Ad imageAd image

ಕೊಹ್ಲಿ ಕೆಣಕಿ ಉಳಿದವರಿಲ್ಲ: ಅಲ್ಲೇ ಡ್ರಾ.. ಅಲ್ಲೇ ಬಹುಮಾನ!

Vijayanagara Vani

ವಿರಾಟ್ ಕೊಹ್ಲಿ ಅವರನ್ನ ಕ್ರಿಕೆಟ್ ಮೈದಾನದಲ್ಲಿ ಕೆಣಕಿ ಯಾರು ಕೂಡ ಉಳಿದುಕೊಳ್ಳಲು ಆಗಲ್ಲ. ಈ ಮಾತು ಪದೇ ಪದೇ ಪ್ರೂವ್ ಆಗ್ತಾನೆ ಇದೆ. ಆದರೂ ವಿರಾಟ್ ಕೊಹ್ಲಿ ಅವರ ಬಗ್ಗೆ ಮಾತನಾಡುವವರ ಸಂಖ್ಯೆ ಕಡಿಮೆ ಏನು ಆಗಿಲ್ಲ. ಇದಕ್ಕೆಲ್ಲಾ ಅಭಿಮಾನಿಗಳು ಕೂಡ ಸರಿಯಾಗಿ ಉತ್ತರ ನೀಡುತ್ತಿದ್ದು, ‘ಆನೆ ಹೋಗುವಾಗ ನಾಯಿಗಳು ಬೊಗಳುತ್ತವೆ..’ ಅಂತಾ ಹೇಳ್ತಿದ್ದಾರೆ. ಇದೇ ಸಮಯದಲ್ಲಿ ಪಂಜಾಬ್ ವಿರುದ್ಧದ ಆರ್‌ಸಿಬಿ ಪಂದ್ಯದಲ್ಲಿ ಬಿಟ್ಟಿ ಶೋ ಕೊಟ್ಟ ರಿಲೀ ರೊಸೊವ್ ಇದೀಗ ಕೊಹ್ಲಿ ಕೈಯಲ್ಲಿ ಸರಿಯಾಗೇ ಇಕ್ಕಿಸಿಕೊಂಡಿದ್ದಾರೆ!

- Advertisement -
Ad imageAd image

ಹೌದು ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ತಮ್ಮ ತನು, ಮನ, ಧನ ಎಲ್ಲವನ್ನು ಅರ್ಪಿಸಿದ್ದಾರೆ 2008ರಿಂದ ಹಿಡಿದು 2024ರ ತನಕ ಒಂದೇ ತಂಡದ ಪರವಾಗಿ ಆಡ್ತಿದ್ದಾರೆ. ಆರ್‌ಸಿಬಿಗೆ, ವಿರಾಟ್ ಕೊಹ್ಲಿ ಕಳೆದ 16 ವರ್ಷಗಳಿಂದಲೂ ದುಡಿಯುತ್ತಿದ್ದಾರೆ. ಹೀಗಿದ್ದರೂ ವಿರಾಟ್‌ಗೆ ವಿರೋಧಿಗಳು ಕೂಡ ಹೆಚ್ಚಾಗಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂತಹ ಜನರಿಗೆಲ್ಲಾ ಕೊಹ್ಲಿ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ನೀಡುತ್ತಾರೆ. ಈಗ ಕೂಡ ಅಷ್ಟೇ ಆರ್‌ಸಿಬಿ ವಿರುದ್ಧ ಪಂಜಾಬ್ ಆಟಗಾರ, ಜುಜುಬಿ ಹಾಫ್ ಸೆಂಚುರಿ ಮಾಡಿ ಗನ್ ಸ್ಟೈಲ್ ಸೆಲೆಬ್ರೇಷನ್ ಮಾಡಿದ್ದಕ್ಕೆ ಇದೀಗ ಐತಿಹಾಸಿಕ ಉತ್ತರ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಲು ಮುಂದೆ ಓದಿ.

ಕೊಹ್ಲಿ ಕೊಟ್ಟ ಏಟಿಗೆ ಉಡೀಸ್! ಆಗಿದ್ದು ಏನಪ್ಪಾ ಅಂದ್ರೆ, 242 ರನ್‌ಗಳ ಗುರಿ ಬೆನ್ನುಹತ್ತಿದ್ದ ಪಂಜಾಬ್ ತಂಡಕ್ಕೆ ಮೊದಲ ಆಟಗಾರ ಔಟ್ ಆಗುವ ಮೂಲಕ ಆಘಾತವೇ ಎದುರಾಗಿತ್ತು. ಆರಂಭಿಕನಾದ ಪ್ರಭುಸಿಮ್ರಾನ್ ಸಿಂಗ್‌ರನ್ನ ಸ್ವಪ್ನಿಲ್ ಸಿಂಗ್ ಔಟ್ ಮಾಡಿದ್ರು. ಆದ್ರೆ ಒನ್ ಡೌನ್ ಹಂತದಲ್ಲಿ ರಿಲೀ ರೊಸೊವ್, ಅಖಾಡಕ್ಕೆ ಬಂದು ಆರ್‌ಸಿಬಿ ಬೌಲರ್ಸ್ ಮೇಲೆ ದಂಡೆತ್ತಿ ಹೋದರು. ಮನಸ್ಸಿಗೆ ಬಂದಂತೆಯೆ ಬಾಲ್‌ಗಳನ್ನ ದಂಡಿಸಿ ರನ್ ಕದ್ದರು, ಹೀಗಿದ್ದಾಗಲೇ ಕೊಹ್ಲಿ ಅವರನ್ನು ಕೆಣಕಿ ದೊಡ್ಡ ತಪ್ಪು ಮಾಡಿದರು.

WhatsApp Group Join Now
Telegram Group Join Now
Share This Article
error: Content is protected !!