ಬೆಂಗಳೂರು : ಇಂಡಿಯನ್ ಜಾಕಿಚಾನ್ ಸಾಹಸ ನಿರ್ದೇಶಕ, ಡಾ. ಥ್ರಿಲ್ಲರ್
ಮಂಜು ರವರು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ
ಸಿನಿಮಾ ‘ಮುಗಿಲ ಮಲ್ಲಿಗೆ’ ಎ. ಎನ್. ಆರ್ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ
ನಾಗರಾಜ್ ರೆಡ್ಡಿ ನಿರ್ಮಿಸುತ್ತಿರುವ ಕನ್ನಡ ಚಲನಚಿತ್ರದ ಮಾತಿನ ಭಾಗದ
ಚಿತ್ರೀಕರಣ ಮುಕ್ತಾಯವಾಗಿ ಹಾಡುಗಳಷ್ಟೇ ಬಾಕಿ ಉಳಿದಿವೆ.
ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಹಾಗೂ ಸಹನಾ
ಚಂದ್ರಶೇಖರ್ ನಾಯಕ- ನಾಯಕಿಯಾಗಿ ನಟಿಸುತ್ತಿರುವ ‘ಮುಗಿಲ
ಮಲ್ಲಿಗೆ’, ಒಂದು ದ್ವೇಷ ಮತ್ತು ಪ್ರೀತಿಯ ಸುತ್ತ ನಡೆಯುವ
ಪ್ರೇಮಕಥೆಯ ಚಿತ್ರ. ಇಷ್ಟು ದಿನ ಹೊಡಿ, ಬಡಿ ಎನ್ನುತ್ತಾ ಪೊಲೀಸ್
ಪಾತ್ರಗಳಲ್ಲಿ ಮಿಂಚಿದ ನಟ, ನಿರ್ದೇಶಕ ,ಸಾಹಸ ನಿರ್ದೇಶಕ
ಡಾ.ಥ್ರಿಲ್ಲರ್ ಮಂಜು ರವರು ಮುತ್ತತ್ತಿ ದೇವರಾಜ್ ಹೆಸರಿನ
ಎಮೋಷನಲ್ ಪಾತ್ರ ನಿರ್ವಹಿಸುತ್ತಿದ್ದಾರೆ. ,ಅವರ ಪತ್ನಿಯಾಗಿ ಹಿರಿಯ
ನಟಿ ಭವ್ಯಾ ನಟಿಸಿರುವುದು ವಿಶೇಷ. ಕಂಬಳಿಪುರ ಕಾಟೇರಮ್ಮ,
ಭಕ್ತರಹಳ್ಳಿ,ಪೂಜೇನ ಅಗ್ರಹಾರ, ಗಟ್ಟಿಗನಬ್ಬೆ. ಹೊಸಕೋಟೆ
ಸುತ್ತ ಮುತ್ತಲಿನ ಪರಿಸರದಲ್ಲಿ ಈಗಾಗಲೇ ಮಾತಿನ ಹಾಗೂ ಸಾಹಸ
ಸನ್ನಿವೇಶಗಳ ಚಿತ್ರೀಕರಣ ಸತತ ನಡೆಸಿ ಮುಗಿಸಿರುವ ‘ಮುಗಿಲ
ಮಲ್ಲಿಗೆ’ ಚಿತ್ರತಂಡ ಹಾಡುಗಳ ಚಿತ್ರೀಕರಣಕ್ಕಾಗಿ ಸಕಲೇಶ್ವರ
, ಮಡಿಕೇರಿ ಗೆ ಹೊರಟಿದೆ .
ತಾರಾಗಣದಲ್ಲಿ ಸನತ್ , ಸಹನಾ ಚಂದ್ರಶೇಖರ್, ಥ್ರಿಲ್ಲರ್ ಮಂಜು,
ಭವ್ಯಾ, ರಾಜೇಶ್, ಶಂಕರ್, ಎಂ ವಿ ಸಮಯ್, ಕಿಶೋರ್ ಕುಂಬ್ಳೆ ,ಶಿವು
ಕಾಸರಗೋಡು, ಸಿದ್ದಯ್ಯ ಹಿರೇಮಠ ,ರವಿ, ಧೀನ, ಬೃಂದ. ನಾಗ
,ಜಯರಾಂ, ಯುವೀನ, ಸತ್ಯವಾರ ನಾಗೇಶ್, ವಸಂತ ನಾಯಕ್, ಕಿರಣ್
ಗಟ್ಟಿಗನಬ್ಬೆ, ಮೋನಿಕಾ, ಮೊದಲಾದವರು ನಟಿಸುತ್ತಿದ್ದಾರೆ , ತಾಂತ್ರಿಕವರ್ಗದಲ್ಲಿ ಅಭಿನಂದನ್ ಶೆಟ್ಟಿ ಛಾಯಾಗ್ರಹಣ, ಅನಿರುದ್ಧ
ಶಾಸ್ತ್ರಿ ಸಂಗೀತ. ರಾಜೀವ್ ಕೃಷ್ಣ ಸಾಹಿತ್ಯ, ವಿನಯ್ ಜಿ ಆಲೂರು
ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಇಂದ್ರ ಸ್ಥಿರ ಚಿತ್ರಣ, ಮೋಹನ್
ಕುಮಾರ್ ಪ್ರಸಾಧನ, ಮಲ್ಲಿಕಾರ್ಜುನ ರವರ ಕಲಾ ನಿರ್ದೇಶನ,
ಭದ್ರಾವತಿ ಪ್ರವೀಣ್ ಸಹನಿರ್ದೇಶನ, ಎಂ ಜಿ ಕಲ್ಲೇಶ್, ಡಾ ಪ್ರಭು
ಗಂಜಿಹಾಳ, ಡಾ ವೀರೇಶ್ ಹಂಡಗಿ ಅವರ ಪತ್ರಿಕಾ ಸಂಪರ್ಕವಿದೆ.
ಈಗಾಗಲೇ ಟಾಲಿವುಡ್ ನಲ್ಲಿ ರುದ್ರಾಕ್ಷಪುರಂ, ಪ್ರೇಮಭಿಕ್ಷ
ಚಿತ್ರಗಳನ್ನು ನಿರ್ದೇಸಿರುವ ಆರ್. ಕೆ.ಗಾಂಧಿ ಕಥೆ, ಚಿತ್ರಕಥೆ
,ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
-ಡಾ.ಪ್ರಭು ಗಂಜಿಹಾಳ
ಮೊ-9448775346