ಸಿಹಿ ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ. ಸ್ಪೆಷಲ್ ಸಂರ‍್ಭಗಳಲ್ಲಿ ಸಿಹಿ ಹಂಚಿಕೊಳ್ಳುವುದು ಮಾಮೂಲಿ. ಆದರೆ ನೀವು ಬರಿ ದಿನಗಳಲ್ಲಿಯೂ ಮನೆಯಲ್ಲಿ ಈ ತರಹದ ಸಿಹಿಯನ್ನು ಮಾಡಿ ನಿಮ್ಮ ಮನೆಯವರಿಗೆ ತಿನ್ನಿಸಿ ನೋಡಿ, ಮತ್ತೆ ಮತ್ತೆ ಬೇಕು ಅನ್ನೋದು ಗ್ಯಾರಂಟಿ. ಅದರಲ್ಲೂ ಸಿಹಿಯನ್ನು ಇಷ್ಟ ಪಡುವ ಮಕ್ಕಳಿಗೆ ಚಾಕಲೇಟ್ ಕೊಡಿಸುವ ಬದಲು ಈ ರೀತಿ ಸುಲಭ ಲಾಡು ಮಾಡಿ ಕೊಡಬಹುದು. ಹಾಗಾದ್ರೆ ಕ್ವಿಕ್ ಆಗಿ ಲಾಡು ಮಾದುವುದು ಹೇಗೇ? ನೋಡೋಣ ಬನ್ನಿ.
ಲಾಡು ಮಾದಲು ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1 ಕಪ್ ತುಪ್ಪ -1/2 ಕಪ್ ಸಕ್ಕರೆ – 1ಕಪ್ ಒಣ ದ್ರಾಕ್ಷೆ ( ಅಗತ್ಯ ಇದ್ದಲ್ಲಿ) ಮಾಡುವ ವಿಧಾನ ಒಂದು ದಪ್ಪ ತಳದ ಪಾತ್ರೆಯನ್ನು ಗ್ಯಾಸ್ ಮೇಲಿಡಿ. ಅದಕ್ಕೆ ತುಪ್ಪವನ್ನು ಹಾಕಿ. ಅದು ಸ್ವಲ್ಪ ಬಿಸಿ ಆದ ನಂತರ ಬಿಸಿಯಾದ ತುಪ್ಪಕ್ಕೆ ಗೋದಿಹಿಟ್ಟನ್ನು ಹಾಕಿ. ನಂತರ ಸಣ್ಣ ಉರಿಯಲ್ಲಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ತಳ ಹಿಡಿಯದಂತೆ, ಸ್ದು ಹೋಗದಂತೆ ಎಚ್ಚರಿಕೆಯಿಂದ ಕೈಯಾಡಿಸಿ.
ಈಗ ಸಕ್ಕರೆಯನ್ನು ಪುಡಿ ಮಾಡಿ ಇಟ್ಟು ಕೊಳ್ಳಿ. ಗೋಧಿ ಹಿಟ್ಟು ಹುರಿದ ಮೇಲೆ ಅದು ಬಿಸಿ ಇರುವಾಗಲೇ ಸಕ್ಕರೆ ಪುಡಿಯನ್ನು ಪಾತ್ರೆಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ಸ್ವಲ್ಪ ಹೊತ್ತು ಆರಲು ಬಿಡಬೇಕು. ನಂತರ ಇದನ್ನು ಬೇಕಾದ ಅಳತೆಯಲ್ಲಿ ಉಂಡೆಗಳನ್ನಾಗಿ ಮಾಡಿಕೊಳ್ಳ ಬೇಕು. ಅಗತ್ಯ ವಿದ್ದಲಿ ಮಧ್ಯೆ ಒಣ ದ್ರಾಕ್ಷಿ, ಗೋಡಂಭಿ, ಬಾದಾಮಿ ಚೂರುಗಳನ್ನು ಇಟ್ಟರೆ ಲಾಡು ತಿನ್ನುವಾಗ ಬಾಯಿಗೆ ಡ್ರೈ ಫ್ರೂಟ್ಸ್ ಸಿಗುತ್ತದೆ. ಅಮ್ಮ ಹೇಳಿಕೊಟ್ಟ ಈ ಹೆಲ್ದೀ ಸ್ವೀಟ್ ರೆಸಿಪಿ ಮಾಡಿ ನೋಡಿ!