ಗಾಜು_ಗಾಜಿನ ಲೋಕ,  ಅದು ಮಿಂಚಿನ ಲೋಕ

Vijayanagara Vani
ಗಾಜು_ಗಾಜಿನ ಲೋಕ,  ಅದು ಮಿಂಚಿನ ಲೋಕ

 

 ಮನೆ-ಹೋಟೆಲ್, ಅತಿಥಿ ಗೃಹಗಳು ಹೀಗೆ ಪಾನೀಯ, ಊಟ_ಉಪಹಾರದ ಸಮಯದಲ್ಲಿ ಗಾಜಿನ ಆಕರ್ಷಕ ಸಾಮಾನುಗಳನ್ನು ಬಳೆಸುತ್ತೇವೆ, ಬಣ್ಣ_ಬಣ್ಣದ ಗಾಜಿನ ಪಾತ್ರೆಗಳು, ಮಹಿಳೆಯರು ಬಳೆಗಳಾಗಿ,ಗಾಜಿನ ಅಲಂಕಾರಿಕ ವಸ್ತುಗಳು,ಮನಸೂರೆಗೊಳ್ಳುತ್ತವೆ.ಗಾಜು ಸಾಂಸ್ಕೃತಿಕ,ಭಾವನಾತ್ಮಕ ಅಂಶಗಳನ್ನು ಸೂಚಿಸುವುದರ ಜೊತೆಗೆ sಸೌಂದರ್ಯ, ಶ್ರೀಮಂತಿಕೆ ಮತ್ತು ಸಾಮಾಜಿಕ ಸ್ಥಾನಮಾನ ಸೂಚಿಸುವ ವಸ್ತುವಾಗಿಯೂ ಗಾಜು ನಮ್ಮ ನಡುವೆ ಬಳಕೆಯಲ್ಲಿದೆ.ವೈದ್ಯಲೋಕದಲ್ಲಂತೂ ಗಾಜು ಅನಿವಾರ್ಯವಾದ ವಸ್ತುವಾಗಿದೆ.ಬೆಳಕಿನೊಂದಿಗೆ ಬಹು ನಂಟು ಹೊಂದಿರುವ ಗಾಜು ವಿಜ್ಞಾನದ ಲೋಕಕ್ಕೆ ಅವಿನಾಭಾವ ಸಂಭವಿದೆ. ವಿಜ್ಞಾನ ಪ್ರಯೋಗಾಲಯದಲ್ಲಿ ಗಾಜು ವೈವಿಧ್ಯಮಯ ರೀತಿಯಲ್ಲಿ ಉಪಯೋಗವಾಗುತ್ತಿದೆ. ಮನೆಯ ಕಿಡಕಿ,ಬಾಗಿಲು,ಅಲಂಕಾರಿಕ ಲೈಟುಗಳಲ್ಲಿ, ಬಲ್ಬ್ಗಳಲ್ಲಿ ಗಾಜಿನ ಪಾತ್ರ ಅಗಾಧವಾಗಿದೆ.ಗಾಜು ಮಾನವನ ನಾಗರೀಕತೆಯ ಬದುಕಿನಲ್ಲಿ ತುಂಬಾ ಪ್ರಾಚೀನವಾದುದು.ಪಾರದರ್ಶಕವಾದ ಮತ್ತು ಥಳ_ಥಳ ಹೊಳೆಯುವ ಗಾಜು ತಯಾರಾಗುವುದು “ಮರಳಿನಿಂದ” ಎಂದರೆ ಅಚ್ಚರಿಯಾಗುತ್ತದಲ್ಲವೆ?.

 ಗಾಜು: ಗಾಜು ಎಂಬುದು ದುರ್ಬಲತೆ ಮತ್ತು ಘನತೆಗೆ ಹೆಸರುವಾಸಿಯಾಗಿದೆ. ಇದು ಘನವಸ್ತುವಿನ ವಿಚಾರದಲ್ಲಿ ವಿಶಿಷ್ಟವಾದುದಾಗಿದೆ. ನಿಖರ ಆಕಾರವಿಲ್ಲದ ಇದು ದ್ರವರೂಪದಲ್ಲಿದ್ದಾಗ ನಮಗೆ ಬೇಕಾದ ರೂಪಕ್ಕೆ ತರಬಹುದು.ಗಾಜಿನಲ್ಲಿ ವಿದ್ಯುತ್ ಪ್ರಸಾರವಾಗುವುದಿಲ್ಲ.

