ಈ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ

Vijayanagara Vani
ಈ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ

ಚಳ್ಳೆಹಣ್ಣು ಎಂಬ ನುಡಿಗಟ್ಟನ್ನು ಬಳಸಿರುತ್ತೇವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಚಳ್ಳೆಹಣ್ಣು ಎಂದರೆ ಯಾವುದು, ರೀತಿ ಒಂದು ಹಣ್ಣು ಇದೆ ಎಂಬುದೇ ತಿಳಿದಿಲ್ಲವೆನ್ನಬಹುದು.
ಚಳ್ಳೆ ಹಣ್ಣು ( ಕಾರ್ಡಿಯಾ ಮೈಕ್ಸಾ) ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಿಂದೆ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮರ. ಆದರೆ ಇತ್ತೀಚೆಗೆ ಇದರ ವ್ಯಾಪನೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎನ್ನಬಹುದು. ಆಡುಭಾಷೆಯಲ್ಲಿ ಗೊಣ್ಣೆಹಣ್ಣು, ಸುಂಬಳ ಹಣ್ಣು ಎಂದು ಕರೆಯಲ್ಪಡುವ ಹಣ್ಣು, ಪದಕ್ಕೆ ಅನ್ವರ್ಥದಂತಿದೆ. ಮೇಲಿನ ಸಿಪ್ಪೆ ತೆಗೆದರೆ ಅಂಟು ಅಂಟಾಗಿ, ಜಿಗುಟಾದ ಲೋಳೆಯಂತಹ ಜಾರುವ ಗುಣವನ್ನು ಹೊಂದಿರುವ ಹಣ್ಣಿನ ತಿರುಳು ಚಳ್ಳೆಹಣ್ಣು ಎಂಬ ನುಡಿಗಟ್ಟಿಗೆ ಸರಿಯಾಗಿ ಹೊಂದುವ ಹೋಲಿಕೆ.
ಕೋತಿ, ಅಳಿಲಿನಂತಹ ಮರವಾಸಿ ಪ್ರಾಣಿಗಳು ಹಾಗೂ ಹಲವು ಹತ್ತು ಪಕ್ಷಿಗಳಿಗೆ ಭೂರಿಭೋಜನ ಒದಗಿಸುವ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ. ಆದರೆ ಬದಲಾದ ಕೃಷಿ ಮಾದರಿಯಲ್ಲಿ, ಗೋಮಾಳ, ಕೆರೆಮಾಳ, ರಾಜಕಾಲುವೆ, ಕರಾಬು ಜಮೀನು ಸೇರಿ ಚೂರು ಜಾಗವನ್ನು ಬಿಡದೆ ಕೃಷಿ ಅಥವಾ ಇತರ ಉಪಯೋಗಕ್ಕೆ ಬಳಸುತ್ತಿರುವ ನಾವುಗಳು ಮರಗಳನ್ನು ಅಪರೂಪವಾಗಿಸಿದ್ದೇವೆ. ಮರಗಳ ವಿಶೇಷವೆಂದರೆ ಇವು ಹಳ್ಳದ ಮಗ್ಗಲು, ಇರುವಲ್ಲಿಯೇ ಹೆಚ್ಚಾಗಿ ಬೆಳೆಯುವುದು.

- Advertisement -
Ad imageAd image
Share This Article
error: Content is protected !!
";