Ad image

ಕೈವ್ ಮೇಲೆ ರಷ್ಯಾ ದಾಟಿ 41 ಮಂದಿ ಸಾವು

Vijayanagara Vani
ಕೈವ್ ಮೇಲೆ ರಷ್ಯಾ ದಾಟಿ 41 ಮಂದಿ ಸಾವು

ಕೈವ್, 9 : ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ದ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಉಕ್ರೇನ್‌ನ ಕೈವ್‌ನ ಮುಖ್ಯ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 41 ಮಂದಿ ಮೃತಪಟ್ಟಿದ್ದು 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ತಿಂಗಳುಗಳ ಕಾಲ ನಡೆದ ಅತ್ಯಂತ ಭೀಕರ ವಾಯು ದಾಳಿಯಲ್ಲಿ ಕನಿಷ್ಠ 41 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ. ಆಸ್ಪತ್ರೆಯ ಮೇಲೆ ರಷ್ಯಾ ವೈಮಾನಿಕ ದಾಳಿಯ ನಂತರ ಮಕ್ಕಳನ್ನು ಹಿಡಿದುಕೊಂಡು ಪೋಷಕರು ಆಸ್ಪತ್ರೆಯ ಹೊರಗೆ ಓಡುತ್ತಿರುವ ದೃಶ್ಯ ಕಂಡುಬಂದಿದೆ. ಕಿಟಕಿಗಳನ್ನು ಒಡೆದು ಹಾಕಲಾಗಿದ್ದು ಫಲಕಗಳನ್ನು ಕಿತ್ತುಹಾಕಲಾಯಿತು ಮತ್ತು ನೂರಾರು ಕೈವ್ ನಿವಾಸಿಗಳು ಆತಂಕದಲ್ಲಿ
ಬದುಕುವ ವಾತಾವರಣ ನಿರ್ಮಾಣವಾಗಿದೆ.
ನ್ಯಾಟೋ ಶೃಂಗಸಭೆಗಾಗಿ ವಾಷಿಂಗ್ಟನ್‌ಗೆ ತೆರಳುವ ಮೊದಲು ಪೋಲೆಂಡ್‌ನಲ್ಲಿ ಪ್ರತಿಕ್ರಿಯೆ ನೀಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝಲೆನ್ನಿ, ಮೂರು ಮಕ್ಕಳು ಸೇರಿದಂತೆ 41 ಮಂದಿ ಸಾವನ್ನಪ್ಪಿದ್ದಾರೆ. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನುವುದನ್ನು ಖಚಿತ ಪಡಿಸಿದ್ದಾರೆ ಮಕ್ಕಳ ಆಸ್ಪತ್ರೆ ಮತ್ತು ಕೈವ್‌ನಲ್ಲಿರುವ ಹೆರಿಗೆ ಕೇಂದ್ರ, ಮಕ್ಕಳ ನರ್ಸರಿಗಳು ಮತ್ತು ವ್ಯಾಪಾರ ಕೇಂದ್ರ ಮತ್ತು ಮನೆಗಳು ಸೇರಿದಂತೆ 100 ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.”ರಷ್ಯಾದ ಭಯೋತ್ಪಾದಕರು ಇದಕ್ಕೆ ಉತ್ತರಿಸಬೇಕು” ಇದೊಂದು ಭಯೋತ್ಪಾದನೆ ಎಂದು ಅವರು ವಾಗ್ದಾಳಿ ನಡೆಸಿದ್ದು ಕೇಂದ್ರೀಯ ನಗರಗಳಾದ ಕ್ರಿವಿ ರಿಹ್ ಮತ್ತು ಡಿಪೊರ ಮತ್ತು ಎರಡು ಪೂರ್ವ ನಗರಗಳಲ್ಲಿಯೂ ಹಾನಿಯಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಪೋಷಕರಾದ ಸ್ವಿಟ್ಲಾನಾ ಕ್ರಾವೆಂಕೊ ಪ್ರತಿಕ್ರಿಯಿಸಿ “ಇದು ಭಯಾನಕ ದಾಳಿ, ಉಸಿರಾಡಲು ಸಾಧ್ಯವಾಗಲಿಲ್ಲ. ನನ್ನ ಮಗುವನ್ನು ರಕ್ಷಣೆ ಮಾಡಿಕೊಂಡು ಬರಲು ಪರದಾಡುವಂತಾಯಿತು. ಎಂದಿದ್ದಾರೆ.ಯುದ್ಧದ ಅತ್ಯಂತ ಕೆಟ್ಟ ವಾಯುದಾಳಿಗಾಗಿ ಸರ್ಕಾರ ಶೋಕಾಚರಣೆ ದಿನ ಘೋಷಿಸಿದೆ, ಇದು ಉಕ್ರೇನ್ ತನ್ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ತನ್ನ ವಾಯು ರಕ್ಷಣೆಯನ್ನು ತುರ್ತಾಗಿ ನವೀಕರಿಸುವ ಅಗತ್ಯವಿದೆ ಎಂದು ಹೇಳಿದೆ.

Share This Article
error: Content is protected !!
";