ಭಾರತದಲ್ಲಿ 1950 ಮತ್ತು 2015 ರ ನಡುವೆ ಹಿಂದೂ ಜನಸಂಖ್ಯೆಯ ಶೇಕಡಾ 7.82 ರಷ್ಟು ಕಡಿಮೆಯಾಗಿದೆ, ಆದರೆ ಮುಸ್ಲಿಮರ ಸಂಖ್ಯೆ ಶೇಕಡಾ 43.15 ರಷ್ಟು ಹೆಚ್ಚಾಗಿದೆ ಎಂದು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ ವರದಿಯಲ್ಲಿ (EAC-PM) ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
‘ಧಾರ್ಮಿಕ ಅಲ್ಪಸಂಖ್ಯಾತರ ಪಾಲು: ಕ್ರಾಸ್-ಕಂಟ್ರಿ ಅನಾಲಿಸಿಸ್ (1950-2015)’ ಎಂಬ ಶೀರ್ಷಿಕೆಯ ಪತ್ರಿಕಾ ವರದಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಜೈನರ ಜನಸಂಖ್ಯೆ 1950 ರಲ್ಲಿ ಶೇಕಡಾ 0.45 ರಿಂದ 2015 ರಲ್ಲಿ ಶೇಕಡಾ 0.36 ಕ್ಕೆ ಇಳಿದಿದೆ ಎಂದು ವರದಿ ಮಾಡಿದೆ.
78.06ಕ್ಕೆ ಕುಸಿದ ಹಿಂದೂ ಜನಸಂಖ್ಯೆ 1950ರಲ್ಲಿ ಶೇ 84.68 ರಷ್ಟಿದ್ದ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯಲ್ಲಿ 2015 ರಲ್ಲಿ ಶೇಕಡಾ 78.06 ಕ್ಕೆ ಕುಸಿದಿದೆ (7.82 ರಷ್ಟು ಕುಸಿತ). 1950 ರಲ್ಲಿ ಮುಸ್ಲಿಂ ಜನಸಂಖ್ಯೆಯು ಒಟ್ಟಾರೆ ಜನಸಂಖ್ಯೆಯ ಶೇಕಡಾ 9.84 ರಷ್ಟಿತ್ತು ಮತ್ತು 2015 ರಲ್ಲಿ ಶೇಕಡಾ 14.09 ಕ್ಕೆ ಏರಿಕೆ ಕಂಡಿದೆ ಎಂದು ಇಎಸಿ-ಪಿಎಂ ಸದಸ್ಯ ಶಮಿಕಾ ರವಿ ನೇತೃತ್ವದ ತಂಡವು ಸಿದ್ಧಪಡಿಸಿದ ವರದಿಯಲ್ಲಿ ಹೇಳಲಾಗಿದೆ. ಕ್ರಿಶ್ಚಿಯನ್ ಜನಸಂಖ್ಯೆಯ ಪಾಲು ಶೇಕಡಾ 2.24 ರಿಂದ 2.36 ಕ್ಕೆ ಏರಿಕೆ ಕಂಡಿದೆ. 1950 ಮತ್ತು 2015 ರ ನಡುವೆ 5.38 ಶೇಕಡಾ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಸಿಖ್ ಜನಸಂಖ್ಯೆಯ ಪಾಲು 1950 ರಲ್ಲಿ ಶೇಕಡಾ 1.24 ರಿಂದ 2015 ರಲ್ಲಿ ಶೇಕಡಾ 1.85 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಪಾರ್ಸಿ ಜನಸಂಖ್ಯೆಯ ಪಾಲು ಶೇಕಡಾ 85 ರಷ್ಟು ಕುಸಿತವನ್ನು ಕಂಡಿದೆ, 1950 ರಲ್ಲಿ ಪಾಲು 0.004 ರಿಂದ 2015 ರಲ್ಲಿ ಶೇ 0.03 ಕ್ಕೆ ಇಳಿಕೆಯಾಗಿದೆ.
ಸಮಾಜದಲ್ಲಿ ವೈವಿಧ್ಯತೆಯನ್ನು ಬೆಳೆಸಲು ಅನುಕೂಲಕರ ವಾತಾವರಣವಿದೆ” ಎಂದು ಈ ಅಂಕಿ ಅಂಶಗಳು ಸೂಚಿಸುತ್ತದೆ, ತಳಮಟ್ಟದ ಮೂಲಕ ಪೋಷಣೆಯ ವಾತಾವರಣ ಮತ್ತು ಸಾಮಾಜಿಕ ಬೆಂಬಲವನ್ನು ಒದಗಿಸದೆ ಸಮಾಜದ ಹಿಂದುಳಿದ ವರ್ಗಗಳಿಗೆ ಉತ್ತಮ ಜೀವನ ಫಲಿತಾಂಶಗಳನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಪಂಗಡದ ಪಾಲು ಹೆಚ್ಚಿದೆ ಮತ್ತು ಅಲ್ಪಸಂಖ್ಯಾತ ಜನಸಂಖ್ಯೆಯು ಆತಂಕಕಾರಿಯಾಗಿ ಕುಗ್ಗಿದೆ. ಆದರೆ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿರುವುದು ಗಮನಾರ್ಹವಾಗಿದೆ.