Ad image

ಆಡಿಕೊಂಡವರಿಗೆ ಬಾಯಿಗೆ ತಕ್ಕ ಉತ್ತರ ಕೊಟ್ಟ ಪ್ರಾಚಿ..!

Vijayanagara Vani
ಆಡಿಕೊಂಡವರಿಗೆ ಬಾಯಿಗೆ ತಕ್ಕ ಉತ್ತರ ಕೊಟ್ಟ ಪ್ರಾಚಿ..!

ಉತ್ತರ ಪ್ರದೇಶದ ಬೋರ್ಡ್ ಪರಿಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣಳಾಗಿದ್ದ ಪ್ರಾಚಿ ನಿಗಮ್ ತನ್ನ ರೂಪದ ಕಾರಣಕ್ಕೆ ಭಾರೀ ಚರ್ಚೆ ಜೊತೆ ಟ್ರೋಲ್‌ಗೆ ಒಳಗಾಗಿದ್ದಳು, ಆಕೆ ಮುಖದ ಮೇಲೆ ಕೂದಲು ಇದ್ದವು ಎಂಬ ಕಾರಣಕ್ಕೆ ಆಕೆಯ ಸಾಧನೆಯ ಬಗ್ಗೆ ಮಾತನಾಡದ ಜನ ಆಕೆಯ ಮುಖದ ಸೌಂದರ್ಯ ಕುರಿತು ಆಡಿಕೊಳ್ಳಲು ಮುಂದಾಗಿದ್ದರು.

ಪ್ರಾಚಿ ನಿಗಮ್‌ ಎಂಬ 16 ವರ್ಷದ ಹುಡುಗಿ. ಕಳೆದೊಂದು ವಾರದಿಂದ ಎಲ್ಲಿ ನೋಡಿದರೂ ಆಕೆಯದ್ದೇ ಹೆಸರು. ಆಕೆ ವಿಷಯದಲ್ಲೂ ಆಕೆಯ ಪ್ರತಿಭೆಯನ್ನು ಗುರುತಿಸಿದವರಿಗಿಂತ ಆಕೆಯ ಮುಖದ ಮೇಲೆ ಗಡ್ಡ-ಮೀಸೆಯಂತೆ ಕೂದಲು ಬಂದಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕಷ್ಟ ಪಟ್ಟು ಓದಿ ಬೋರ್ಡ್ ಪರೀಕ್ಷೆಯಲ್ಲಿ ಆಕೆ ರಾಜ್ಯಕ್ಕೆ ಪ್ರಥಮ ಬಂದಿದ್ದಾಳೆ. 600ಕ್ಕೆ ಬರೋಬ್ಬರಿ 591 ಅಂಕ ಪಡೆದು ಆಕೆ ಸಾಧನೆ ಮಾಡಿದ್ದಳು.

ಆದರೆ ಇದ್ಯಾವುದು ನಮ್ಮ ಜನಕ್ಕೆ ಕಾಣಲೇ ಇಲ್ಲ. ಆಕೆಯ ಸಾಧನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೋ ಹೊರಬರುತ್ತಿದ್ದಂತೆ ಜನ ಆಕೆಯನ್ನು ಆಡಿಕೊಳ್ಳಲು ಮುಂದಾಗಿದ್ದಾರೆ. ಆಕೆಯ ಮುಖದಲ್ಲಿ ಕೂದಲು ಕಂಡು ಟೀಕೆ ಟಿಪ್ಪಣಿ ಮಾಡಿದ್ದಾರೆ. ಇಷ್ಟಾದ ಬಳಿಕ ಆಕೆ ಇಡೀ ದೇಶದಲ್ಲಿ ಸುದ್ದಿಯಾಗಿದ್ದಾಳೆ. ಆಕೆಯ ಸಾಧನೆಯನ್ನು ಗುರುತಿಸಿದ ಲಕ್ಷ ಲಕ್ಷ ಮಂದಿ ಆಕೆಯನ್ನು ಹೊಗಳಿದ್ದಾರೆ.