ಗಾಜು ತಯಾರುಮಾಡಲು ಬೇಕಾದ ವಸ್ತುಗಳೆಂದರೆ ಮರಳು, ಸೋಡಾ,ಸುಣ್ಣದ ಕಲ್ಲು, ಸ್ಪಸ್ಟೀಕರಣ ಏಜೆಂಟ್,ಬಣ್ಣಕ್ಕಾಗಿ ಕೆಲವು ರಾಸಾಯನಿಕ ವಸ್ತುಗಳು ಬೇಕಾಗುತ್ತವೆ.ಗಾಜಿನ ಮುಕ್ಕಾಲು ಭಾಗ ಮರುಳು ಎಂಬುದು ವಿಶೇಷ.ಗಾಜು ತಯಾರಿಕೆಯ ಮೊದಲ ಹಂತ ಎಂದರೆ ಸಿಲಿಕಾ/ಕ್ವರ‍್ಟಜ್ ಮರುಳು ಎಂದು ಕರೆಯ ಬಲ್ಲ ಸ್ಪಟಿಕ ಮರುಳನ್ನು ಇದರ ಜೊತೆಗೆ ಸೋಡಾ (ಸೋಡಿಯಮ್ ಕಾರ್ಬೊನೇಟ್) ಮತ್ತು ಸುಣ್ಣದ ಕಲ್ಲು (ಕ್ಯಾಲಿಷಿಯಮ್ ಕಾರ್ಬೋನೇಟ್) ಸೇರಿಸಿ  3090 ಡಿಗ್ರಿ ಫ್ಯಾರಾನ್ ಹೀಟ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಲಾಗುತ್ತದೆ. ಆಗ ಮರಳು ಕರಗಿ ದ್ರವರೂಪಕ್ಕೆ ಬರುತ್ತದೆ_ಇದನ್ನು ಕರಗಿದ ಗಾಜು ಎಂದು ಕರೆಯಲಾಗುತ್ತದೆ.ಕರಗಿದ ಗಾಜು ಪಾರದರ್ಶಕವಾಗಿರುತ್ತದೆ. ಕರಗಿದ ದ್ರವದಲ್ಲಿ ಗುಳ್ಳೆಗಳು (ಬಬಲ್ಸ್_ ಸಹಜವಾಗಿ ಆಹಾರ ಕುದಿಯುವಾಗ ಬರುವಂತೆ) ಏರ್ಪಡುತ್ತವೆ ಗುಳ್ಳೆಗಳನ್ನು ತೆಗೆಯಲು ಸದಾ ತಿರಿಗಿಸುತ್ತಿರ ಬೇಕು, ಇದಕ್ಕೆ ಸಹಾಯವಾಗಲು ಸೋಡಿಯಮ್ ಸಲ್ಫೇಟ್ ರಾಸಾಯನಿಕವನ್ನು ಸೇರಿಸಲಾಗುತ್ತದೆ. ನಂತರದ ಹಂತ ಅದನ್ನು ತಂಪಾಗಿಸುವ ಪ್ರಕ್ರಿಯೆ, ಬಿಸಿಯಿರುವ ಗಾಜಿನ ದ್ರವವನ್ನು ತಂಪಾಗಿಸುವಲ್ಲಿ ಎರಡು ವಿಧಗಳಿವೆ.

1    ಗಾಜಿನ ದ್ರವವನ್ನು ಅಚ್ಚುಗಳಲ್ಲಿ ಇರಿಸುವುದು: ಇದು ಸಾಮಾನ್ಯವಾಗಿ ಮಸೂರ ದಂತಹ ವಿಜ್ಞಾನ ಉಪಕರಣಗಳನ್ನು ನಿರ್ದಿಷ್ಟ ಆಕಾರ ಬಯಸುವ ವಸ್ತುಗಳನ್ನು ತಯಾರಿಸಲು ವಿಧಾನ ಬಳೆಸುತ್ತಾರೆ.

