ಅಂದು ಸುದ್ದಿ ನಿರೂಪಕ ಈಗ ಬೆಳ್ಳಿತೆರೆಯ ಹೀರೋ ರಾಘವ ಸೂರ್ಯ ಇಂದು “ರಮ್ಮಿ ಆಟ” ಚಿತ್ರವು ರಾಜ್ಯಾದ್ಯಂತ ಪ್ರದರ್ಶನ

Vijayanagara Vani
ಅಂದು ಸುದ್ದಿ ನಿರೂಪಕ ಈಗ ಬೆಳ್ಳಿತೆರೆಯ ಹೀರೋ ರಾಘವ ಸೂರ್ಯ  ಇಂದು “ರಮ್ಮಿ ಆಟ” ಚಿತ್ರವು ರಾಜ್ಯಾದ್ಯಂತ ಪ್ರದರ್ಶನ

 

ಬೆಂಗಳೂರು: ಸೆ.19: ಇತ್ತೀಚಿನ ದಿನಗಳಲ್ಲಿ ರಮ್ಮಿ ಆಟ / ರಮ್ಮಿ ಗೇಮ್ ಇದೊಂದು ಮನುಕುಲದ ಅವನತಿ, ತಮ್ಮ ಜೀವವನ್ನೇ ಆಹುತಿ ಮಾಡಿಕೊಳ್ಳುತ್ತಿರುವ ಪ್ರಸ್ತುತ ಯುವ ಸಮೂಹದ ಬಗ್ಗೆ ಸೃಜನಶೀಲ ಕಥೆಯನ್ನುಟ್ಟುಕೊಂಡು, ಆನ್‌ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ. ಜನ ಸಮೂಹವು ಯಾವೆಲ್ಲಾ ರೀತಿ ಮೋಸ ಹೋಗುತ್ತಾರೆ. ಹಾಗೆಯೇ ಆನ್‌ಲೈನ್‌ ರಮ್ಮಿ ಗೇಮ್‌ ಕುರಿತು ಜನರಿಗೆ ಎಚ್ಚರಿಕೆ ನೀಡುವಂತಹ ಸಿನಿಮಾವೊಂದು ನಾಳೆ ಅಂದರೆ ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಪ್ರದರ್ಶನ ನೀಡಲಿದೆ. ಈ ಸಿನಿಮಾಕ್ಕೆ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ರಾಘವ ಸೂರ್ಯ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದು ವಿಶೇಷ. ಈ ಆಟದಿಂದ ಏನೆಲ್ಲ‌ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ಅಂದು ಸುದ್ದಿ ನಿರೂಪಕ ಈಗ ಬೆಳ್ಳಿತೆರೆಯ ಹೀರೋ
ಸುದ್ದಿ ಸಂಸ್ಥೆಯಲ್ಲಿ ನಿರೂಪಕರಾಗಿ ಕೆಲಸ ಮಾಡಿರುವ ರಾಘವ ಸೂರ್ಯ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.ಕನ್ನಡ ಮಾಧ್ಯಮ ಕ್ಷೇತ್ರದಲ್ಲಿನ ತಮ್ಮದೇ ಆದ ಛಾಪು ಮೂಡಿಸಿದ ಖ್ಯಾತ ನಿರೂಪಕರಾಗಿ ಕೆಲಸ ಮಾಡಿದ್ದು ನಂತರದಲ್ಲಿ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ಅವಿಸ್ಮರಣೀಯವಾಗಿದೆ.

ಶ್ರೀ ರಾಘವ ಸೂರ್ಯ ರವರ ನಟನೆಯ ‘ರಮ್ಮಿ ಆಟ’ ಕನ್ನಡ ಚಲನಚಿತ್ರವು ನಾಳೆ ಅಂದರೆ ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಪ್ರದರ್ಶನ ನೀಡಲಿದೆ.

‘ಇದೇ ಗೇಮ್ ನಿಂದಾಗಿ ದೇಶದಲ್ಲಿ ನಡೆದ ಮಹಾಭಾರತದಲ್ಲಿ ಯುದ್ಧವೇ ನಡೆಯಿತು. ಹಲವಾರು ರಾಜಮಹಾರಾಜರು ಗೇಮ್ ನಿಂದ ಎಲ್ಲವನ್ನೂ ಕಳೆದುಕೊಂಡ ಸಾಕಷ್ಟು ನಿದರ್ಶನಗಳಿವೆ. ಇಂತಹ ರಮ್ಮಿ ಆಟವನ್ನು ಚಿತ್ರರಂಗ, ನಟನಟಿಯರು ಉತ್ತೇಜಿಸಬಾರದು. ಹಾಗೂ ಈ ಆಟದಿಂದಾಗುವ ಪರಿಣಾಮವನ್ನು ಚಿತ್ರದ ಮೂಲಕ ತಿಳಿಸಲು ಹೊಸ ತಂಡವೊಂದು ಹೊರಟಿರುವುದು ಈ ಚಿತ್ರದ ಪ್ರಮುಖ ಉದ್ದೇಶವಾಗಿದೆ.

‘ರಮ್ಮಿ ಆಟ’ ಕಥೆಯನ್ನು ಉಮರ್ ಷರೀಫ್ ಚಿತ್ರದ ನಿರ್ದೇಶಕರು. ರಮೇಶ್ ಯಾದವ್ ಹಾಗೂ ಹನುಮೇಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ಇವತ್ತು ಆನ್‌ಲೈನ್‌ ಜೂಜು ಸಾಕಷ್ಟು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ. ಇಂತಹ ಆಟದ ಅಡ್ಡಪರಿಣಾಮಗಳನ್ನು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು ವಿಶೇಷ.

ಈಗಾಗಲೇ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ರಮ್ಮಿ ಆಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ. ನಾಳೆ ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಚಲನಚಿತ್ರಕ್ಕೆ ಕಾರ್ತೀಕ್ ಎಸ್. ಅವರ ಛಾಯಾಗ್ರಹಣ, ಪ್ರಭು ಎಸ್.ಆರ್‌ ಸಂಗೀತ, ರಾಘವ ಸೂರ್ಯ ಹಾಗೂ ಸಯ್ಯದ್ ಇರ್ಫಾನ್ ಚಿತ್ರದ ನಾಯಕರು. ವಿನ್ಯಾ ಶೆಟ್ಟಿ, ಸ್ನೇಹ ರಾವ್, ಅಭಿ ಗೌಡ, ಶ್ರೀಕರ್, ರೋಷನ್ ಶ್ರೀನಿವಾಸ್‌ ಮತ್ತಿತರರು ಉಳಿದ ತಾರಾಗಣದಲ್ಲಿದ್ದಾರೆ.

ರಮ್ಮಿ ಆಟವು ರಾಜ್ಯಾದ್ಯಂತ ಪ್ರದರ್ಶನ ನೀಡಲಿ ಹಾಗೂ ಆನ್ ಲೈನ್ ಗೇಮ್ ಕುರಿತಂತೆ ಯುವ ಸಮೂಹಗಳಲ್ಲಿ ಬದಲಾವಣೆ ತರಲಿ, ಚಿತ್ರವು ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ ಇದಾಗಿದೆ ಎಂಬುದು ಶ್ರೀ ರಾಘವ ಸೂರ್ಯ ಅಭಿಮಾನಿಗಳ ಬಳಗ ಬೆಂಗಳೂರು ರವರ ಪ್ರಮುಖ ಆಶಯವಾಗಿದೆ.

 

WhatsApp Group Join Now
Telegram Group Join Now
Share This Article
error: Content is protected !!