ಆರೋಗ್ಯಕರ ಆಯುಷ್ ಪಾನಕ ಪರಿಚಯ: ಚಿಂಚಾ ಪಾನಕ ವಿತರಣೆ

Vijayanagara Vani
ಆರೋಗ್ಯಕರ ಆಯುಷ್ ಪಾನಕ ಪರಿಚಯ: ಚಿಂಚಾ ಪಾನಕ ವಿತರಣೆ

ರಾಯಚೂರು,ಮೇ.22 ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಮೇ.22 ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆರೋಗ್ಯಕರ ಆಯುಷ್ ಪಾನಕ ಪರಿಚಯದಲ್ಲಿ “ಚಿಂಚಾ ಪಾನಕ” ಸಾರ್ವಜನಿಕರಿಗು ಮತ್ತು ಸಿಬ್ಬಂದಿಗಳಿಗೆ ವಿತರಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಸುಭಾಷ ಸಂಪಗಾವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ವೇಳೆ ಚಿಂಚಾ ಪಾನಕ ತಯಾರಿಸುವ ವಿಧಾನದ ಬಗ್ಗೆ ಪಂಚ ಕರ್ಮ ಘಟಕದ ವೈದ್ಯರಾದ ಡಾ.ನವೀನ ಎನ್.ಡಿ, ಅವರು ಮಾತನಾಡಿ, ಹುಣಸಿ ಹಣ್ಣು 100 ಗ್ರಾಂ, ಬೆಲ್ಲದ ಪುಡಿ 4೦೦ ಮಿಲಿ, ಜೀರಿಗೆ ಪುಡಿ 1ಗ್ರಾಂ, ಕಾಳು ಮೆಣಸಿನ ಪುಡಿ 5 ಗ್ರಾಂ, ಸೈಂದವ ಲವಣ 5 ಗ್ರಾಂ ತೆಗೆದುಕೊಂಡು ಹುಣಸಿ ಹಣ್ಣು ಅಗತ್ಯ ಪ್ರಮಾಣ ನೀರಿನಲ್ಲಿ ಇಡೀ ರಾತ್ರಿ ನೆನಸಿಡಬೇಕು, ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸಕಿ ಸೋಸಿಕೋಬೇಕು ಅದನ್ನು ಒಂದು ಬಾಟಲಿನಲ್ಲಿ ತುಂಬಿಸಕೊಳ್ಳಬೇಕು, 2 ರಿಂದ ೦3 ಲಿಟರ್ ನೀರಿಗೆ ಮೇಲೆ ತಿಳಿಸಿದ ಎಲ್ಲಾ ಮಿಶ್ರಣಗಳನ್ನು ಸೇರಿಸಿ ಕಲಿಸಬೇಕು. ಪ್ರತಿ ವ್ಯಕ್ತಿ 5ರಿಂದ 1೦೦ ಮಿ.ಲಿ ಪಾನಕವನ್ನು ಸೇವಿಸಬೇಕು ಎಂದು ಮಾಹಿತಿ ನೀಡಿದರು.

ನಂತರ ಡಾ.ಬಸವರಾಜ್ ಕಟ್ಟಿ ಅವರು ಚಿಂಚಾ ಪಾನಕವು ಮಾನವನ ಜೀರ್ಣ ಕ್ರಿಯೇಗೆ, ಮಲಬದ್ಧತೆಗೆ ಅತ್ಯುತಮ ಪಾನಕವಾಗಿದೆ. ಇದು ದೇಹದ ಉಷ್ಣವನ್ನು ಕಡಿಮೆ ಮಾಡುವುದರದೊಂದಿಗೆ ಬಾಯರಿಕೆ ನೀಗಿಸುವುದು. ಇದು ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳಿಂದ ಅತ್ಯುತಮ ಆರೋಗ್ಯಕರ ಪಾನಕವನ್ನು ತಯಾರಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಮೊಹಮ್ಮದ ಅಮೀನುದ್ದಿನ್ ಅಸ್ಲಂ, ಡಾ.ರಾಜೇಂದ್ರ ಬೆನಕಿನಾಳ್, ಡಾ.ಪೂಜಾ, ಸಹಾಯಕ ಆಡಳಿತ ಅಧಿಕಾರಿ ಅಸ್ಮಾಬೇಗಂ,ಕಚೇರಿ ಅಧೀಕ್ಷಕ ನರಸಪ್ಪ, ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಆಯುಷ್ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

WhatsApp Group Join Now
Telegram Group Join Now
Share This Article
error: Content is protected !!