  1. 2. ವಾಣಿಜ್ಯ ಕ್ಷೇತ್ರದಲ್ಲಿ: ಇಲ್ಲಿ ಕರಗಿದ ಗಾಜಿನ ದ್ರವವನ್ನು ತವರದ (ಟಿನ್)ಹಾಸಿಗೆಯ ದೊಡ್ಡ ಪಾತ್ರಗೆ ಸುರಿವಿ ಸಾರಜನಕದಿಂದ ಒತ್ತಡ ಸೃಷ್ಟಿಸಿ ತಂಪಾಗಿಸುವುದು.ವಿಧಾನವು ಫ್ಲೋಟ್ ಗಾಜನ್ನು ಏರ್ಪಡಿಸುತ್ತದೆ, ಇದರಿಂದ ಗಾಜಿನ ಫಲಕಗಳನ್ನು ತಯಾರಿಸಲಾಗುತ್ತದೆ.ಇಲ್ಲಿ ಗಾಜಿನ ಹಾಳೆ ಸಿದ್ಧವಾಗುತ್ತದೆ, ನಂತರ ಅವುಗಳನ್ನು ಅಗತ್ಯವಿರುವಗಾತ್ರಗಳಿಗೆ ಕತ್ತರಿಸಿಕೊಳ್ಳಲಾಗುತ್ತದೆ.ಇದು ಏಕ ರೂಪ ಮತ್ತು  ಒಂದೇ ರೀತಿಯ ದಪ್ಪವಿರುವಂತೆ ಎಚ್ಚರವಹಿಸುತ್ತಾರೆ.ಇದು ಜರುಗಲು 24/7 ಗಾಜನ್ನು ನಿರಂತರವಾಗಿ ಉತ್ಪದಿಸಲಾಗುತ್ತದೆ, ನಿರಂತರತೆ ಕಾಪಾಡಲು ಗಾಜಿನದ್ರವ ನದಿಯಂತೆ ಸುಮಾರು 300ಮೀಟರ್ ಉದ್ದ ಕುಲುಮೆಯಿಂದ  ಹರಿಯುತ್ತದೆ.

 

 ಎರಡು ಹಂತಗಳಲ್ಲದೆ ಗಾಜು ಇನ್ನಷ್ಟು ಹೆಚ್ಚು ಕಾಲ ಬಾಳಿಕೆ ಬರಲು ಇನ್ನೂ ಒಂದು ನಿರ್ಣಾಯಕ ಹಂತ ಸೇರಿಸಿದ್ದಾರೆ.ಅದನ್ನು ಅನೆಲಿಂಗ್ ಪ್ರಕ್ರಿಯೆ ಎನ್ನುತ್ತಾರೆ. ಅನ್ನೆಲಿಂಗ್ ಎಂದರೆ ಮೇಲೆ ತಿಳಿಸಿದ ಹಾಗೆ ಸಿದ್ಧವಾದ ಗಾಜನ್ನು ಗೂಡು (ಎಂದರೆ ಉಷ್ಣ ನಿರೋಧಿಸಲ್ಪಟ್ಟ ಕೋಣೆ, ಓನನ್ ತರಹ ಗಟ್ಟಿಯಾಗಿಸುವುದು, ಒಣಗಿಸುವುದು ಮತ್ತುರಾಸಾಯನಿಕ ಬದಲಾವಣೆಗೆ ಒಳ ಪಡಿಸುವುದು) ಎಂಬ ಸ್ಥಳದಲ್ಲಿ ಇಡಲಾಗುತ್ತದೆ.ಇಲ್ಲಿ 750 ರಿಂದ 1೦೦೦ ಡಿಗ್ರಿ ಫ್ಯಾರನ್‌ಹೀಟ್ ಉಷ್ಣತೆ ಇರುತ್ತದೆ.ಇದು ಗಾಜು ತಣ್ಣಗಾಗುವ ಸಮಯದಲ್ಲಿ ಉಂಟಾಗಿರುವ ಯಾವುದೇ ಅಥವಾ ಎಲ್ಲಾ ಒತ್ತಡದ ಬಿಂದುಗಳನ್ನು ತೆಗೆದು ಹಾಕುತ್ತದೆ ಮಾತ್ರವಲ್ಲ ಬಳಸಲು ಸಿದ್ಧವಾಗುತ್ತದೆ.

