Ad image

ಉತ್ತರ ಕರ್ನಟಕದ ಸ್ಪೆಷಲ್  ಕೆಂಪು ಚಟ್ನಿ ಮತ್ತು  ರೊಟ್ಟಿ ಮುಟ್ಟಿಗಿ  ಹೀಗೆ ಮಾಡಿ ನೋಡಿ……!

Vijayanagara Vani
ಉತ್ತರ ಕರ್ನಟಕದ ಸ್ಪೆಷಲ್  ಕೆಂಪು ಚಟ್ನಿ ಮತ್ತು  ರೊಟ್ಟಿ ಮುಟ್ಟಿಗಿ  ಹೀಗೆ ಮಾಡಿ ನೋಡಿ……!

 

ನಮ್ಮ ಉತ್ತರ ಕರ್ನಟಕದ ಅವರಿಗೆ ಏನೂ ಇಲ್ಲಂದ್ರು ನಡಿಯುತ್ತೆ ಅದರೆ ಜೋಳ ಮತ್ತು ಸಜ್ಜೆ ಹಾಗೂ ಬೇಳೆ ಕಾಳುಗಳಿಂದ ಮಾಡುವ ಆಹಾರ ತುಂಬ ಮುಖ್ಯ ವಾಗುತ್ತದೆ     ಅದೇರಿತಿ  ರುಚಿಕರ ಮತ್ತು ಅರೋಗ್ಯಕರ ವಾದ ಆಹಾರದಲ್ಲಿ ರೋಟ್ಟಿ ಮುಟ್ಟಿಗಿ ಕೂಡ ಓಂದು ಸೂಮರು 15- 20 ವರ್ಷಗಳ ಹಿಂದೆ ಅಮ್ಮ ರೋಟ್ಟಿ ಮಾಡುತ್ತಿದ್ರೆ  ಅಜ್ಜಿ ಮುಟ್ಟಿಗಿ ಮಾಡು ಕೊಡೊರು ಆ ರುಚಿಯ ಮುಂದೆ ಎಲ್ಲವು ಶುನ್ಯ .ಈಗ ಜೊಳದ ಮುಟ್ಟಿಗಿ ಹೇಗೆ ಮಾಡೊದು ನೋಡನ ಬನ್ನಿ …..

ಮೊದಲು ಜೋಳವನ್ನು ತೋಳೆದುಕೊಂಡು ಬಿಸಿಲಿಗೆ ಆರಿಸಿಕೋಂಡು  ಬಿಸಿಗೆಂಡು ಬರಬೇಕು,  ನಂತರ  ಒಂದು ದೋಡ್ಡ ಪಾತ್ರೆ ತೆಗೆದುಕೋಂಡು  4 ಕಪ್ಪು  ಹಿಟ್ಟನ್ನು  ಪಾತ್ರೆಯಲ್ಲಿ ಜರಡಿ ಮಾಡಿ ಕೋಳ್ಳಬೇಕು

ಒಂದು ಕಪ್ಪು  ನೀರು ಬಿಸಿಮಾಡಿ ಕೋಳ್ಳಬೇಕು ..ಕುದಿಸಿದ ನೀರನ್ನು ಹಿಟ್ಟಿನೋದಿಗೆ  ಚನ್ನಾಗಿ ಕಲಿಸಿಕೋಂಳ್ಳಬೇಕು ನೀರು ಕಡಿಮೆ ಬಂದರೆ ಸ್ವಲ್ಪ ಸ್ವಲ್ಪ ತಣ್ಣಿರು ಹಾಕಿಕೋಂಡು  ಚಪಾತಿ ಹಿಟ್ಟಿನ ಹದಕ್ಕೆ ಚನ್ನಾಗಿ ನಾದಿಕೋಳ್ಳಬೇಕು  (ಕಲಿಸಿಕೋಳ್ಳಬೇಕು) ಚನ್ನನಾಗಿ ಕಲಸಿದ ನಂತರ ರೋಟ್ಟಿಯ ಹಂಚನ್ನು ಒಲೆಯಮೇಲೆ ಹಿಟ್ಟು ಚನ್ನಾಗಿ ಕಾಸಿಕೋಳ್ಳಬೇಕು  ನಂತರ ರೋಟ್ಟಿಯನ್ನು  ಕೋಣಗೆ / (ಚಾಪಾತಿ ಮಾಡುವ ಮಣೆ)   ಯಲ್ಲಿ ಸ್ವಲ್ಪ ಜೋಳದ ಹಿಟ್ಟನ್ನು ಹಾಕಿ  ನಂತರ ಕಲಸಿ ಹಿಟ್ಟನ್ನು ತೆಗೆದುಕೊಂಡು   ದಪ್ಪಗೆ ಮಣೆಮೇಲೆ ತಟ್ಟಬೇಕು ನಂತರ ಮಲೆಲನೆ ತೆಗೆದುಕೋಂಡು  ಕಾದಿರುವ ಹಂಚಿನ ಮೇಲೆ ಹಾಕಿ  1 ನಿಮಿಷ  ಬಿಟ್ಟು ಒಂದು ಬಟ್ಟಯ ಸಹಯದಿಂದ  ರೋಟ್ಟಿಯ ಮೇಲೆ ನೀರಿನಿಂದ ಹೋರಿಸಬೇಕು ನಂತರ ರೋಟ್ಟಿ ಬೇಂದನಂತರ ತಟ್ಟಯೋಳಗೆ ತೆಗೆದುಕೋಳ್ಳಬೇಕು ಹೀಗೆ ಮೂರ ರಿಂದ ನಾಲ್ಕು ರೋಟ್ಟಿಗಳನ್ನು ಮಾಡಿಕೋಳ್ಳಬೇಕು

