ಸಿರಿಯಾದಲ್ಲೂ ಅಮೆರಿಕ – ರಷ್ಯಾ ಜಿದ್ದಾಜಿದ್ದಿ,ಯಾವ   ದೇಶ ಯಾರಪರ

Vijayanagara Vani
ಸಿರಿಯಾದಲ್ಲೂ ಅಮೆರಿಕ – ರಷ್ಯಾ ಜಿದ್ದಾಜಿದ್ದಿ,ಯಾವ   ದೇಶ ಯಾರಪರ

ಯುದ್ದ ಹಾಗೂ ಮಾರಣಹೋಮದ ನಂತರ ಇದೀಗ ಸಿರಿಯಾ ದೇಶವು ಇದೀಗ ಶಾಂತಿಯನ್ನು ಎದುರು ನೋಡುತ್ತಿದೆ. ದೇಶವನ್ನು ತೊರೆದು ನೆರೆಯ ರಾಷ್ಟ್ರಗಳಿಗೆ ಓಡಿ ಹೋಗಿದ್ದ ಜನ ಇದೀಗ ಮತ್ತೆ ಅವರ ತವರು ಮನೆಗೆ ಬರುವುದಕ್ಕೆ ಎದುರು ನೋಡುತ್ತಿದ್ದಾರೆ. ಸಿರಿಯಾದ ಗಡಿಯಲ್ಲಿ ಸಾವಿರಾರು ಜನ ಜಮಾಯಿಸಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ.

- Advertisement -
Ad imageAd image

ಸಿರಿಯಾದಲ್ಲಿ ಸಿರಿಯಾದ ಅಧ್ಯಕ್ಷ ಹಾಗೂ ಸರ್ವಾಧಿಕಾರಿ ಬಶರ್ ಅಸಾದ್ ಅವನ ಯುಗಾಂತ್ಯವಾಗಿದೆ. ಬಶರ್ ಇಲ್ಲಿ ಸುದೀರ್ಘ 24 ವರ್ಷಗಳ ಕಾಲ ಆಡಳಿತ ನಡೆಸಿದ್ದ ಆತನ ಆಡಳಿತ ಅವಧಿಯಲ್ಲಿ ಸಿರಿಯಾದಲ್ಲಿ ನಡೆದದ್ದೆಲ್ಲ ರಕ್ತಪಾತವೇ. ಬಂಡುಕೋರರು ಇಲ್ಲಿನ ರಾಜಧಾನಿಯನ್ನು ವಶಪಡಿಸಿಕೊಂಡ ಮೇಲೆ ಬಶರ್‌ ಪರಾರಿಯಾಗಿದ್ದಾನೆ. ಆದರೆ, ಈ ಯುದ್ಧದಲ್ಲಿ ಘಾಟನುಘಟಿ ದೇಶಗಳೇ ಭಾಗಿಯಾಗಿದ್ದವು.
ಸಿರಿಯಾ ಇದೀಗ ಸರ್ವಾಧಿಕಾರಿ ಆಡಳಿತದಿಂದ ಮುಕ್ತಿಯೊಂದಿದ್ದು, ಇಲ್ಲಿನ ಜನ ನೆಮ್ಮದಿಯ ದಿನಗಳನ್ನು ನೋಡಲು ಇಚ್ಛಿಸುತ್ತಿದ್ದಾರೆ. ಇದರ ನಡುವೆಯೇ ಇಸ್ರೇಲ್‌ ಈ ದೇಶದ ಕೆಲವು ಭಾಗಗಳಲ್ಲಿ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಿದೆ. ಈ ದೇಶದಲ್ಲಿ ಸುದೀರ್ಘ 13 ವರ್ಷಗಳ ಅಂತರ್ಯುದ್ಧ ನಡೆದಿತ್ತು. ದೇಶದಲ್ಲಿ ಪ್ರಜಾಪ್ರಭುತ್ವ ಪರವಾದ ಹೋರಾಟಗಳನ್ನು ಬಶರ್ ಅಸಾದ್ ತಡೆದಾಗ ಈ ಅಂತರ್ಯುದ್ಧ ಶುರುವಾಗಿತ್ತು. ಇದರಲ್ಲಿ ಸಾವಿರಾರು ಜನ ತಮ್ಮ ಜೀವವನ್ನೇ ಕಳೆದುಕೊಂಡಿದ್ದರೆ, ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದರು. ದೇಶಾಂತರಗೊಂಡವರು ಇದೀಗ ಸಿರಿಯಾಗೆ ಹಿಂದಿರುಗಲು ಎದುರು ನೋಡುತ್ತಿದ್ದಾರೆ.
ಇದೀಗ ಇಡೀ ವಿಶ್ವವೇ ಮುಂದಿನ ದಿನಗಳಲ್ಲಿ ಸಿರಿಯಾ ರಾಜಕೀಯ ಯಾವ ರೀತಿ ಬದಲಾಗಬಹುದು ಎಂದು ಎದುರು ನೋಡುತ್ತಿದೆ. ಇದೀಗ ಸಿರಿಯಾದಲ್ಲಿ ಬಂಡುಕೋರರಿಗೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಪರ – ವಿರೋಧಗಳ ಬೆಂಬಲ ಇನ್ನು ಸಿರಿಯಾದ ಯುದ್ಧದಲ್ಲಿ ಪರ – ವಿರೋಧ ಹಿತಾಸಕ್ತಿಗಳು ಮೊದಲಿನಿಂದಲೂ ಇವೆ. ಇದೇ ಕಾರಣಕ್ಕೆ ಈ ದೇಶದಲ್ಲಿ ಸಾವಿರಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರಷ್ಯಾ ಮತ್ತು ಇರಾನ್ ದೇಶಗಳು ಬಶರ್ ಅಸಾದ್ ಪರವಾಗಿವೆ.

