7ನೇ ವೇತನ ಆಯೋಗ ಸೇರಿ ಹಲವು ಬಜೆಟ್ ಆದೇಶಗಳಿಗೆ ಸರ್ಕಾರದ ಸಿದ್ಧತೆ

Vijayanagara Vani
7ನೇ ವೇತನ ಆಯೋಗ ಸೇರಿ ಹಲವು ಬಜೆಟ್ ಆದೇಶಗಳಿಗೆ  ಸರ್ಕಾರದ ಸಿದ್ಧತೆ

 ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಒಂದು ದಿನ ಮೊದಲು ವರದಿ ಸರ್ಕಾರ ಕೈ ಸೇರಿದೆ. ಹೀಗಾಗಿ ಮಾದರಿ ನೀತಿ ಸಂಹಿತೆ ಸಡಿಲಗೊಂಡ ಕೂಡಲೇ 2024-25ನೇ ಸಾಲಿನ ಬಜೆಟ್ ಘೋಷಣೆಗಳಿಗೆ ಜಾರಿಯಾಗುವಂತೆ ಸರ್ಕಾರಿ ಆದೇಶಗಳ ಸುರಿಮಳೆಗೆ ಸಿದ್ದರಾಮಯ್ಯ ಆಡಳಿತ ಸಿದ್ಧತೆ ನಡೆಸಿದೆ.

ಈ ಹಿಂದೆಯೇ ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲೇಖಿಸಿ ಸರ್ಕಾರ ನೌಕರರನ್ನು ಕಟ್ಟಿ ಹಾಕಿದೆ. ಆದರೆ, ನೀತಿ ಸಂಹಿತೆ ಸಡಿಲಗೊಳ್ಳುತ್ತಿದ್ದಂತೆ ಸರ್ಕಾರಿ ನೌಕರರು ಒತ್ತಡ ಹಾಕಲಿದ್ದಾರೆ. ಹೀಗಾಗಿಯೇ ಸರ್ಕಾರ ಕೂಡ ಸಕಲ ಸಿದ್ಧತೆ ನಡೆಸಿದೆ. ಕೆಲವೇ ದಿನಗಳಲ್ಲಿ ಅದೂ ಕೂಡ ನಡೆಯಲಿದೆ.
ಲೋಕಸಭೆಯ ನೀತಿ ಸಂಹಿತೆ ಮಾರ್ಚ್ 16 ರಿಂದ ಪ್ರಾರಂಭವಾಗಿದೆ. ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಗೆ ಜೂನ್ 3 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯ ವಿಧಾನ ಪರಿಷತ್ ಚುನಾವಣಾ ಫಲಿತಾಂಶಗಳು ಜೂನ್ 6 ರಂದು ಹೊರಬೀಳುತ್ತವೆ.

ಜೂನ್ 15 ಕ್ಕೆ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! “ಸರ್ಕಾರದ ಎಲ್ಲಾ ಆದೇಶಗಳನ್ನು ಸಿದ್ಧಪಡಿಸುವಂತೆ ನಾವು ತಿಳಿಸಿದ್ದೇವೆ. ಜೂನ್ 15 ರ ಮೊದಲು ಎಲ್ಲಾ ಆದೇಶಗಳನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಎಲ್‌ಕೆ ಅತೀಕ್ ಅವರನ್ನು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ. ಎಲ್‌ಕೆ ಅತೀಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಹೌದು.
ಸಿದ್ದರಾಮಯ್ಯ ಅವರು 2024-25ರ ಬಜೆಟ್‌ನಲ್ಲಿ ನೀಡಿದ ಭರವಸೆಗಳನ್ನು ಜಾರಿಗೆ ತರಲು 337 ಸರ್ಕಾರಿ ಆದೇಶಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ. “ನಮ್ಮ ವಿನಂತಿಯ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯ ಸಡಿಲಿಕೆಯನ್ನು ಮಾಡುತ್ತದೆ. ಇದು ಕೇಸ್ ಟು ಕೇಸ್ ಆಧಾರದ ಮೇಲೆ ಇರುತ್ತದೆ” ಎಂದು ಎಲ್‌ಕೆ ಅತೀಕ್ ಹೇಳಿದ್ದಾರೆ.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಯಾರೇ ಸಚಿವರಾದರೂ ಅಧಿಕೃತ ಸಭೆಗಳ ಅಧ್ಯಕ್ಷತೆ ವಹಿಸಲು ಚುನಾವಣಾ ಸಮಿತಿಯ ಒಪ್ಪಿಗೆ ಅಗತ್ಯ. ಯಾವುದೇ ಹೊಸ ಘೋಷಣೆ, ಹೊಸ ಆದೇಶಗಳನ್ನು ನೀಡುವುದು, ಹೊಸ ಟೆಂಡರ್‌ಗಳನ್ನು ಕರೆಯುವುದು, ಹೊಸ ಗುತ್ತಿಗೆಗಳನ್ನು ನೀಡುವುದು, ಹೊಸ ಕೆಲಸದ ಆದೇಶಗಳನ್ನು ವಹಿಸಿಕೊಡುವುದು ಮತ್ತು ಹೊಸ ಯೋಜನೆಗಳನ್ನು ಮಂಜೂರು ಮಾಡುವುದು ಮಾದರಿ ನೀತಿ ಸಂಹಿತೆಯ ಕಾರಣದಿಂದಾಗಿ ತಡೆಯಾಗುತ್ತವೆ” ಎಂದು ಹೇಳಿದ್ದಾರೆ. ಇನ್ನು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದಿರುವ ಕಾರಣ ಇಷ್ಟು ದಿನ ಚುನಾವಣಾ ಕರ್ತವ್ಯದಲ್ಲಿದ್ದ ಅನೇಕ ಸರ್ಕಾರಿ ನೌಕರರು ತಮ್ಮ ಕೆಲಸಕ್ಕೆ ಹಿಂತಿರುಗುತ್ತಾರೆ. ಇದು ಆಡಳಿತ ಯಂತ್ರವನ್ನು ಮತ್ತೆ ಟ್ರಾಕ್‌ಗೆ ತರಲು ಸಹಾಯ ಮಾಡುತ್ತದೆ. ಇದಾದ ನಂತರ ಸರ್ಕಾರ ಹಲವು ಆದೇಶಗಳನ್ನು ಜಾರಿಗೆ ತರಲಿದೆ. ಆದರೆ, ರಾಜ್ಯ ಕ ಕೇಡರ್‌ನ ಸುಮಾರು 50-60 ಐಎಎಸ್ ಅಧಿಕಾರಿಗಳನ್ನು ಭಾರತದಾದ್ಯಂತ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸರ್ಕಾರಿ ನೌಕರರು ತಮ್ಮ ತಮ್ಮೆ ಕೆಲಸಗಳಿಗೆ ಹಿಂತಿರುಗಿನ ನಂತರ, ಮಾದರಿ ನೀತಿ ಸಂಹಿತೆ ಸಡಿಲವಾದ ಬಳಿಕ ಎಲ್ಲಾ ಆದೇಶಗಳು ಜಾರಿಯಾಗುವ ಸಂಭವವಿದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.

WhatsApp Group Join Now
Telegram Group Join Now
Share This Article
error: Content is protected !!