ಇಸ್ರೇಲ್ ಸೇನೆಗೆ ಅಯುಧಗಳಿಲ್ಲ ಅಂತ ಹೇಳಿದ ಅಮೆರಿಕ

Vijayanagara Vani
ಇಸ್ರೇಲ್ ಸೇನೆಗೆ ಅಯುಧಗಳಿಲ್ಲ  ಅಂತ ಹೇಳಿದ ಅಮೆರಿಕ

ಇಸ್ರೇಲ್ ಸೇನೆಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ, ಅದರಲ್ಲೂ ತನ್ನದೇ ತಪ್ಪಿಗಾಗಿ ಈಗ ಇಸ್ರೇಲ್ ಹಲವು ಸಂಕಷ್ಟ ಎದುರಿಸುತ್ತಿದೆ. ಒಂದು ಕಡೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕೂಡ ಇಸ್ರೇಲ್‌ಗೆ ಮುಖಭಂಗ ಆಗುತ್ತಿದೆ. ಇನ್ನೊಂದು ಕಡೆ ಇಸ್ರೇಲ್ ದೇಶಕ್ಕೆ ಈಗ ಮಿತ್ರರು ಕೂಡ ಶತ್ರುಗಳಾಗಿ ಬದಲಾಗುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಈ ವೇಳೆ, ಜಾಣ ನಡೆ ಇಡಬೇಕಿದ್ದ ಇಸ್ರೇಲ್ ಮತ್ತೊಮ್ಮೆ ದೊಡ್ಡ ತಪ್ಪು ಮಾಡುತ್ತಿದೆ.

ಇಸ್ರೇಲ್ ನಡೆಯ ಬಗ್ಗೆ ಅಮೆರಿಕ ಇದೀಗ ಕೆಂಡವಾಗಿದೆ. ಖುದ್ದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ನಿಗಿನಿಗಿ ಅಂತಿದ್ದಾರೆ. ಯಾಕಂದ್ರೆ ಇಸ್ರೇಲ್ ಮಾಡಿಕೊಳ್ಳುತ್ತಿರುವ ತಪ್ಪಿಗೆ ಅಮೆರಿಕ ಕೂಡ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ರಷ್ಯಾ ಸೇನೆ ಉಕ್ರೇನ್ ಮೇಲೆ ಯುದ್ಧ ಶುರು ಮಾಡಿದ್ದಾಗ ಇದೇ ಅಮೆರಿಕ ನೀತಿ ಪಾಠ ಮಾಡಿತ್ತು. ಆದರೆ ಈಗ ಇಸ್ರೇಲ್ ಸೇನೆ ಹಮಾಸ್ ನೆಪ ಹೇಳುತ್ತಾ ಗಾಜಾ ಪಟ್ಟಿ ಮತ್ತು ರಫಾ ಗಡಿ ಸೇರಿದಂತೆ ಪ್ಯಾಲೆಸ್ತೀನ್‌ನ ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಅಮೆರಿಕದ ನಡೆ ಕೂಡ ಬದಲಾಗುತ್ತಿದ್ದು, ಇಸ್ರೇಲ್‌ಗೆ ಕಂಟಕ ಎದುರಾಗುತ್ತಿದೆ.

ವೆಪನ್ಸ್ ಕೊಡಲ್ವಾ ಅಮೆರಿಕ? ಇಸ್ರೇಲ್ & ಹಮಾಸ್ ಯುದ್ಧ ನಿಲ್ಲಿಸಲು ಈಗಾಗಲೇ ಅಮೆರಿಕ ಮೇಲೆ ಒತ್ತಡ ಜೋರಾಗಿದೆ. ಪರಿಸ್ಥಿತಿ ಇಷ್ಟೆಲ್ಲಾ ಹಾಳಾಗಿ ಹೋಗಿದ್ದರು ಇಸ್ರೇಲ್ ಮಾತ್ರ ಅಮೆರಿಕ ಹೇಳುತ್ತಿರುವ ಮಾತು ಕೇಳುತ್ತಿಲ್ಲ. ಇದೇ ಕಾರಣಕ್ಕೆ ಎರಡೂ ದೇಶಗಳ ನಡುವೆ ಸ್ನೇಹ ಹಳಸುತ್ತಿದೆ. ಇಂತಹ ಸ್ಥಿತಿ ಇರುವಾಗಲೇ ಮತ್ತೊಂದು ಖಡಕ್ ಕ್ರಮ ಕೈಗೊಳ್ಳಲು ಅಮೆರಿಕ ಸಜ್ಜಾಗಿದೆ. ಅದ್ರಲ್ಲೂ ಈ ಮೂಲಕ ಇಸ್ರೇಲಿ ಪಡೆಗಳಿಗೆ ತಾನು ನೀಡುತ್ತಿದ್ದ ಅಸ್ತ್ರಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ, ಇಸ್ರೇಲ್‌ಗೆ ಬಹುತೇಕ ವೆಪನ್ಸ್ ಅಂದ್ರೆ ಶಸ್ತ್ರಾಸ್ತ್ರಗಳು ಬರುತ್ತಿರುವುದು ಅಮೆರಿಕದಿಂದ.

ಅಕಸ್ಮಾತ್ ಅಮೆರಿಕ ತಾನು ನೀಡುತ್ತಿರುವ ಅಸ್ತ್ರ ನಿಲ್ಲಿಸಿ, ಇಸ್ರೇಲ್‌ಗೆ ಶಾಕ್ ಕೊಟ್ಟರೆ ಕಥೆ ಏನು? 20 ಲಕ್ಷ ಜನರು ಅತಂತ್ರ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿರುವ ಆರೋಪದ ಪ್ರಕಾರ, 20 ಲಕ್ಷ ಜನ ಯುದ್ಧವು ಶುರುವಾದ ನಂತರ ಅತಂತ್ರ ಪರಿಸ್ಥಿತಿಗೆ ತಲುಪಿದ್ದಾರೆ ಎನ್ನಲಾಗಿದೆ. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಯುದ್ಧಕ್ಕೆ ಬಲಿಯಾಗಿದ್ದು ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಾ ಸಾಗುತ್ತಿದೆ. ರಫಾ ಗಡಿ ಪ್ರದೇಶ, ಇಲ್ಲಿಂದ ಮಾತ್ರ ಗಾಜಾಪಟ್ಟಿ ಜನ ಬೇರೆ ಬೇರೆ ದೇಶಕ್ಕೆ ಹೋಗಲು ಅವಕಾಶ ಇದೆ. ಹೀಗಾಗಿ ಲಕ್ಷಾಂತರ ಜನ ಗಾಜಾ ಪಟ್ಟಿ ಬಿಟ್ಟು ರಫಾ ಗಡಿಗೆ ಓಡೋಡಿ ಬಂದಿದ್ದರು ಈ ಮೂಲಕ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಈಗ ನೋಡಿದರೆ, ಸ್ಥಿತಿ ಇಲ್ಲೂ ಭಯಾನಕವಾಗಿದೆ. ಇಸ್ರೇಲ್ ಸೇನೆ ರಫಾ ಭಾಗದಲ್ಲೂ ದಾಳಿಯನ್ನ ಆರಂಭ ಮಾಡಿದೆ.

WhatsApp Group Join Now
Telegram Group Join Now
Share This Article
error: Content is protected !!