Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಅಬಕಾರಿ ಇಲಾಖೆಯಿಂದ ದಾಳಿ: ರೂ.3.15 ಲಕ್ಷ ಮೌಲ್ಯದ ಓಪಿಯಮ್ ಪೌಡರ್ ಜಪ್ತಿ

ಕೊಪ್ಪಳ, ಅಕ್ಟೋಬರ್ 24: ಅಬಕಾರಿ ಜಂಟಿ ಆಯುಕ್ತರು (ಜಾರಿ& ತನಿಖೆ) ಹೊಸಪೇಟೆ ವಿಭಾಗ, ಹೊಸಪೇಟೆ ರವರು ಮತ್ತು ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರಸ್ಥಾನ ಬೆಳಗಾವಿ ರವರ ನಿರ್ದೇಶನದ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ ಕೊಪ್ಪಳ ಇವರ ಸೂಚನೆಯಂತೆ ಅಕ್ಟೋಬರ್ 22 ರಂದು ಮಧ್ಯಾಹ್ನ 01:20 ಗಂಟೆಯ ಸಮಯದಲ್ಲಿ ಕುಷ್ಟಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-50 ರ ವಣಗೇರಿ ಟೋಲ್ ಸಮೀಪದ ನ್ಯೂ ಮಹದೇವ ರಾಜಸ್ಥಾನಿ ಹೋಟೆಲ್ ಮೇಲೆ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ/ಸ್ಥಳ ಪರಿಶೀಲನೆಗಾಗಿ ನೀಲಮ್ಮ ಗಲಗಲಿ, ಅಬಕಾರಿ ಉಪ ನಿರೀಕ್ಷಕರು-2 ರವರು ಅಬಕಾರಿ ಸಿಬ್ಬಂದಿಗಳಾದ ಮೋಹನ ಕುಮಾರ, ಅಬಕಾರಿ ಮುಖ್ಯ ಪೇದೆ ಹಾಗೂ ಕನಕಪ್ಪ ಬಾಲಪ್ಪನವರ್ ಅಬಕಾರಿ ಪೇದೆ ರವರೊಂದಿಗೆ ದಾಳಿ ನಡೆಸಲಾಯಿತು.
ದಾಳಿ ಸಂದರ್ಭ ಒಂದು ತಗಡಿನ ಮೇಲ್ಛಾವಣಿ ಹೊಂದಿದ್ದ ಕಟ್ಟಿಗೆ ಶೇಖರಣಾ ಕೊಠಡಿಯಲ್ಲಿ ಎರಡು ಪ್ಲಾಸ್ಟಿಕ್ ಬಕೆಟ್‌ಗಳಿದ್ದು ಅದರಲ್ಲಿ ಕಪ್ಪು ಬಣ್ಣದ ಬಕೆಟ್ ಮುಚ್ಚಳ ತೆಗೆದಿದ್ದು ಅದರಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಗಂಟೊಂದಿದ್ದು ಅದನ್ನು ಬಿಚ್ಚಿ ನೋಡಲಾಗಿ ಓಪೀಯಮ್ ನಂತಹ ಪುಡಿ ಪದಾರ್ಥವಿರುವುದು ಕಂಡು ಬಂದಿದೆ. ನಂತರ ಇನ್ನೊಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಬಕೆಟ್ ಇದ್ದು, ಅದರ ಮುಚ್ಚಳ ಶೀಲ್ಡಿಂದ ಕೂಡಿದ್ದು ಇರುತ್ತದೆ.
