ಹಾವುಗಳನ್ನು ಹಿಡಿಯುವುದು ರಕ್ಷಿಸುವುದು ಅವರ ಕರ‍್ಯವಾಗಿರುತ್ತೆ. ಇನ್ನು ಹಾವುಗಳಲ್ಲಿ ಕೆಲವು ಜಾತಿ ಹಾವುಗಳು ವಿಷಕಾರಿ ಅಲ್ಲ. ಆದ್ರೆ ಕೆಲವು ವಿಷಕಾರಿ ಹಾವುಗಳು ಕಚ್ಚಿದ ಕ್ಷಣದಲ್ಲೇ ನಮಗೆ ಸಾವು ಸಂಭವಿಸಬಹುದು. ಇನ್ನು ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆಯೇ ಸಾವಿಗೀಡಾಗುವವರ ಸಂಖ್ಯೆ ಕಡಿಮೆ ಏನಿಲ್ಲ.
ದೇಶದಲ್ಲಿ ಹಾವಿ ಕಡಿತದಿಂದ ಸಾವಿಗೀಡಾಗುವವರ ಸಂಖ್ಯೆ ಲಕ್ಷಕ್ಕೂ ಅಧಿಕ ಅಂದರೆ ಹಾವಿನ ಕುರಿತ ಭಯ ಮತ್ತಷ್ಟು ಹೆಚ್ಚಾಗುತ್ತದೆ. ಆದ್ರೆ ಇಲ್ಲೊಂದು ಘಟನೆಯಲ್ಲಿ ಮಹಿಳೆಯೊಬ್ಬರು ಅಚ್ಚರಿ ಎಂಬಂತೆ ಹಾವು ಕಡಿತದಿಂದ ಪಾರಾಗಿದ್ದಾರೆ. ಅದು ಒಂದೆರಡು ಬಾರಿಯಲ್ಲ ಬರೋಬ್ಬರಿ ೬ ಬಾರಿ ಹಾವು ಕಡಿದರೂ ಬದುಕುಳಿದಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ. ಬಹೋರಿಬಂದ್ ತಹಸಿಲ್ನ ಗುಣ ಬಾಚಯ್ಯ ಗ್ರಾಮದ ನಿವಾಸಿ ಪೂಜಾ ವ್ಯಾಸ್ ಆರು ರ‍್ಷಗಳಲ್ಲಿ ಆರು ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಆದಷ್ಟು ಬೇಗ ಚಿಕಿತ್ಸೆ ಪಡೆಯುವುದೊಂದೇ ದಾರಿ. ಭಾರತದ ಕೆಲವು ದೂರದ ಪ್ರದೇಶಗಳಲ್ಲಿ ಆ ಸೌಲಭ್ಯವೂ ಇಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ, ಹಾವು ಕಡಿತದಿಂದ ಬದುಕುಳಿಯುವುದು ಸುಲಭ. ಅದೇ ರೀತಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಮಹಿಳೆಯೊಬ್ಬರಿಗೆ ಬರೋಬ್ಬರಿ ೬ ಬಾರಿ ಹಾವು ಕಡಿದಿದೆ. ಆದರೆ ಆಕೆ ಪವಾಡ ವೆಂಬಂತೆ ಬದುಕುಳಿದಿದ್ದಾರೆ. ಅದು ಸಹ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಿದ ಕಾರಣದಿಂದಾಗಿ ಆಕೆ ಬದುಕುಳಿದಿರುವುದಾಗಿ ತಿಳಿದುಬಂದಿದೆ.
೬ ಬಾರಿಯೂ ಆಕೆ ಬದುಕುಳಿದಿದ್ದು ಹೇಗೆ? ಅಚ್ಚರಿಯ ವಿಚಾರ ಎಂದರೆ ಹಾವು ಕಡಿತಕ್ಕೆ ಒಳಗಾದಗೆಲ್ಲಾ ಆಕೆ ತಕ್ಷಣ ಆಸ್ಪತ್ರೆಗೆ ಬಂದಿದ್ದಳಂತೆ. ಎಲ್ಲಿಯೂ ಸಮಯ ವ್ರ‍್ಥ ಮಾಡದೆ. ಯಾವ ಪ್ರಥಮ ಚಿಕಿತ್ಸೆಯೂ ಮಾಡದೆ ಆಸ್ಪತ್ರೆಗೆ ಬಂದಿದ್ದಳಂತೆ. ಆಸ್ಪತ್ರೆ ಸಹ ಆಕೆಯ ಮನೆಯಿಂದ ಸ್ವಲ್ಪವೇ ದೂರದಲ್ಲಿತ್ತು. ಇದರ ಜೊತೆ ಹಾವು ಕಚ್ಚಿದಾಗ ಹೆಚ್ಚು ಆತಂಕಕ್ಕೆ ಆಕೆ ಒಳಗಾಗದೆ ಆಸ್ಪತ್ರೆಗೆ ಬಂದಿರುವುದು ಆಕೆ ಜೀವ ಉಳಿಯುವಲ್ಲಿ ಪ್ರಮುಖ ಕಾರಣವಾಗಿದೆ ಎಂದು ವೈದ್ಯರು ಸಹ ಹೇಳಿದ್ದಾರೆ. ಆಕೆಯ ಈ ಕಥೆ ಕೇಳಿದ ಸ್ಥಳೀಯರು ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ ೬ ಬಾರಿ ಹಾವು ಕಡಿತದಿಂದ ಆಕೆ ಬದುಕುಳಿದಿರುವುದು ನಿಜಕ್ಕೂ ಪವಾಡ ಎನ್ನುತ್ತಿದ್ದಾರೆ.