Ad image

ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

Vijayanagara Vani
ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ  2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

ಪಪುವಾ ನ್ಯೂಗಿನಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿ, ೨ ಸಾವಿರಕ್ಕೂ ಅಧಿಕ ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ರಾಷ್ಟ್ರೀಯ ವಿಪತ್ತು ಕೇಂದ್ರ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.

- Advertisement -
Ad imageAd image

ಪರ‍್ಟ್ ಮೋರೆಸ್ಬಿ: ಪಪುವಾ ನ್ಯೂಗಿನಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿ, ೨ ಸಾವಿರಕ್ಕೂ ಅಧಿಕ ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ರಾಷ್ಟ್ರೀಯ ವಿಪತ್ತು ಕೇಂದ್ರ ವಿಶ್ವಸಂಸ್ಥೆಗೆ ಮಾಹಿತಿ ನೀಡಿದೆ.
ದ್ವೀಪರಾಷ್ಟ್ರದ ಉತ್ತರದಲ್ಲಿರುವ ಎಂಗಾ ಪ್ರಾಂತದ ಯಂಬಾಲಿ ಹಳ್ಳಿಯ ಬೆಟ್ಟಪ್ರದೇಶಗಳಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ ೩ ಗಂಟೆಗೆ ಭೂಕುಸಿತ ಸಂಭವಿಸಿದ್ದು ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲೂ ಅಪಾರ ಸಾವು-ನೋವು, ನಾಶ ನಷ್ಟ ಸಂಭವಿಸಿದೆ.
ಶೋಧ ಮತ್ತು ರಕ್ಷಣಾ ತಂಡದ ಕರ‍್ಯಾಚರಣೆಯಲ್ಲಿ ಮಣ್ಣಿನಡಿ ಸಮಾಧಿಯಾಗಿದ್ದ ಹಲವು ದೇಹಗಳನ್ನು ಮೇಲೆತ್ತಲಾಗಿದೆ. ಸುಮಾರು ೧೫೦ ಮನೆಗಳು ಮಣ್ಣಿನಡಿ ಹೂತುಹೋಗಿರುವುದಾಗಿ ಅಂದಾಜಿಸಲಾಗಿದೆ. ಹಲವೆಡೆ ಇನ್ನೂ ಕುಸಿತ ಮುಂದುವರಿದಿರುವುದರಿಂದ ರಕ್ಷಣಾ ಕರ‍್ಯಾಚರಣೆಗೆ ತೊಡಕಾಗಿದ್ದು. ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ವಲಸೆ ಏಜೆನ್ಸಿ ಅಧಿಕಾರಿ ಸರ‍್ಹಾನ್ ಅಕ್ಟೋಪ್ರಾಕ್ ಮಾಹಿತಿ ನೀಡಿದ್ದಾರೆ.


ಇದೊಂದು ಅಸಾಮಾನ್ಯ ಪ್ರಾಕೃತಿಕ ದುರಂತವಾಗಿದ್ದು 1 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹಲವೆಡೆ ಕೃಷಿ ತೋಟಗಳು ರಾತ್ರಿ ಬೆಳಗಾಗುವುದರಲ್ಲಿ ಭೂಮಿಯ ಒಡಲನ್ನು ಸೇರಿದ್ದು ಅಪಾರ ನಷ್ಟ ಸಂಭವಿಸಿದೆ. ನೀರು ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು, ಹಲವೆಡೆ ಕುಡಿಯುವ ನೀರಿನ ಕೊರತೆ ಎದುರಾಗಿದೆ
ಭೂಕುಸಿತದ ಸ್ಥಳದಿಂದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲೆಡೆ ಕಲ್ಲು, ಮಣ್ಣು, ಕುಸಿದು ಬಿದ್ದ ಮರಗಳು, ತ್ಯಾಜ್ಯಗಳು ರಾಶಿ ಬಿದ್ದಿರುವುದರಿಂದ ರಸ್ತೆ ಸಂಚಾರ ಬಹುತೇಕ ಮೊಟಕುಗೊಂಡಿರುವುದರಿಂದ ಸ್ಥಳಾಂತರ ಪ್ರಕ್ರಿಯೆ ಮತ್ತು ರಕ್ಷಣಾ ಕರ‍್ಯಕ್ಕೆ ತೊಡಕಾಗಿದೆ. ಪಪುವಾ ನ್ಯೂಗಿನಿಯಾದ ಅಭಿವೃದ್ಧಿ ಪಾಲುದಾರರಿಗೆ, ಇತರ ಅಂತರರಾಷ್ಟ್ರೀಯ ಸ್ನೇಹಿತರಿಗೆ ದೇಶದ ಪರಿಸ್ಥಿತಿಯ ಬಗ್ಗೆ ತಿಳಿಸಿ ಸಹಾಯ ಹಸ್ತ ಚಾಚುವಂತೆ ವಿಶ್ವಸಂಸ್ಥೆಯನ್ನು ಕೋರಿದ್ದಾರೆ.
ಭೂಕುಸಿತ ಉಂಟಾದ ಪ್ರದೇಶದಲ್ಲಿ ಸುಮಾರು 4೦೦೦ ಜನ ವಾಸಿಸುತ್ತಿದ್ದರು. ಈ ಪೈಕಿ 1250 ಮಂದಿ ಆಶ್ರಯ ಕಳೆದುಕೊಂಡಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ದೇಶದ ಕೇರ್ ಇಂಟರ್‌ನ್ಯಾಷನಲ್ ಸಂಸ್ಥೆ ನರ‍್ದೇಶಕ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಮನವಿ ಬೆನ್ನಲ್ಲೇ ಸಂಕಷ್ಟದಲ್ಲಿರುವ ಪಪುವಾ ನ್ಯೂಗಿನಿಯಾಗೆ ಸಹಾಯ ಮಾಡುವಂತೆ ಮಿತ್ರ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.
ಪಪುವಾ ನ್ಯೂಗಿನಿಯಾವು ವಿಶ್ವದ ಅತ್ಯಂತ ತೇವವಾದ ಹವಾಮಾನವನ್ನು ಹೊಂದಿದ್ದು, ಹವಾಮಾನ ಬದಲಾವಣೆಯಿಂದಾಗಿ ಭೂಕುಸಿತದ ಅಪಾಯ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂದು ಸಂಶೋಧನೆಯೊಂದು ಮಾಹಿತಿ ನೀಡಿದೆ.
ವಿಪತ್ತು ಸಂಭವಿಸಿ ಈಗಾಗಲೇ ಮೂರು ದಿನಗಳು ಮತ್ತು ಏಳು ಗಂಟೆಗಳು ಕಳೆದಿವೆ, ಶೀಘ್ರಗತಿಯಲ್ಲಿ ಜನರ ರಕ್ಷಣೆಗ ಅಗತ್ಯವಿರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಕ್ಟೋಪ್ರಾಕ್ ತಿಳಿಸಿದ್ದಾರೆ

Share This Article
error: Content is protected !!
";