ಗಾಜಿನ ಇತಿಹಾಸ: ಮಾನವರು ಗಾಜನ್ನು ಸುಮಾರು 4೦೦೦ ವರ್ಷಗಳ ಹಿಂದೆ ರಚಿಸಿದ್ದಾರೆ.ಮೆಸಪಟೋಮಿಯಾದಲ್ಲಿ ಕೆಲಸ ಮಾಡುತ್ತಿದ್ದ ಕುಶಲ ಕರ್ಮಿಗಳು ಮರಳು, ಸೋಡಾ ಮತ್ತು ಸುಣ್ಣವನ್ನು ಮಿಶ್ರಣ ಮಾಡಿ  ಬಿಸಿ ಮಾಡುವುದರ ಮೂಲಕ ಗಾಜನ್ನು ತಯಾರಿಸುವುದನ್ನು ಕಂಡುಕೊಂಡರು.ಮ್ಯೂಜಿಯಮ್ ನಲ್ಲಿ ಲಭ್ಯವಿರುವ ಪ್ರಾಚೀನ ಕಾಲದ ಗಾಜಿನ ವಸ್ತುಗಳನ್ನು ಗಮನಿಸಿದಾಗ ವಿಜ್ಞಾನಿಗಳು ಕಂಡುಕೊAಅಂಶವೆಂದರೆ ಆರಂಭಿಕ ಗಾಜಿನ ತಯಾರಿ ಬಿಸಿ ಮಾಡಿದ ದ್ರವವನ್ನು  ತೆರೆದ ಅಚ್ಚುಗಳಲ್ಲಿ ಎರಕ ಹೊಯ್ದಿರಬೇಕು ಎಂದು ಊಹಿಸಿದ್ದಾರೆ.ಮತ್ತೊಂದು ಪದ್ಧತಿಯೆಂದರೆ ಮಣ್ಣನ್ನು (ಕೆಸರನ್ನು) ಒಂದು ಆಕಾರಕ್ಕೆ ತಂದು ಅದರ ಸುತ್ತ ಗಾಜಿನ ದ್ರವವನ್ನು ವ್ಯವಸ್ಥಿತವಾಗಿಟ್ಟು ತಣ್ಣಗಾಗಲು ಬಿಡುತ್ತಿದ್ದರು ನಂತರ ಒಳಗಿನ ಮಣ್ಣನ್ನು ತೆಗೆದು ಟೊಳ್ಳಾದ ಗಾಜಿನ ಪಾತ್ರೆ ಪಡೆಯುತ್ತಿದ್ದರು.ಬೆಲೆ ಬಾಳುವ ಪರಿಮಳಯುಕ್ತ ತೈಲಗಳು, ಸುಗಂಧ ದ್ರವ್ಯಗಳು ಸಂಗ್ರಹಿಸಲೂ ಆರಂಭವಾದ ಗಾಜು ಔಷಧಿಗಳ ಕ್ಷೇತ್ರದಲ್ಲೂ ಬಹುಕಾಲ ತನ್ನ ತನ ಉಳಿಸಿಕೊಂಡಿದೆ.ಯಾವುದೇ ಆಹಾರ ಪದಾರ್ಥ, ಔಷಧಿ,ರಾಸಾಯನಿಕ ವಸ್ತುವಿನೊಡನೆ ಯಾವುದೇ ತರದ ರಿಯಾಕ್ಷನ್ ಕೊಡದ ವಸ್ತು ಗಾಜು,ಪಾನೀಯಗಳ ಸೇವನೆಗೆ ಚಂದ ಒದಗಿಸುವ ಗಾಜಿನ ಗ್ಲಾಸ್ ಎಲ್ಲರಿಗೂ ಅಚ್ಚು_ಮೆಚ್ಚು.ಒಂದು ಕಾಲದಲ್ಲಿ ಹೋಟೆಲ್‌ನಲ್ಲಿ ಚಹಾ ಕುಡಿಯುವುದು ಎಂದರೆ ಗಾಜಿನ ಗ್ಲಾಸಿನಲ್ಲಿಯೇ ಎಂದು ಅರ್ಥ.