ನಂತರ ಕೆಂಪು ಚಟ್ನಿಮಾಡುವ ವೀದಾನ

6  ಹುಳ್ಳಗಡ್ಡಿ (ಈರುಳ್ಳಿ)  ತೆಗೆದುಕೋಂಡು ದಪ್ಪಹಚ್ಚಿಕೋಳ್ಳಬೇಕು ನಂತರ ಕಾಡಯಿಗೆ ಸಲ್ಪ ಎಣ್ಣೆಹಾಕಿ ಹುಳಗಡ್ಡಿಯನ್ನು ಹಾಕಬೇಕು  ಸಣ್ಣ  ಹುರಿಯಲ್ಲಿ 15 ರಿಂದ 25 ನಿಮಿಷ ದವರೆಗೆ ಹುರಿಯುತ್ತಾ ಅದಕ್ಕೆ ಒಣಕಾರದಪುಡಿ,ಹಾಕಿ ಹಾಗೆ  ಒಂದು ಚೂರು ಬೆಲ್ಲ ,ಒಂದು ಟೆಬಲ್ ಸ್ಪೂನ್ ಜೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಆಕಾಬೇಕು ಕರಿಬೇವು ಆಕಿ ಚೆನ್ನಾಗಿ ತಿರಿಗಿಸಿಕೋಂಡು  ಹಿಳಿಸಬೇಕು ತಣ್ಣಗಾದ ನಂತರ ಮಿಕ್ಸಿಜಾರಿಗೆ ಹಾಕಿ ರುಬ್ಬಿ ಕೊಳ್ಳಬೇಕು   ನಂತರ ಒಂದು ಬಟ್ಟಲಿಗೆ  ತೆಗೆದುಕೊಳ್ಳಬೇಕು

ನಂತರ ಜೋಳದ ಮುಟ್ಟಿಗಿ ಮಾಡುವ ವಿದಾನ

 ಆದೇ ಮಿಕ್ಸಿ ಜಾರಿಗೆ ಸ್ವಲ್ಪ ರುಬ್ಬಿಕೋಮಡಿರುವ ಕೇಂಪು ಚಟ್ನಿ , ಸ್ವಲ್ಪ ಊಂಚೆ (ಹುಣುಸೆಕಾಯಿ) ಚಣ್ನಿ  ,ಹಾಗೂ 3ಟೇಬಲ್  ಸ್ಪೂನ್ ತುಪ್ಪ 5ರಿಂದ 6 ಎಸಳು ಬೆಳ್ಳುಳ್ಳಿ   ಮತ್ತು ದಪ್ಪ ಮಾಡಿ ಹಿಟ್ಟುಕೋಂಡಿರುವ ರೊಟ್ಟಿಯನ್ನು  ಹಾಕಿ ತರಿ ತರಿ ಯಾಗಿ ರುಬ್ಬಿಕೊಳ್ಳಬೆಕು  ನಂತರ ಒಂದು ಬಟ್ಟಲಿಗೆ ಹಾಕಿ ಹುಂಡೆಗಳಾನ್ನಗಿ ಮಾಡಿ ತಿನ್ನಾಬೆಕು…

Share This Article
error: Content is protected !!
";