Ad image

ಟವರ್ ನಿರ್ಮಾಣ ಕೈಬಿಡುವಂತೆ ನಿವಾಸಿಗಳಿಂದ ಮನವಿ

Vijayanagara Vani
ಟವರ್ ನಿರ್ಮಾಣ ಕೈಬಿಡುವಂತೆ ನಿವಾಸಿಗಳಿಂದ ಮನವಿ

ಕೊಟ್ಟೂರು : ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಟವರ್ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸುವಂತೆ ಕೋರಿ ಸ್ಥಳೀಯ ಪ.ಪಂ ಮುಖ್ಯಾದಿಕಾರಿಗಳಿಗೆ ವಿದ್ಯಾನಗರ ನಿವಾಸಿಗಳು   ಮನವಿ ಸಲ್ಲಿಸಿದರು. ಗುರುವಾರದಂದು ಬಡಾವಣೆಯ ನಿವಾಸಿಗಳು ಸಲ್ಲಿಸಿದ ಮನವಿ ಪತ್ರದಲ್ಲಿ ಪ.ಪಂ ವ್ಯಾಪ್ತಿಯ ವಿದ್ಯಾನಗರದ  7ನೇ ವಾರ್ಡಿನಲ್ಲಿ ಏರ್ಟೆಲ್ ಮೊಬೈಲ್ ಟವರ್ ನಿರ್ಮಾಣದಿಂದ ವಾಸ ಮಾಡುತ್ತಿರುವ ನಾಗರೀಕರ ಜೀವನಕ್ಕೆ ಮಕ್ಕಳ ಹಾಗೂ ಪಕ್ಷಿ ಸಂಕುಲಗಳ ಜೀವಗಳಿಗೆ ಹಾನಿಯಾಗುವ ಆತಂಕ ಮತ್ತು ಅಪಾಯವಾಗುವ ಸಾಧ್ಯತೆ ಇರುವುದರಿಂದ ತಾವುಗಳು ಕೂಡಲೇ ಟವರ್ ನಿರ್ಮಾಣ ಕೈಬಿಡುವಂತೆ ಕ್ರಮ ಕೈಗೊಳ್ಳಲು  ನಿವಾಸಿಗಳಾದ ದುರುಗಪ್ಪ, ಕೆ ದೇವೇಂದ್ರಪ್ಪ ಮಹೇಶ ಎಚ್ಎನ್ ವೀರಭದ್ರಪ್ಪ ಅರುಣ್ ಕುಮಾರ ರೇಣುಕಸ್ವಾಮಿ ಕೆಎಂ ಹಾಗೂ ಇತರ ಹಲವು ನಿವಾಸಿಗಳು ಪ.ಪಂ ಮುಖ್ಯಾದಿಕಾರಿಗಳಾದ ತುಕಾರಾಂ ವೈ ಎಂ ಇವರಿಗೆ ಮನವಿ ಪತ್ರ ಸಲ್ಲಿಸಿದರು.

 

Share This Article
error: Content is protected !!
";