ಮುಂದುವರೆದು ಅಬಕಾರಿ ಉಪ ನಿರೀಕ್ಷಕರ ರೆಡ್ ಮಿ-14 ಪ್ರೋ ಪ್ಲಸ್ ಮೊಬೈಲ್ ನಲ್ಲಿ ಸಿಬ್ಬಂದಿಯಾದ ಮೋಹನ ಕುಮಾರ ಅಬಕಾರಿ ಮುಖ್ಯ ಪೇದೆ ರವರ ಸಹಾಯದಿಂದ ಫೋಟೋ/ವೀಡಿಯೋ ಚಿತ್ರೀಕರಣದೊಂದಿಗೆ ಶೋಧನೆಯನ್ನು ಪ್ರಾರಂಭಿಸಿ ಮುದ್ದೇಮಾಲನ್ನು ತೂಕ ಮಾಡಿ ನೋಡಲಾಗಿ 1) ಮೈಲ್ ಮ್ಯಾಕ್ಸ್ ಇಂಜಿನ್ ಆಯಿಲ್ ಕಪ್ಪು ಬಣ್ಣದ ಬಕೆಟ್ ಸಹಿತ ತೂಗಿ ನೋಡಲಾಗಿ 3.990 ಕೆ.ಜಿ ತೂಕ ಇದ್ದು ಬಕೆಟ್ ತೆಗೆದು ಕೇವಲ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಗಂಟನ್ನು ತೂಗಿ ನೋಡಲಾಗಿ 2.990 ಕೆ.ಜಿ ತೂಕ ಇರುವುದು ಅದರ ಮೌಲ್ಯ ರೂ.1,57,500/- ಆಗಿದ್ದು ಕಂಡು ಬಂದಿರುತ್ತದೆ. ನಂತರ 2) ತಿರುಮಲ ಕರ್ಡ್ ಹೆಸರಿನ ಬಿಳಿ ಬಣ್ಣದ ಬಕೆಟ್ ಸಹಿತ ತೂಗಿ ನೋಡಲಾಗಿ 3.480 ಕೆ.ಜಿ ತೂಕ ಇದ್ದು ಬಕೆಟ್ ತೆಗೆದು ಕೇವಲ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದ ಗಂಟನ್ನು ತೂಗಿ ನೋಡಲಾಗಿ 2.990 ಕೆ.ಜಿ ತೂಕ ಇದ್ದು ಅದರ ಮೌಲ್ಯ ರೂ.1,57,500/- ಕಂಡು ಬಂದಿರುತ್ತದೆ. (ಈ ಎರಡು ಜಪ್ತಿ ಪಡಿಸಿದ ತೂಕ ಒಟ್ಟು 5.980 ಕೆ.ಜಿ ಓಪೀಯಮ್ ಪೌಡರ್ ಅದರ ಒಟ್ಟು ಮೌಲ್ಯ ರೂ.3,15,000/- ಇದ್ದು) ನಂತರ ಮಾನ್ಯ ನ್ಯಾಯಾಧೀಶರ ಮುಂದೆ ಇನ್ವೆಂಟರಿ ಮಾಡಿಸಲು ಇಲಾಖಾ ಮುದ್ರೆ ಸಂಖ್ಯೆ:510 ರಿಂದ ಶೀಲ್ ಮಾಡಲಾಯಿತು ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಶ್ರೂಷಾಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ: ನಿಷೇಧಾಜ್ಞೆ ಜಾರಿಅಬಕಾರಿ ಇಲಾಖೆಯಿಂದ ದಾಳಿ: ರೂ.3.15 ಲಕ್ಷ ಮೌಲ್ಯದ ಓಪಿಯಮ್ ಪೌಡರ್ ಜಪ್ತಿಬಳ್ಳಾರಿ: ಅಕ್ಟೋಬರ್ 26 ಮತ್ತು 27 ರಂದು ಮೋಕಾ ಹಾಗೂ ಯರ್ರಗುಡಿ ಭಾಗದಲ್ಲಿ ವಿದ್ಯುತ್ ವ್ಯತ್ಯಯಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ 2026: ಬಳ್ಳಾರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ, ಶೇಕಡಾ 86.50 ರಷ್ಟು ಮತದಾನ ದಾಖಲುಜೂಜಾಟ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ  ಪ್ರಕರಣ ದಾಖಲು ಅಸುಂಡಿ ಗ್ರಾಮದಲ್ಲಿ ಜಪ್ತಿ ಮಾಡಲಾದ 445 ಕ್ವಿಂಟಾಲ್ ಜೋಳ: ಅಕ್ಟೋಬರ್ 28 ರಂದು ಬಹಿರಂಗ ಹರಾಜುಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರಿಗೆ ನೆರವು: ಮಾನವೀಯತೆ ಮೆರೆದ ಎಮ್ ಎಸ್ ಸಿದ್ದಪ್ಪ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಲು ಅಣಕು ಯುವ ಸಂಸತ್ ಆಯೋಜನೆ : ಪ್ರಭುಲಿಂಗ ಕವಳಿಕಟ್ಟಿಮಾಜಿ ಸೈನಿಕರಿಗೆ ಸ್ಪರ್ಶ್ ಸಹಾಯತಾ ಶಿಬಿರ ಆಯೋಜನೆಅಧಿಕಾರಿಗಳು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿ : ಬೇಳೂರು ಗೋಪಾಲಕೃಷ್ಣ