ಲೋಕಸಭೆ ಚುನಾವಣೆ- ಮತದಾನ ಮಾಡಿದ ಸಚಿವ ಬೋಸರಾಜು

Vijayanagara Vani
ಲೋಕಸಭೆ ಚುನಾವಣೆ- ಮತದಾನ ಮಾಡಿದ ಸಚಿವ ಬೋಸರಾಜು

ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಿಸಲು ತಪ್ಪದೇ ಎಲ್ಲರು ಮತದಾನ ಮಾಡಿ- ಎನ್ಎಸ್ ಬೋಸರಾಜು ದೇಶದ ಪ್ರಜಾಪ್ರಭುತ್ವ ಹಬ್ಬದ ದೊಡ್ಡ ಚುನಾವಣೆಯಾದ ಲೋಕಸಭಾ ಚುನಾವಣೆಯ ನಿಮಿತ್ತ ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ಮತಗಟ್ಟೆಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಮತದಾನ ಮಾಡಿದರು.

- Advertisement -
Ad imageAd image

ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ದೇಶದಲ್ಲಿ ಬಲಿಷ್ಠ ಪ್ರಜಾಪ್ರಭುತ್ವ ಕಟ್ಟಲು ಕೈಜೋಡಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಯಚೂರು ಲೋಕ ಸಭೆ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರನಾಯಕ, ಮುಖಂಡರಾದ ರುದ್ರಪ್ಪ ಅಂಗಡಿ, ಮಹಲಿಂಗ ಪಾಟೀಲ್, ಪ್ರವೀಣ ಪ್ರಭು ಶೆಟ್ಟರ್ ಸೇರಿದಂತೆ ಅನೇಕರು ಇದ್ದರು

Share This Article
error: Content is protected !!
";