯಂಶವಿರುವ ಹಾಲು) ನೀವು ಹಾಲನ್ನು ರೀತಿ ಇಟ್ಟರೆ ಹಾಲು ಬೇಗನೆ ಹಾಳಾಗಲ್ಲ

ಹಾಲನ್ನು ಫ್ರೀಝರ್ನಲ್ಲಿ ಇಡಬಹುದೇ? ನೀವು ಹಾಲನ್ನು ಹೆಚ್ಚು ದಿನ ಇಟ್ಟು ಬಳಸಲು ಬಯಸಿದರೆ ನೀವು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ನೀವು ಫ್ರೀಝರ್ನಲ್ಲಿ ಇಡಬೇಕು. ಗ್ಲಾಸ್ ಅಥವಾ ಸ್ಟೀಲ್ಡಬ್ಬದಲ್ಲಿ ಇಡಬೇಡಿ. ನೀವು ಹಾಲನ್ನು ಫ್ರೀಝರ್ನಲ್ಲಿ ಮೂರು ತಿಂಗಳವರೆಗೆ ಇಡಬಹುದು. ಳಸುವ ಮುನ್ನ ಫ್ರೀಝರ್ನಿಂದ ತೆಗೆದು ಹೊರಗಡೆ ಇಡಿ. ಅದು ದ್ರವ ರೂಪಕ್ಕೆ ಬಂದಾಗ ಹಾಲನ್ನು ಬಳಸಬಹುದು. ಕೆನೆಯನ್ನು ಹೇಗೆ ಸಂಗ್ರಹಿಸಿಡುವುದು ಇದನ್ನು ನೀವು ಪ್ಲಾಸ್ಟಿಕ್ಡಬ್ಬದಲ್ಲಿ ಅಥವಾ ಐಸ್ಕ್ಯೂಬ್ಟ್ರೇನಲ್ಲಿ ಇಡಬಹುದು, ನೀವು ಇದನ್ನು ಫ್ರೀಝರ್ನಲ್ಲಿ ಬ್ಯಾಗ್ನಲ್ಲಿ ಕೂಡ ಇಡಬಹುದು. ರೀತಿ ಇಟ್ಟರೆ ಕೆನೆಯನ್ನು ನೀವು ತುಂಬಾ ದಿನಗಳವರೆಗೆ ಬಳಸಬಹುದು.

ಮೊಸರು ಹೇಗೆ ಸ್ಟೋರ್ಮಾಡಬೇಕು? ಮಜ್ಜಿಗೆಯನ್ನು ನೀವು ಫ್ರಿಡ್ಜ್ನಲ್ಲಿ ಇಡಬೇಕಾಗಿಲ್ಲ, ಆದರೆ ಹೆಚ್ಚು ದಿನಕ್ಕೆ ಬಳಸಲು ಬಯಸುವುದಾದರೆ ನೀವು ಫ್ರಿಡ್ಜ್ನಲ್ಲಿ ಇಡಬಹುದು. ನೀವು ಮಜ್ಜಿಗೆಯನ್ನು ಇಡುವಾಗ ಪಾತ್ರೆಯ ಬಾಯಿ ಮುಚ್ಚಿ ಇಡಿ, ಅಲ್ಲದೆ ಮಜ್ಜಿಗೆಗೆ ಸ್ವಲ್ಪ ಉಪ್ಪು ಹಾಕಿ ಇಟ್ಟರೆ ಒಳ್ಳೆಯದು. ರೀತಿ ನೀವು ಫ್ರೀಝರ್ನಲ್ಲಿ ಇಟ್ಟರೆ ಮೂರು ತಿಂಗಳವರೆಗೆ ಬಳಸಬಹುದು.

ಮಜ್ಜಿಗೆಯನ್ನು ಫ್ರಿಡ್ಜ್ನಲ್ಲಿ ಇಡುವುದು ಹೇಗೆ? ಮೊಸರನ್ನು ಕೂಡ ನೀವುಡ ಡಬ್ಬದಲ್ಲಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಇಡಬೇಕು. ಫ್ರಿಡ್ಜ್ನಲ್ಲಿ ಮಜ್ಜಿಗೆ ತುಂಬಾ ಸಮಯ ಬಾಳಿಕೆ ಬರುತ್ತದೆ. ಮಜ್ಜಿಗೆಯನ್ನು ಕೂಡ ಸ್ವಲ್ಪ ಉಪ್ಪು ಹಾಕಿ ಇಡಿ. ಯೋಗರ್ಟ್ಹೇಗೆ ಬಳಸಬೇಕು? ನೀವು ಯೋಗರ್ಟ್ಅನ್ನು ಓಪನ್ ಮಾಡಿದ್ದರೆ ವಾರದವರೆಗೆ ಇಟ್ಟು ಬಳಸಬಹುದು. ಇಲ್ಲದಿದ್ದರೆ ಎರಡು ವಾರದವರೆಗೆ ಇಟ್ಟು ಬಳಸಬಹುದು. ಇನ್ನು ಹೆಚ್ಚು ಯೋಗರ್ಟ್ ಇದ್ದರೆ ಅದನ್ನು ಫ್ರೀಝರ್ನಲ್ಲಿ ಇಟ್ಟರೆ ಒಳ್ಳೆಯದು. ಆದರೆ ಯೋಗರ್ಟ್ಅನ್ನು ಫ್ರೀಝ್ಮಾಡಿದಾಗ ಅದರ ರುಚಿ ಸ್ವಲ್ಪ ಕಡಿಮೆಯಾಗುವುದು. ಇದನ್ನು ಸ್ಮೂತಿ ಮಾಡಲು ಬಳಸಬಹುದು. ಕಾಟೇಜ್ಚೀಸ್ಸ್ಟೋರ್ ಮಾಡುವುದು ಹೇಗೆ? ನೀವು ಚೀಸ್ಓಪನ್ ಮಾಡಿದ್ದರೆ 7 ದಿನಗಳ ಒಳಗೆ ಮುಗಿಸುವುದು ಒಳ್ಳೆಯದು, ಇನ್ನು ಹೆಚ್ಚು ಸಮಯ ಬಳಸುವುದಾದರೆ ಫ್ರೀಝ್ ಮಾಡಿದರೆ ರುಚಿ ಕಡಿಮೆಯಾಗುತ್ತೆ, ಆದರೆ ಇದನ್ನು ನೀವು 7-10 ದಿನಗಳವರೆಗೆ ಮುಗಿಸುವುದು ಒಳ್ಳೆಯದು.

ವಿಧಾನದಲ್ಲಿ ನೀವು ಹಾಲಿನ ಉತ್ಪನ್ನ ಸಂಗ್ರಹಿಸಿ ಇಟ್ಟರೆ ಅವುಗಳನ್ನು ಹೆಚ್ಚು ಸಮಯ ಇಟ್ಟು ಬಳಸಬಹುದು. ಇನ್ನು ನೀವು ಹಾಲಿನ ಉತ್ಪನ್ನ ರೀತಿ ಸಂಗ್ರಹಿಸಿ ಇಟ್ಟರೆ ಹಣ ಉಳಿತಾಯ, ಆರೋಗ್ಯ ಕೂಡ ಹಾಳಾಗುವುದಿಲ್ಲ.

WhatsApp Group Join Now
Telegram Group Join Now
Share This Article
error: Content is protected !!