ಇತಿಹಾಸ ನಿರ್ಮಿಸಿದ ಕಾಂಗ್ರೆಸ್ ಅಭ್ಯರ್ಥಿ! ಸಂಡೂರಿ ನಲ್ಲಿ ವಿಜಯಪಾತಕೆ ಹಾರಿಸಿದ ಕಾಂಗ್ರೇಸ್ ಮೊದಲ ಮಹಿಳಾ ಅಭ್ಯರ್ತಿ ಇ. ಅನ್ನಪೂರ್ಣ ಗೆ ಗೆಲವು

Vijayanagara Vani
ಇತಿಹಾಸ ನಿರ್ಮಿಸಿದ ಕಾಂಗ್ರೆಸ್ ಅಭ್ಯರ್ಥಿ! ಸಂಡೂರಿ ನಲ್ಲಿ ವಿಜಯಪಾತಕೆ ಹಾರಿಸಿದ  ಕಾಂಗ್ರೇಸ್   ಮೊದಲ ಮಹಿಳಾ  ಅಭ್ಯರ್ತಿ  ಇ. ಅನ್ನಪೂರ್ಣ ಗೆ ಗೆಲವು

ಸಂಡೂರು: ಸಂಡೂರು (Sanduru) ವಿಧಾನಸಭೆ ಉಪಚುನಾವಣೆಯ (By Election) ಫಲಿತಾಂಶ (Results) ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ . ಅನ್ನಪೂರ್ಣ ಅವರು ಗೆಲುವು ಕಂಡಿದ್ದಾರೆ. ಮೂಲಕ ಕಾಂಗ್ರೆಸ್ ಅಭ್ಯರ್ಥಿಯು ಸಂಡೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಮಹಿಳಾ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

- Advertisement -
Ad imageAd image

ಸತತ 5 ಬಾರಿ  ಗೆಲವು ಸಾದಿಸುತ್ತಾ ಬಂದಿರುವ ಕಾಂಗ್ರೇಸ್ ಪಕ್ಷವು  ಉಪಚುನವಣೆಯಲ್ಲಿ ಜಯ ಬೇರಿ ಬಾರಿಸುವ ಮೂಲಕ  ಜಿಲ್ಲೆಯಲ್ಲಿ ತನ್ನ  ಅಸ್ತಿತ್ವ ಉಳಿಸಿಕೋಳುವಲ್ಲಿ ಯಶಸ್ವಿ ಕಂಡಿದ್ದು  ಇನ್ನು ಬಿಜೆಪಿ   ತನ್ನ ಅಸ್ತಿತ್ವ ಉಳಿಸಿಕೋಳ್ಳುವುದಕ್ಕೆ  ಘಟನುಘಟಿ ನಾಯಕರಗಳು ಬೀಡುಬಿಟ್ಟು ಪ್ರಚಾರ ಕೈಗೋಂಡರು   ಮತದಾರರು ಮಾತ್ರ ಈಬಾರಿ ಗೆಲವು ಸಾದಿಸಲು ಸಹಕರಿಸಲಿಲ್ಲ

 ಅಂಚೆ ಮತ ಎಣಿಕೆಯಿಂದ ಇವಿಎಂ ಮತ ಎಣಿಕೆಯ ಮೂರು ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಮಧ್ಯದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಇದೀಗ ಅಂತಿಮವಾಗಿ 9 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಕಂಡಿದ್ದಾರೆ.

ಇತ್ತ ಸೋಲು ಕಂಡಿರುವ ಬಿಜೆಪಿ ಅಭ್ಯರ್ಥಿ ‌ಬಂಗಾರಿ ಹನುಮಂತು ‌ಮಾಧ್ಯಮದವರೊಂದಿಗೆ ಮಾತನಾಡಿದ್ದು, ಈ ಸೋಲಿನ ಹೊಣೆಯನ್ನು ನಾನು ಒತ್ತುಕೊಳ್ಳುತ್ತೇನೆ. ಯಾರ ಮೇಲೂ‌ ಇದನ್ನು ಹೊರಿಸಲ್ಲ. ಕಾಂಗ್ರೆಸ್ ‌ಹಣ ಬಲದಿಂದ‌‌ ಈ ಚುನಾವಣೆ ಗೆದ್ದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಇಲ್ಲಿಯೇ ಠಿಕಾಣಿ ಹೂಡಿದ್ದರು. ಸಚಿವ ಶಿವರಾಜ ತಂಗಡಗಿ ಉಸ್ತುವಾರಿ ‌ಹೊತ್ತಿದ್ದ ಪ್ರದೇಶ ಸೇರಿ ಸಚಿವರು ಇದ್ದ ಪ್ರದೇಶದಲ್ಲಿ ನಮಗೆ ಹಿನ್ನಡೆ ಆಗಿದೆ ಎಂದು ಹೇಳಿದರು.

ಅಂಕಿ-ಅಂಶಗಳ ಪ್ರಕಾರ ಈ ಸೋಲು ನಮಗೆ ಸೋಲೆ ಅಲ್ಲ. ಚುನಾವಣೆ ಹತ್ತಿರ ಇದ್ದಾಗ ಎಲ್ಲ‌ ಮಹಿಳೆಯರ ಖಾತೆಗೆ 2 ಸಾವಿರ ಹಣ ಹಾಕಿದರು. ವೋಟಿಗೆ 2 ಸಾವಿರ ಕೊಟ್ಟು ಮತಗಳನ್ನು ಖರೀದಿ‌ ಮಾಡಿದರು. 2028 ರಲ್ಲಿ ಸಂಡೂರಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. ನಾನು ಅಲ್ಲಿಯೇ ಮನೆ ಮಾಡಿ ಜನರ ಜತೆ ಇರುತ್ತೇನೆ. 2028ರಲ್ಲಿ ಯಾರೇ ಅಭ್ಯರ್ಥಿ ಆಗಲಿ‌ ಒಗ್ಗಟ್ಟಿನಿಂದ ತುಕಾರಾಂ, ಸಂತೋಷ ‌ಲಾಡ್ ಅವರನ್ನು ಸೋಲಿಸುತ್ತೇವೆ ಎಂದು ಹೇಳಿದರು.

Share This Article
error: Content is protected !!
";