(ರಾಜಸ್ಥಾನ) ಮೌಂಟ ಆಬು-27: ಆರೋಗ್ಯಕರ ಮತ್ತು ಸಂತೋಷದ ಸಮಾಕ್ಕಾಗಿ ಆಧ್ಯಾತ್ಮಿಕ ಸಬಲಿಕರಣ, ಮಾಧ್ಯಮದ ಪಾತ್ರ ಎಂಬ ವಿಷಯದ ಮೆಲೆ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ, ಇಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರ ಮೌಂಟ ಆಬುದಲ್ಲಿರುವ ಆನಂದ ಸರೋವರದಲ್ಲಿ ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ರಾಜ್ಯ ಸಚಿವ ಡಾ. ಎಲ್. ಮುರುಗನ ಅವರು ದೀಪ ಪ್ರಜ್ವಲಿಸಿ ಮಾಡಿದರು. “ ಮೀಡಿಯ ಭಾರತದ ಪ್ರಗತಿಗಾಗಿ ಪ್ರಮಖ ಪಾತ್ರವಹಿಸುತ್ತದೆ. ನಿಜ ಸುದ್ದಿ ಪ್ರಸಾರ ಕ್ಕಿಂತ ಫೆಕ ನ್ಯಜ ಬೆಗಾ ಎಲ್ಲಕಡೆ ಪ್ರಸಾರವಗುತ್ತದೆ. ಮಾಧ್ಯಮ ಮಿತ್ರರು ಸುದ್ದಿಯನ್ನು ಪರಿಕ್ಷಿಸಿದ ನಂತರ ಪ್ರಕಟಿಸಬೇಕು ಎಂದು ಹೆಳಿದರು. ನಿಜ ಸಮಾಚಾರಗಳಿಂದ ಆರೊಗ್ಯಕರ ಮತ್ತು ಸುಖಿ ಸಮಾಜದ ನೀರ್ಮಾಣವಾಗುವುದು ಎಂದು.’
ಸಂಸ್ಥೆಯ ಆಡಳಿತಾಧಿಕಾರಿಣಿ ದಾದಿ ರತನಮೋಹಿನಿ, ಛತ್ತಿಸ ಘಡ ರಾಯಾಪುರ ಕೆ. ಓ. ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಾನಿಸಿಂಗ ಪರಮಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬ್ರಿಜ್ ಮೋಹನ, ಮಾಧ್ಯಮ ವಿಭಾಗದ ಉಪಾಧ್ಯಕ್ಷೆ ಬಿ.ಕೆ.ಶಿಲು, ರಾಷ್ಟ್ರಿಯ ಸಂಯೋಜಕಿ ಬಿ.ಕೆ. ಸರಳಾ, ದೆಹಲಿಯ ಪಿ.ಏ.ವಿ. ಪ್ರದಾನ ನಿರ್ದೇಶಕ ಕುಲದಿಪಸಿಂಗ್ ಧಾಟವಾಲಿಯ, ಹಾಗೂ ಇತರರು ವೇದಿಕೆಯಲ್ಲಿದ್ದರು. ಮಾದ್ಯಮ ವಿಭಾಗದ ಅಧ್ಯಕ್ಷರಾದ ಕರುಣಾಭಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾಂತನು ಅವರು ಸ್ವಾಗತಿಸಿದರೆ, ಜಯಪುರದ ವಲಯ ಸಂಯೊಜಕಿ ಚಂದ್ರಕಲಾ ನಿರುಪಿಸಿದರು.
ಭಾರತ ಮತ್ತು ನೇಪಾಳದಿಂದ ಸಾವಿರಾರು ಪ್ರೀಂಟ್, ಎಲೇಕ್ಡ್ರಾನಿಕ್ ಸಂಬಂಧಿತ ಸಂಪಾದಕರು, ಮೀಡಿಯಾ ಪ್ರೋಫೆಸರ, ಪತ್ರರ್ಕರು, ್ತ ಮಾದ್ಯಮ ಜನಪ್ರತಿನಿಧಿಗಳ, ಕರ್ನಾಡಕದಿಂದ 150 ಮಾಧ್ಯಮ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಮೂರಿ ದಿನಗಳ ಈ ಸಮ್ಮೇಳನದಲ್ಲಿ, ಮಾದ್ಯಮ ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಪ್ರದರ್ಶಕ, ಆಧ್ಯಾತ್ಮಿಕ ಶಕ್ತಿಯೊಂದಿಗೆ ಆಂತರಿಕ ಶಕ್ತಿಯ ಸಶಕ್ತಿಕರಣ, ಸಾಮಾಜಿಕ ಮಾಧ್ಯಮದ ಧನಾತ್ಮಕ ಮತ್ತು ಋಣಾತ್ಮಕ ಆಯಾಮಗಳು, ಆಧ್ಯಾತ್ಮಿಕ ಮತ್ತು ಕೃತಕ ಬುದ್ಧಿಮತ್ತೆಯ ಮೀಲನ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳೊಂದಿಗೆ ವ್ಯವಹಿರಿಸುವುದು ಮುಂತಾದ ವಿಷಯಗಳ ಮೇಲೆ ವಿಚಾರಗೊಷ್ಟಿ, ಕಮ್ಮಟಗಳು ನಡೆಯಲಿವೆ. ಮಾನಸಿಕ ಸಶಕ್ತಿಕರಣಕ್ಕಾಗಿ ರಾಜಯೋಗದ ತರಗತಿಯಲ್ಲಿ ಆತ್ಮಾನುಭುತಿ, ಪರಮಾತ್ಮನ ಜೊತೆ ಮೀಲನ, ಮಾನಸಿಕ ಶಾಂತಿಯ ವಿಷಯಗಳು ಸೆರಿಸಲಾಗಿದೆ.