ಆಕೆಯ ಸಾಧನೆಗೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆ ಶೇ. 98.5 ರಷ್ಟು ಅಂಕ ಪಡೆದು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆಗೆ ದೊಡ್ಡ ದೊಡ್ಡ ಬ್ರಾಂಡ್‌ಗಳು ಸಹ ಬೆನ್ನಿಗೆ ನಿಂತಿವೆ. ನಿನ್ನೆಯ ದಿನ ಪತ್ರಿಕೆಯಲ್ಲಿ ಬಾಂಬೆ ಶೇವಿಂಗ್ ಕಂಪನಿ ಎಂಬ ದೊಡ್ಡ ಕಂಪನಿ ಆಕೆಯ ಬೆನ್ನಿಗೆ ನಿಂತು ಜಾಹೀರಾತು ಸಹ ಪ್ರಕಟಿಸಿತ್ತು. ಇದು ಆಕೆಗೆ ಅತೀ ದೊಡ್ಡ ಗೆಲುವು ತಂದುಕೊಟ್ಟಿತು. ಆಕೆಯಲ್ಲಿ ಹೊಸ ಚೈತನ್ಯ ಮೂಡಿಸುವ ಕೆಲಸ ಮಾಡಲಾಗಿತ್ತು, ಆದರೆ ಈಗ ಈ ಎಲ್ಲಾ ಟೀಕೆ, ಟ್ರೋಲ್‌ಗಳಿಗೆ ಪ್ರಾಚಿ ಖುದ್ದು ಉತ್ತರ ನೀಡಿದ್ದಾಳೆ

ಟ್ರೋಲ್ಗಳಿಗೆ ಉತ್ತರ ಕೋಟ್ಟ ಪ್ರಾಚಿ

“ಜನರು ನನ್ನನ್ನು ಟ್ರೋಲ್ ಮಾಡುತ್ತಿರುವುದನ್ನು ನಾನು ನೋಡಿದಾಗ, ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಐಡೆಂಟಿಟಿ ಮುಖ್ಯವೇ ಹೊರತು ನನ್ನ ಮುಖದ ಕೂದಲು ಅಲ್ಲ” ಎಂದು ಆಕೆ ಹೇಳಿದಳು. ತನ್ನನ್ನು ಬೆಂಬಲಿಸಿದ ಜನರಿಗೆ ಪ್ರಾಚಿ ಧನ್ಯವಾದ ತಿಳಿಸಿದಳು. “ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಎಂದು ನನ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಕೆಲವರು ನನ್ನನ್ನು ಟ್ರೋಲ್ ಮಾಡಿದರು. ಅದೇ ಸಮಯದಲ್ಲಿ, ನನ್ನನ್ನು ಬೆಂಬಲಿಸಿದವರೂ ಇದ್ದರು. ನಾನು ಅವರೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ” ಎಂದಿದ್ದಾಳೆ.

ನನ್ನ ಮುಖದ ಕೂದಲಿನಿಂದಾಗಿ ವಿಚಿತ್ರವೆನಿಸುವವರು ಟ್ರೋಲ್ ಮಾಡುವುದನ್ನು ಮುಂದುವರಿಸಬಹುದು, ಆದರೆ ಇದು ನನ್ನಲ್ಲಿ ಯಾವ ಬದಲಾವಣೆಯನ್ನು ಮಾಡದು. ಚಾಣ್ಯಕ್ಯ ಕೂಡ ಅವನ ನೋಟ ಮತ್ತು ಸೌಂದರ್ಯಕ್ಕಾಗಿ ಟ್ರೋಲ್ ಆಗಿದ್ದನಂತೆ, ಆದರೆ ಅದು ಅವನ ಮೇಲೆ ಅದು ಪರಿಣಾಮ ಬೀರಲಿಲ್ಲ” ಎಂದು ಆಕೆ ಹೇಳಿಕೊಂಡಿದ್ದಾಳೆ.

ಈ ಮೂಲಕ ಟ್ರೋಲ್‌ಗಳು, ಟೀಕೆಗಳಿಗೆ ನಾನು ತಲೆಕಡಿಸಿಕೊಳ್ಳುವುದಿಲ್ಲ ಎಂದು ನೇರವಾಗಿ ಆಕೆ ಮಾತನಾಡಿದ್ದಾಳೆ. ಸುಂದರವಾಗಿ ಕಾಣಬೇಕು ಎಂದು ಎಲ್ಲರಿಗೂ ಆಸೆಯಿದ್ದರು ಅದೇ ಜೀವನದ ಗುರಿಯಾಗಬಾರದು. ಸೌಂದರ್ಯವೊಂದೇ ಜೀವನದ ಗುರಿಯಾಗಲು ಸಾಧ್ಯವಿಲ್ಲ. ಮುಖದ ಸೌಂದರ್ಯವನ್ನ ಯಾವಾಗ ಬೇಕಾದರೂ ಬದಲಾಯಿಸಹುದು. ಆದರೆ ಆಕೆಯ ಜ್ಞಾನಕ್ಕಿರುವ ಸೌಂದರ್ಯ ಯಾರಿಂದಲೂ ಬದಲಾಯಿಸಲು ಅದನ್ನು ಮೀರಿಸಲು ಸಹ ಯಾರಿಂದಲೂ ಸಾಧ್ಯವಿಲ್ಲ.

Share This Article
error: Content is protected !!
";