ಇನ್ನು ವಿವಿಧ ಬಂಡಾಯ ಗುಂಪುಗಳು ಮತ್ತು ಸೇನಾಪಡೆಗಳನ್ನು ಅಮೆರಿಕ ಹಾಗೂ ಟರ್ಕಿ ದೇಶಗಳು ಬೆಂಬಲಿಸಿವೆ. ಸಿರಿಯಾದಲ್ಲಿನ ಬೆಳವಣಿಗೆಗಳಿಗೆ ಇಸ್ರೇನ್‌ ಹಾಗೂ ಅಮೆರಿಕ ದೇಶಗಳು ಕಾರಣ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ಇರಾನ್‌ ದೂರಿದೆ. ಈ ಮೂಲಕ ಇದರಲ್ಲಿ ಇಸ್ರೇನ್‌ನ ಪಾತ್ರವೂ ಇರುವುದು ಚರ್ಚೆಗೆ ಕಾರಣವಾಗಿದೆ. ರಷ್ಯಾ ದೇಶವು ಸರ್ವಾಧಿಕಾರಿ ಅಸಾದ್ ಸರ್ಕಾರದೊಂದಿಗೆ ದಶಕಗಳ ಕಾಲ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ ಇಲ್ಲಿ ಅಂತರ್ಯುದ್ಧ ನಡೆಯುವುದಕ್ಕಿಂತ ಮುಂಚೆ ಇಲ್ಲಿ ಅಲ್ಲಿ ಮಿಲಿಟರಿ ನೆಲೆಗಳನ್ನು ಸಹ ಹೊಂದಿತ್ತು. ಇನ್ನು ಸಿರಿಯಾದ ಅಂತರ್ಯುದ್ಧದ ಸಮಯದಲ್ಲಿ ಟರ್ಕಿಯು ಬಂಡಾಯ ಬಣಗಳನ್ನು ಬೆಂಬಲಿಸಿತ್ತು. ಇನ್ನು ಈ ದೇಶದಲ್ಲಿ 2011ರಲ್ಲಿ ಪ್ರಜಾಪ್ರಭುತ್ವ ಪರವಾದ ಹೋರಾಟಗಳು ಪ್ರಾರಂಭವಾದ ಬೆನ್ನಲ್ಲೇ ಅಸಾದ್‌ ಸರ್ಕಾರ ವಿರುದ್ಧ ತನ್ನ ನಿಲುವನ್ನು ಪ್ರಕಟಿಸಿತ್ತು. ಇರಾನ್‌ ಹಾಗೂ ಸಿರಿಯಾ ಮೊದಲಿನಿಂದಲೂ ಉತ್ತಮ ಗೆಳೆಯರಂತೆ ಇದ್ದಾರೆ. ಇಸ್ರೇಲ್‌ ಸಹ ಈ ಬೆಳವಣಿಗೆಗಳಲ್ಲಿ ಪರೋಕ್ಷವಾಗಿ ಗುರುತಿಸಿಕೊಂಡಿದೆ.

Share This Article
error: Content is protected !!
";