ಬೆಂಗಳೂರಿನಿಂದ ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ಬಯಸುವವರಿಗೆ ಒಂದು ಶುಭ ಸುದ್ದಿ. ಅದೇನೆಂದರೆ ಸಂಪರ್ಕ ಕ್ರಾಂತಿ ರೈಲು ಮೂಲಕ ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗಬಹುದಾಗಿದೆ. ಹಾಗಾದರೆ ಬೆಂಗಳೂರಿನಿಂದ ರೈಲಿನ ಮೂಲಕ ಕೇದಾರನಾಥ ಧಾಮಕ್ಕೆ ತೆರಳುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ಮೇ 10ರಂದು ಕೇದಾರನಾಥ, ಯಮುನೋತ್ರಿ, ಗಂಗೋತ್ರಿ ಹಾಗೂ ಬದರಿನಾಥ ಧಾಮವನ್ನು ಮೇ 12ರಂದು ತೆರೆಯಲಾಗಿದೆ. ಕರ್ನಾಟಕದಿಂದ ಚಾರ್‌ಧಾಮ್ ಯಾತ್ರೆ ಕೈಗೊಳ್ಳುವವರಿಗೆ ವಿಶೇಷ ರೈಲುಗಳ ಸೌಲಭ್ಯವನ್ನು ಒದಗಿಸಲಾಗಿದೆ. ಹೌದು… ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನಕ್ಕೆ ಹೋಗಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ಯಶ್ವಂತಪುರದಿಂದ ಸಂಪರ್ಕ ಕ್ರಾಂತಿ ರೈಲು ಹೊರಡುತ್ತದೆ. ಈ ರೈಲಿನಲ್ಲಿ ದೆಹಲಿವರೆಗೆ ಪ್ರಯಾಣ ಮಾಡಬಹುದು. ಹಾಗಾದರೆ ಈ ರೈಲು ಯಾವ ದಿನ ಇರುತ್ತದೆ? ಹೊರಡುವ ಸಮಯ ಯಾವುದು? ಎಲ್ಲದರ ಬಗ್ಗೆ ತಿಳಿಯೋಣ. ಬೆಂಗಳೂರಿನಿಂದ ಕೇದಾರನಾಥಕ್ಕೆ ರೈಲಿನ ಮೂಲಕ ಹೋಗಲು ಬಯಸುವವರಿಗೆ ಟೂರ್ ಪ್ಲ್ಯಾನ್ ಇಲ್ಲಿದೆ. ಈ ಪ್ಲ್ಯಾನ್ ಮೂಲಕ ನೀವು ಸುಲಭವಾಗಿ ಕೇದಾರನಾಥಕ್ಕೆ ಭೇಟಿ ನೀಡಬಹುದು.
ದೆಹಲಿಯಿಂದ ಹರಿದ್ವಾರಕ್ಕೆ ಪ್ರಯಾಣ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ ನಿಂದ 9.50ಕ್ಕೆ ಇನ್ನೊಂದು ಟ್ರೈನ್ ಮೂಲಕ ಹರಿದ್ವಾರಕ್ಕೆ ಹೋಗಬೇಕಾಗುತ್ತದೆ. ಇದು ಹರಿದ್ವಾರವನ್ನು ಸಂಜೆ 4.10ಕ್ಕೆ ತಲುಪುತ್ತದೆ. ಇದಕ್ಕೆ 190 ರೂಪಾಯಿ ಟಿಕೆಟ್ ದರ ಇರಲಿದೆ. ಶುಕ್ರವಾರವೇ ಹರಿದ್ವಾರವನ್ನು ತಲುಪಲಾಗುತ್ತದೆ. ಶನಿವಾರ ಬೆಳಿಗ್ಗೆ ಹರಿದ್ವಾರದಿಂದ ಸೋನ್‌ಪ್ರಯಾಗ್ ಗೆ ಬಸ್ ಮೂಲಕ ಪ್ರಯಾಣ (1000 ಪ್ರಯಾಣ ದರ) ಮಾಡಿ ರಾತ್ರಿ ಸೋನ್‌ಪ್ರಯಾಗ್ ನಲ್ಲಿ ಉಳಿದುಕೊಂಡು ಭಾನುವಾರ ಬೆಳಗ್ಗೆ ಬೇಗ ಜೀಪ್ ಮೂಲಕ ಗೌರಿಕುಂಡಕ್ಕೆ ಪ್ರಯಾಣ ಆರಂಭವಾಗುತ್ತದೆ. ಭಾನುವಾರ ಬೆಳಗ್ಗೆ ಸೋನ್‌ಪ್ರಯಾಗ್ ಮೂಲಕ ಗೌರಿಕುಂಡಕ್ಕೆ ಜೀಪ್ ಮೂಲಕ ಹೋಗಲಾಗುತ್ತದೆ. ಗೌರಿಕುಂಡದಿಂದ ಕೇದಾರನಾಥ್ ಟ್ರಕ್ಕಿಂಗ್ ಶುರುವಾಗುತ್ತದೆ. ಐದನೇ ದಿನವೇ ನೀವು ಕೇದಾರನಾಥ ಧಾಮವನ್ನು ತಲುಪುವ ಮೂಲಕ ದೇವರ ದರ್ಶನ ಮಾಡಬಹುದು.
ಚಾರ್‌ಧಾಮ್ ಯಾತ್ರೆಗೆ ರಿಜಿಸ್ಟ್ರೇಷನ್ ಮಾಡುವುದು ಹೇಗೆ? ಉತ್ತರಖಂಡನ ಯಾವುದೇ ಯಾತ್ರೆಗೆ ಹೋಗಬೇಕಾದರು ನೀವು ಯಾತ್ರಾ ರಿಜಿಸ್ಟ್ರೇಷನ್ ಮಾಡಿಸಲೇಬೇಕು. ಆನ್‌ಲೈನ್‌ನಲ್ಲಿ ಯಾತ್ರಾ ರಿಜಿಸ್ಟ್ರೇಷನ್ ಮಾಡಿಸುವುದಾದರೆ https://registrationandtouristcare.uk.gov.in/signin.php ಮೂಲಕ ಮಾಡಬಹುದು. ಇನ್ನೊಂದು tourist care uttarakhand ಮೊಬೈಲ್ ಆಪ್ ಕೂಡ ಇದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಕೂಡ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಇನ್ನೊಂದು ಯಾತ್ರಾ ರಿಜಿಸ್ಟ್ರೇಷನ್ ನಂಬರ್ 8394833833 ಇದೆ. ಇದನ್ನು ಸೇವ್ ಮಾಡಿಕೊಂಡು ಈ ನಂಬರ್‌ಗೆ ಯಾತ್ರಾ ಅಂತ ಮೆಸೇಜ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.