ಶ್ರೀಲಂಕಾ: ಸೆ.23: ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ರಾಷ್ಟ್ರಪ್ರಶಸ್ತಿ ವಿಜೇತರಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಕಾಸರವಳ್ಳಿ ಅವರಿಗೆ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಜಾಫ್ನಾ ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವದ 10ನೇ ಆವೃತ್ತಿಯಲ್ಲಿ ವಿಶೇಷ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಯನ್ನು ಉತ್ಸವದ ನಿರ್ದೇಶಕ ಅನೋಮಾ ರಾಜಕಾರುಣಾ ಅವರು ಜಾಫ್ನಾ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ನೀಡಿದರು.
ಕಾಸರವಳ್ಳಿ ಅವರು ಭಾರತೀಯ ಚಲನಚಿತ್ರಕ್ಕೆ ನೀಡಿದ ವಿಶೇದ ಕೊಡುಗೆಗಾಗಿ 14 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದರಲ್ಲಿನ ಪ್ರಮುಖ ಚಿತ್ರಗಳು ಘಟಶ್ರದ್ಧ, ತಬರನ ಕತೆ, ತಾಯಿಸಾಹೇಬಾ, ಮತ್ತು ದ್ವೀಪ ಸೇರಿವೆ. ಇನ್ನು ಈ ಉತ್ಸವದಲ್ಲಿ 18 ದೇಶಗಳ 60 ಚಲನಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಎಸ್ ವಿಸಿಸಿ ಹಾಗೂ ಭಾರತೀಯ ರಾಯಭಾರಿ ಕಚೇರಿ, ಪ್ರತೀ ವರ್ಷ ಈ ಚಿತ್ರೋತ್ಸವವನ್ನು ಆಯೋಜಿಸುತ್ತಿದ್ದು ಪ್ರಪಂಚದಾದ್ಯಂತ ಸಾಮಾಜಿಕ ಸಂದೇಶ, ಸಾಂಸೃತಿಕ, ವಿಶೇಷ ಮನ್ನಣೆ ಪಡೆದ ಚಲನಚಿತ್ರಗಳನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ ಎಂದರು.