ಸಿರುಗುಪ್ಪ ಮಾರ್ಚ್28. ತಾಲೂಕಿನ ಬಗ್ಗುರು ಕ್ರಾಸ್ ಬಳಿಇರುವ ಬಸವೇಶ್ವರ ಬೇಕರಿಯ ಶಟ್ಟರ್ ಕಳ್ಳತನ ಮಾಡಲು ಬಂದಿದ್ದ,ಕಳ್ಳರ ಗ್ಯಾಂಗೋಂದು ಬೇಕರಿ ಮಾಲಿಕನಿಂದಲೆ ಬೈಕ್ ಕಸಿದುಕೊಂಡು ಹೊದಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಬೋಲೆರೋ ಪಿಕಪ್ ವಾಹನದಲ್ಲಿ ಶುಕ್ರವಾರ ಬೆಳಗಿನ ಜಾವ 4: 30 ಸೂಮಾರಿಗೆ ಬಂದಿದ್ದ ಐದು ಜನ ಕಳ್ಳರ ತಂಡಒಂದು
ಬೇಕರಿಯ ಬಾಗಿಲು ಮುರಿಯುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಬೇಕರಿಯ ಮಾಲೀಕ ಹೇಮನಗೌಡ ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಕಳ್ಳರನ್ನು ವಿಚಾರಿಸಲು ಮುಂದಾದಾಗ, ನೀನು ಸರಿಯಾದ ಸಮಯಕ್ಕೆ ಬಂದಿದ್ದೀಯಾ, ನಿನ್ನ ದ್ವಿಚಕ್ರವಾಹನದ ಬೀಗದ ಕೈ ಕೊಡು ಎಂದು ಕನ್ನಡದಲ್ಲಿಯೇ ಮಾತನಾಡಿಬೇಕರಿ ಮಾಲೀಕನಿಂದ ದ್ವಿಚಕ್ರ ವಾಹನದ ಬೀಗದ ಕೈ ಕಸಿದುಕೊಂಡ ಕಳ್ಳರು ಬೈಕ್ ಹಾಕಿಕೊಂಡು ತಾವು ತಂದಿದ್ದ ಬೊಲೆರೋ ಪಿಕಪ್ ವಾಹನದೊಂದಿಗೆ ಆದೋನಿ ರಸ್ತೆಯ ಕಡೆಗೆ ತೆರಳಿದ್ದಾರೆ.
ಬೇಕರಿ ಮಾಲೀಕ ಹೇಮನಗೌಡ ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ವಿ.ಜಿ, ಉಪ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಕರಿ ಮಾಲೀಕನಿಂದ ಮಾಹಿತಿ ಪಡೆದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗಿದ್ದು, ಬೇಕರಿ ಮಾಲೀಕನಿಂದ ಮಾಹಿತಿ ಪಡೆದಿದ್ದೇವೆ, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.