ಕೊಪ್ಪಳ ಏಪ್ರಿಲ್ 09 ಉಪಲದಿನ್ನಿ ಗ್ರಾಮದ ಅಪರಾಧಿಗಳಾದ 1) ಹನಮಪ್ಪ @ ಗಿಣಿಗೇರಪ್ಪ ತಂದೆ ಬಸಪ್ಪ ಕಾಸನಕಂಡಿ, 2) ಬಸವರಾಜ ತಂದೆ ಹನಮಪ್ಪ ಕಾಸನಕಂಡಿ, 3) ಅನ್ನಪೂರ್ಣವ್ವ ಗಂಡ ಬಸವರಾಜ ಕಾಸನಕಂಡಿ 4) ಪಾರ್ವತೆವ್ವ ಗಂಡ ಶೇಖರಪ್ಪ ಕಾಸನಕಂಡಿ ಇವರು ಜಮೀನುಗಳ ಮಧ್ಯದಲ್ಲಿರುವ ದಾರಿಯ ವಿಷಯದ ಬಗ್ಗೆ ವೈಶ್ಯಮ್ಯ ಸಾಧಿಸಿ ಆರೋಪಿತರು ಮೃತ ಈರಪ್ಪ ಈತನಿಗೆ ಬಡಿಗೆಯಿಂದ ಹೊಡೆದು, ಕೈ ಮುಷ್ಠಿ ಮಾಡಿ ಗುದ್ದಿ ಕೊಲೆ ಮಾಡಿದ ಅಪರಾಧ ಸಾಭಿತಾಗಿದೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಈ ಅಪರಾಧಿಗಳಿಗೆ 5 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ತಲಾ 5000 ರೂಪಾಯಿ ದಂಡ ವಿಧಿಸಿರುತ್ತಾರೆ.
ಬೇವೂರು ಪೋಲಿಸ್ ಠಾಣೆ ವ್ಯಾಪ್ತಿಯ ಉಪಲದಿನ್ನಿ ಸೀಮಾದಲ್ಲಿ ಪರ್ಯಾದಿದಾರ ಶೇಖರಪ್ಪ ಈತನ ಮಗನಾದ ಮಹಾಂತೇಶ ಈತನು ಹೊಲದಲ್ಲಿ ಹಾಲನ್ನು ಹಿಡಿದುಕೊಂಡು ಹೊಲದಿಂದ ಸೈಕಲ್ ತೆಗೆದುಕೊಂಡು ಹಿರೇವಂಕಲಕುಂಟಾದ ಡೈರಿಗೆ ಹಾಕಲು ಬರುವ ಕಾಲಕ್ಕೆ ಅದೇ ವೇಳೆಗೆ ಅಪರಾಧಿಗಳು ಬಂದವರೇ ಮಹಾಂತೇಶನಿಗೆ ನಮ್ಮ ಹೊಲದ ಬದುವಿನ ಮೇಲೆ ಯಾಕೆ ಹೋಗುತ್ತಿ ಇಲ್ಲಿ ದಾರಿ ಇಲ್ಲಾ ಅಂದವರೆ ಅವನಿಗೆ ಅವಾಚ್ಯವಾಗಿ ಬೈದಾಡಿ ಒಮ್ಮಿಂದೊಮ್ಮೆ ಅಪರಾಧಿ ಬಸವರಾಜ ಈತನು ಮಹಾಂತೇಶನಿಗೆ ಬಡಿಗೆಯಿಂದ ಬಡೆದಿದ್ದು ಆಗ ಜಗಳ ಬಿಡಿಸಲು ಬಂದ ಸಂತೋಷ ಈತನಿಗೆ ಅಪರಾಧಿಗಳಾದ ಮಲ್ಲವ್ವ, ಅನ್ನಪೂರ್ಣವ್ವ, ಪತ್ರೆವ್ವ ಇವರು ಗಟ್ಟಿಯಾಗಿ ಹಿಡಿದುಕೊಂಡಾಗ ಅಪರಾಧಿ ಹನಮಪ್ಪ @ ಗಿಣಿಗೇರಪ್ಪ ಮತ್ತು ಬಸವರಾಜ ಇವರು ಬಡಿಗೆಯಿಂದ ಬಡಿದಿದ್ದು, ನಂತರ ಪರ್ಯಾದಿ ಶೇಖರಪ್ಪ ಪರ್ಯಾದಿಯ ಅಣ್ಣ ಈರಪ್ಪ ಇವರು ಜಗಳ ಬಿಡಿಸಲು ಹೋದಾಗ ಪರ್ಯಾದಿಯ ಅಣ್ಣ ಈರಪ್ಪನನ್ನು ಕೊಲೆ ಮಾಡುವ ಉದ್ದೇಶದಿಂದ ಅಪರಾಧಿ ಹನಮಪ್ಪ @ ಗಿಣಿಗೇರಪ್ಪ ಈತನು ಗಟ್ಟಿಯಾಗಿ ಹಿಡಿದುಕೊಂಡಾಗ ಅಪರಾಧಿ ಬಸವರಾಜ ಈತನು ಬಡಿಗೆಯಿಂದ ಮೃತ ಈರಪ್ಪನ ಮೈಕೈಗೆ ಹೊಡೆದಿದ್ದು, ಅಲ್ಲದೇ ಅಪರಾಧಿ ಹನಮಪ್ಪ @ ಗಿಣಿಗೇರಪ್ಪ ಈತನು ಕೂಡಾ ಕೈ ಮುಷ್ಠಿ ಮಾಡಿ ಗುದ್ದಿ ಈರಪ್ಪನನ್ನು ಕೊಲೆ ಮಾಡಿದ್ದು ಇರುತ್ತದೆ. ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 54/2014, ಕಲಂ: 143, 147, 148, 341, 323, 324, 504, 302 ಸವಾ 149 ಭಾ.ದಂ.ಸಂ. ಅಡಿಯಲ್ಲಿ ಹಿಂದಿನ ತನಿಖಾಧಿಕಾರಿಗಳಾದ ನಾಗರಾಜ ಕಮ್ಮಾರ ಪಿ.ಐ ಇವರು ತನಿಖೆಯಲ್ಲಿ ಆರೋಪಗಳು ಸಾಭಿತಾಗಿದ್ದರಿಂದ ಅಪರಾಧಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಉಪಲದಿನ್ನಿ ಗ್ರಾಮದ ಅಪರಾಧಿಗಳಾದ 1) ಹನಮಪ್ಪ @ ಗಿಣಿಗೇರಪ್ಪ ತಂದೆ ಬಸಪ್ಪ ಕಾಸನಕಂಡಿ, 2) ಬಸವರಾಜ ತಂದೆ ಹನಮಪ್ಪ ಕಾಸನಕಂಡಿ, 3) ಅನ್ನಪೂರ್ಣವ್ವ ಗಂಡ ಬಸವರಾಜ ಕಾಸನಕಂಡಿ, 4) ಪಾರ್ವತೆವ್ವ ಗಂಡ ಶೇಖರಪ್ಪ ಕಾಸನಕಂಡಿ ಇವರ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ದಿ: 09-04-2025 ರಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಚಂದ್ರಶೇಖರ ರವರು, ಅಪರಾಧಿಗಳಿಗೆ 5 ವರ್ಷ ಸಾಧಾ ಜೈಲು ಶಿಕ್ಷೆ ಹಾಗೂ ತಲಾ ರೂ. 5,000 ಗಳ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲ, ನಾಗರಾಜ ಆಚಾರ್, ಸವಿತಾ ಎಂ ಶಿಗ್ಲಿ, ಅಂಬಣ್ಣ ಟಿ, ಮತ್ತು ಬಂಡಿ ಅಪರ್ಣಾ ಎಂ ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ, ವಾದ ಮಂಡಿಸಿರುತ್ತಾರೆ. ಹಾಗೂ ಷಣ್ಮುಖಪ್ಪ ಸಿಹೆಚ್‌ಸಿ-11 ಬೇವೂರು ಪೊಲೀಸ್ ಠಾಣೆ ಇವರು ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.