Ad image

ಹೆಂಡತಿಯನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

Vijayanagara Vani
ಕೊಪ್ಪಳ ಮಾರ್ಚ್ 20  ವಣಗೇರಿ ಗ್ರಾಮದ ಅಪರಾಧಿ ಬಸವರಾಜ ತಂದೆ ಮಲ್ಲಪ್ಪ ಮಕ್ಕಳ್ಳಿ ಇತನು ತನ್ನ ಹೆಂಡತಿಯಾದ ಅಂಬವ್ವ @ ಕಲ್ಲವ್ವ ಈಕೆಯ ಶೀಲದ ಮೇಲೆ ಸಂಶಯಪಟ್ಟು ಮನೆಯಲ್ಲಿದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗೂ ಇತರೆ ಕಡೆಗಳಿಗೆ ಹೊಡೆದು ಕೊಲೆ ಮಾಡಿದ ಅಪರಾಧ ಸಾಭಿತಾಗಿದೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 50,000 ದಂಡ ವಿಧಿಸಿರುತ್ತಾರೆ.
ಬೇವೂರು ಪೋಲಿಸ್ ಠಾಣೆ ವ್ಯಾಪ್ತಿಯ ವಣಗೇರಿ ಗ್ರಾಮದ ಆರೋಪಿ ಬಸವರಾಜ ತಂದೆ ಮಲ್ಲಪ್ಪ ಮಕ್ಕಳ್ಳಿ ಈತನು ತನ್ನ ಹೆಂಡತಿಯಾದ ಮೃತ ಅಂಬವ್ವ @ ಕಲ್ಲವ್ವ ಇವಳ ಶೀಲದ ಮೇಲೆ ಸಂಶಯಪಡುತ್ತಾ ಆಗಾಗ್ಗೆ ಜಗಳ ಮಾಡುತ್ತಾ ಬಂದಿದ್ದು, ಈ ವಿಷಯವಾಗಿ ವಣಗೇರಿ ಗ್ರಾಮದ ಅಪರಾಧಿ ಬಸವರಾಜನ ಅಕ್ಕಪಕ್ಕದ ಮನೆಯವರು ಅಪರಾಧಿ ಬಸವರಾಜನಿಗೆ ಬುದ್ದಿವಾದ ಹೇಳಿದರೂ ತನ್ನ ಚಾಳಿಯನ್ನು ಬಿಡದೇ ತನ್ನ ಹೆಂಡತಿಯಾದ ಮೃತ ಅಂಬವ್ವ @ ಕಲ್ಲವ್ವ ಈಕೆಯ ಶೀಲದ ಮೇಲೆ ಸಂಶಯ ಪಟ್ಟು ಅವಳೊಂದಿಗೆ ಜಗಳ ಮಾಡುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಹಿಂಸೆ ನೀಡುತ್ತಾ ಬಂದು ಅಪರಾಧಿ ಬಸವರಾಜ ತನ್ನ ಹೆಂಡತಿ ಮಲಗಿಕೊಂಡಿದ್ದಾಗ ಮನೆಯಲ್ಲಿದ್ದ ಕೊಡಲಿಯಿಂದ ಅಂಬವ್ವ @ ಕಲ್ಲವ್ವ ಇವಳ ಕುತ್ತಿಗೆಗೆ ಹಾಗೂ ಇತರೆ ಕಡೆಗಳಿಗೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 143/2017, ಕಲಂ: 498[ಎ], 302 ಭಾ.ದಂ.ಸಂ. ಅಡಿಯಲ್ಲಿ ಹಿಂದಿನ ರಮೇಶ ರೊಟ್ಟಿ ಪಿ.ಐ ಇವರು ತನಿಖೆಯಲ್ಲಿ ಆರೋಪಗಳು ಸಾಭಿತಾಗಿದ್ದರಿಂದ ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ವಣಗೇರಿ ಗ್ರಾಮದ ಅಪರಾಧಿ ಬಸವರಾಜ ತಂದೆ ಮಲ್ಲಪ್ಪ ಮಕ್ಕಳ್ಳಿ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ದಿ: 18-03-2025 ರಂದು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 50,000 ಗಳ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಂಬಣ್ಣ ಟಿ. ಮತ್ತು ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ. ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ ವಾದ ಮಂಡಿಸಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Share This Article
error: Content is protected !!
";