ವಿಶ್ವ ಆಹಾರ ಸುರಕ್ಷಿತ ದಿನಾಚರಣೆಯಲ್ಲಿ ಕಿರಣ್ ಕುಮಾರ್ ಬಲ್ಲೂರೆ ಅಭಿಪ್ರಾಯ
ದುಶ್ಚಟಗಳಿಂದ ಮಾತ್ರವಲ್ಲ ಅಶುದ್ದ ಆಹಾರದಿಂದಲೂ ಮಾರಣಾಂತಿಕ ಖಾಯಿಲೆ ಸಾದ್ಯ
ಹರಪನಹಳ್ಳಿ: ಮಾರಣಾಂತಿಕ ಕಾಯಿಲೆಗಳು ಕೇವಲ ದುಶ್ಚಟಗಳಿಂದ ಮಾತ್ರವಲ್ಲ ಅಶುದ್ದ ಆಹಾರ ಸೇವನೆಯಿಂದಲೂ ಸಾದ್ಯ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಎಫ್ಎಸ್ಓ ಕಿರಣ್ ಕುಮಾರ್ ಬಲ್ಲೂರೆ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮಾಚಿಹಳ್ಳಿ ಗ್ರಾಮದ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹರಪನಹಳ್ಳಿ, ಬಲ್ಲೂರೆ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಬೀದರ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಆಹಾರ ಸುರಕ್ಷಿತ ದಿನದ ಅಂಗವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ನೊಂದಣೆ ಹಾಗೂ ಪರವಾನಿಗೆ ಆಂಧೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು.
ಪ್ಲಾಸ್ಟಿಕ್ನಂತಹ ಮಾರಕವನ್ನು ಬಳಕೆ ಮಾಡುವ ಬೇಡಿಕೆಯನ್ನು ನಾವೇ ತಿರಸ್ಕರಿಸಬೇಕು, ಬದಲಾಗಿ ತಯಾರಿಕೆ ನಿಲ್ಲಿಸುವ ನೆಪ ಬೇಡ. ಪರಿಸರಕ್ಕೆ ಹಾನಿಯಾಗುವಂತಾ ವಸ್ತುಗಳ ಬಳಕೆಯನ್ನು ನಿಷೇಧಿಸಲು ಪಣತೋಡೋಣ. ಚಿಕ್ಕ ವಸ್ತುವಿನಿಂದ ದೊಡ್ಡ ವಸ್ತು ಖರೀದಿಗೂ ಮುನ್ನ ಶುದ್ದತೆ ಪರೀಕ್ಷಿಸುವ ಗುಣಗಳನ್ನು ಬೆಳೆಸಿಕೊಳ್ಳೋಣ ಎಂದರು.
ಅಶುದ್ದ ಆಹಾರ ಸೇವನೆ ಕೇವಲ ವೈಯಕ್ತಿಕ ಮಾರಕವಲ್ಲದೆ ಇಡೀ ಕುಟುಂಭಕ್ಕೂ ಮಾರಕವಾಗಿದೆ. ರಸ್ತೆ ಬದಿಯ ಅಸುರಕ್ಷಿತ ಆಹಾರ ಸೇವನೆ, ಶುಚಿತ್ವವಲ್ಲದೆಡೆ ಬಳಕೆ ಪ್ಲಾಸ್ಟಿಕ್ ಹಾಗೂ ಪೇಪರ್ಗಳಲ್ಲಿ ಕರಿದ ತಿನಿಸುಗಳನ್ನು ತಿನ್ನುವುದರಿಂದ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಸಾದ್ಯತೆಯಿದೆ. ಪ್ರತೀ ವಸ್ತು ಖರೀದಿಗೂ ಮುನ್ನ ಅಂತಿಮ ದಿನಾಂಕ ಗಮನಿಸಿ. ಸ್ವ ಇಚ್ಚೆಯಿಂದಲೇ ಆಹಾರ ಸುರಕ್ಷತೆಯನ್ನು ಆರಂಭಿಸೋಣ ಎಂದರು.
ಆರೋಗ್ಯ ಇಲಾಖೆ ಬಿಹೆಚ್ಓ ಗೌರಮ್ಮ ಮಾತನಾಡಿ. ಉತ್ತಮ ಬದುಕಿಗೆ ಪ್ರಾಥಮಿಕ ಅವಶ್ಯಕತೆಗಳು ಶುದ್ದವಾಗಿರಲಿ, ಕಲಬೆರಕೆ ಬಗ್ಗೆ ಜಾಗೃತರಾಗಿರಿ. ಆಫರ್ಗಳಿಗೆ ಮೊರೆಹೋಗದೆ ಪೂರ್ವಿಕರ ಸ್ವಚ್ಚತೆಯ ಪದ್ದತಿಯನ್ನು ಅಳವಡಿಸಿಕೊಳ್ಳೋಣ. ಕರಿದ ಹಾಗೂ ಬೇಕರಿ ತಿನಿಸುಗಳಿಂದ ಆಗುವ ಅನಾಹುತಗಳನ್ನು ತಪ್ಪಿಸಿ ಅಮ್ಮನ ಅಡುಗೆ ಸವಿಯಿರಿ ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಎಂ.ಸಿ.ಅAಜೀನಪ್ಪ ಮಾತನಾಡಿ. ಪ್ಲೋರೈಡ್ ನೀರಿನಿಂದ ವಸತಿ ನಿಲಯದಲ್ಲಿ ಅನಾರೋಗ್ಯ ಕಾಡುತ್ತಿದೆ. ಶುದ್ದ ಕುಡಿವ ನೀರಿಗೆ ಜನಪ್ರತಿನಿಧಿಗಳು ಮನಸು ಮಾಡಲಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಶೇಖರಿಸಿಟ್ಟ ಪಾಕೇಟಿನ ತಿನಿಸುಗಳನ್ನು ಬಳಸುವುದು ನಿಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ವೇಳೆ ಏರ್ಪಡಿಸಿದ್ದ ಪ್ರಭಂದ ಸ್ಪರ್ದೆಯಲ್ಲಿ ಪ್ರಥಮ ಲಕ್ಷಿö್ಮ ಎಂ, ದ್ವಿತೀಯ ಪದ್ಮಾಭಾಯಿ, ತೃತೀಯ ಕೀರ್ತಿ ಜಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸತೀಶ್ ಚಂದ್ರ, ತಾತನಗೌಡ, ಸ್ಟಾಫ್ ನರ್ಸ್ ಎಸ್.ಹೆಚ್., ರೇಖಾ ಹಾಗೂ ಶಿಕ್ಷಕರಾದ ಎ.ಎಂ.ಮಮತಾ, ರೂಪಾ ಯು.ಎಸ್, ಪರಸಪ್ಪ ಕೆ, ಆರ್.ಆನಂದ್, ಅಕ್ಕಮಹಾದೇವಿ, ಎ.ಉಷಾರಾಣಿ, ಪೂರ್ಣೀಮಾ ಎಸ್, ಲಕ್ಷಿö್ಮ ಆರ್, ಸಹೇದ್ ಸುಹೇಲ್, ಸುಚಿತ್ರಾ ಎಸ್, ಅನುಷಾ ಎಂ, ಕೋಟೇಶ್ವರ ಸಿ, ಮತ್ತು ವಸತಿ ನಿಲಯದ ವಿದ್ಯಾರ್ಥಿನೀಯರು ಹಾಜರಿದ್ದರು.