  ಗಾಜಿನ ಉಣ್ಣೆ (ಗ್ಲಾಸ್ ಊಲ್): ರಸಾಯನಶಾಸ್ತçಪ್ರಯೋಗಾಲಯಗಳಲ್ಲಿ ಬಹು ಮುಖ್ಯ ಪಾತ್ರವಹಿಸುತ್ತಿರುವ ವಸ್ತುಗಳಲ್ಲಿ ಗಾಜಿನ ಉಣ್ಣೆ ಒಂದು.ಗಾಜಿನ ಉಣ್ಣೆ (ತೆಳುವಾದ ಗಾಜಿನ ದಾರ ಇದು, ಕೈಯಿಂದ ಮುಟ್ಟಿ ಕಣ್ಣು ಮುಟ್ಟಿಕೊಂಡರೆ ನಮಗೆ ಗೊತ್ತಿಲ್ಲದಂತೆ ದೇಹ ಸೇರುವಷ್ಟು ಸೂಕ್ಷöಮವಾಗಿರುತ್ತದೆ) ತನ್ನ ವೈವಿದ್ಯಮಯ ಲಕ್ಷಣಗಳಿಂದ ರಸಾಯನ ಶಾಸ್ತçಸಂಶೋಧನೆಗಳಲ್ಲಿ ಬಳಕೆಯಾಗುತ್ತದೆ.ದ್ರಾವಣಗಳಲ್ಲಿ ,ವಸ್ತುಗಳಲ್ಲಿ ಮತ್ತು ಕಾಂಪೋಡ್‌ಗಳಲ್ಲಿ ಬೇರ್ಪಡಿಸಲು, ಶುದ್ಧೀಕರಿಸಲು ಮತ್ತು ಪರೀಕ್ಷಿಸಲು ಬಳಸುವ ಕ್ರೋಮೋಟಾಗ್ರೋಫಿ  ಎಂಬ (ಹೀರಿಕೊಳ್ಳುವ ಗುಣ) ತಂತ್ರಜ್ಞಾನದಿಂದ ಹಿಡಿದು ಉಷ್ಠದ ನಿರೋಧಕವಾಗಿ ಬಳಸುವಲ್ಲಿ ಗಾಜಿನ ಉಣ್ಣೆ ಅನ್ವಯಗಳನ್ನು ರಸಾಯನ ಶಾಸ್ತç ಬಳೆಸುತ್ತಿದೆ. ಗುರುತ್ವಾಕರ್ಷಣೆ ಮತ್ತು ನಿರ್ವಾತ ಶೋಧನೆ ಸೆಟಪ್‌ಗಳಲ್ಲಿ ಗಾಜಿನ ಉಣ್ಣೆಯು ವಿಶ್ವಾಸಾರ್ಹ ಫಿಲ್ಟರ್ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ,ಇದರ ಸರಂಧ್ರ ರಚನೆಯು ದ್ರವಗಳು ಮತ್ತು ಅನಿಲಗಳಿಂದ ಘನವಸ್ತುಗಳನ್ನು ಪ್ರತ್ಯೇಕಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಜೊತೆಗೆ ಉತ್ತಮ ಫಿಲ್ಟರ್ ಆಗಿ ಕೆಲಸ ಮಾಡುತ್ತದೆ.ಹೀಗೆ ಗಾಜಿನ ಉಣ್ಣೆ ಆಧುನಿಕ ರಸಾಯನಶಾಸ್ತçದಲ್ಲಿ ಅನೇಕ ವಿಧಗಳಲ್ಲಿ ಬಳಕೆಯಾಗುತ್ತಿದೆ.

ಡಾ.ಯು.ಶ್ರೀನಿವಾಸ ಮೂರ್ತಿ

ಉಪನ್ಯಾಸಕರು

ವಿಚಾರ ಕುಟೀರ” ರಾಮನಗರ1  ನೇ ಕ್ರಾಸ್

ಹವಂಬಾವಿ ಬಳ್ಳಾರಿ

 

WhatsApp Group Join Now
Telegram Group Join Now
Share This Article
error: Content is protected !!