ಬಳ್ಳಾರಿ : ಜೂ 06 ಹುಟ್ಟು ಹಬ್ಬದ ದಿನದಂದು ದುಂದುವೆಚ್ಚ ಮಾಡಿ ಹಣವನ್ನು ಪೋಲು ಮಾಡಬೇಡಬಾರದು, ವಿಶೇಷ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾಧ್ಯಕ್ಷ ಕುರಟ್ಟಿ ರಾಜಣ್ಣ ತಿಳಿಸಿದರು.
ಸಸಿ ನೆಡುವು ಮೂಲಕ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡ ರಾಜಣ್ಣ ವಿಶ್ವ ಪರಿಸರ ದಿನಾಚರಣೆಯನ್ನು ಸಹ ಆಚರಿಸಿ, ಮಾತನಾಡಿ, ಪಟಾಕಿ, ಬ್ಯಾನರ್ ಎಂದು ದುಂಧುವೆಚ್ಚ ಮಾಡದೆ ಸಾಮಾಜಕ್ಕೆ ಉಪಯೋಗವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಜವಬ್ಧಾರಿಯತ ನಾಗರಿಕರಾಗಿ ಮಾದರಿಯಾಗಬೇಕೆಂದು ವೇದಿಕೆಯ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿ ಚಂದ್ರಣ್ಣ ಮಾತನಾಡಿ, ಸದಾ ಕಾಯಕವೇ ಕೈಲಾಸ ಎಂದು ನಂಬಿಕೊಂಡು ತನ್ನ ಸ್ವಂತ ಕಾಲಮೇಲೆ ನಿಂತು ಇನ್ನು ನೂರಾರು ಜನಕ್ಕೆ ಕೆಲಸ ಕೊಡಬೇಕೆಂಬ ದೊಡ್ಡ ಗುರಿಯನ್ನಿಟ್ಟುಕೊಂಡ ಅವರ ಗುರಿ ಈಡೇರಲಿ ಭವಿಷ್ಯದಲ್ಲಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಕೆ, ಜೀವನದಲ್ಲಿ ಏಳ್ಗೆಯನ್ನು ಕಂಡು ಬೇರೆಯವರ ದಾರಿಗೆ ಹೂವಾಗಲಿ ಎಂಬುದು ನನ್ನ ಆಸೆ ಎಂದು ರಾಜಣ್ಣಗೆ ದೇವರು ಇನ್ನಷ್ಟು ಆಯುಷ್ಯ, ಐಶ್ಚರ್ಯ ಮತ್ತು ಆರೋಗ್ಯವನ್ನು ಕರುಣಿಸಿ ಇನ್ನಷ್ಟು ಕಾಲ ಸಮಾಜಸೇವೆ ಮಾಡುವ ಅವಕಾಶವನ್ನು ಮಾಡಿಕೊಡಲಿ ಎಂದು ದೇರವಲ್ಲಿ ಪ್ರಾರ್ಥಿಸಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ವೇದಿಕೆಯ ಮತ್ತೊಬ್ಬ ಪದಾಧಿಕಾರಿ ಕಟ್ಟಿಗೆ ಸೂರಿ ಮಾತನಾಡಿ, ನನ್ನ ಏಳು ಬೀಳುಗಳಲ್ಲಿ ಜೊತೆಯಾದವರು ಹಲವರು ಅವರಲ್ಲಿ ರಾಜಣ್ಣನು ಸಹ ವಿಶೇಷ, ಗೆಲುವಿನಲ್ಲಿ ಸಂತಸಗೊಂಡು ತಪ್ಪಿ ನಡೆದಾಗ ಕಟುವಾಗಿ ಖಂಡಿಸಿ ಹತಾಶನಾದಾಗ ಜೊತೆಗಿದ್ದು ಧೈರ್ಯ ಹೇಳಿ ಸಹಾಯ ಮಾಡಿದ ಗೆಳೆಯ ರಾಜಣ್ಣನಿಗೆ ಹುಟ್ಟು ಹಬ್ಬದ ಶುಭಾಷಯಗಳು ಎಂದರು.
ಕುರುಗೋಡು ತಾಲೂಕು ಅಧ್ಯಕ್ಷ ಮೃತ್ಯುಂಜಯ ಮಾತನಾಡಿ, ರವಿಯ ಕಿರಣಗಳು ರಾಜನಂತೆ ಬಂದು ಪ್ರಕಾಶತೆಯನ್ನು ಸೂಚಿಸುವಂತೆ ಮುಂಜಾನೆಯ ಶುಭನುಡಿಗಳಿಗೆ ಸಾಕ್ಷಿಯಾಗಿ ಅದರೊಂದಿಗೆ ಕವಿತೆಗಳ ಸಾಲುಗಳು ಜೊತೆಯಾಗಿ ಶುಭಸಂಜೆಯ ಬರಹಗಳ ಸ್ವಾದಕ್ಕೆ ಆಗೊಮ್ಮೆ ಈಗೊಮ್ಮೆ ಕಚಗುಳಿ ಇಡುವ ನಗೆ ಬರಹಕ್ಕೆ ಶುಭರಾತ್ರಿಯಲ್ಲಿ ಸಾಹಿತ್ಯದ ಗೊಂಚಲು ಮೇಳೈಸುತ್ತಿರಲು ಬದುಕಿನ ವಾಸ್ತವತೆ ಮತ್ತು ಅನುಭವಗಳನ್ನು ಚಿಕ್ಕದಾಗಿ ಚೊಕ್ಕವಾಗಿ ಅರ್ಥಪೂರ್ಣವಾಗಿ ಬರೆಯುತ್ತಿರಲು ಪ್ರೀತಿಯ ರಾಜಣ್ಣನಿಗೆ ಜನ್ಮದಿನದ ಸಂದರ್ಭವು ಇಂದು ಜೊತೆಗೂಡಿದೆ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹನುಮಂತಪ್ಪ, ಗುಡಿಗಂಟಿ ಹನುಮಂತ ಮತ್ತು ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗಮಿಸಿ ಶುಭಕೋರಿದರು. ನೂರಾರು ಕಾರ್ಯಕರ್ತರು ಹಾಜರಿದ್ದರು.