ಧರ್ಮಸ್ಥಳ ಸಂಸ್ಥೆಯಿಂದ ಮಾದಕ ವಸ್ತು ವಿರೋಧಿ ದಿನಾಚರಣೆ

Vijayanagara Vani
ಧರ್ಮಸ್ಥಳ ಸಂಸ್ಥೆಯಿಂದ ಮಾದಕ ವಸ್ತು ವಿರೋಧಿ ದಿನಾಚರಣೆ

ಕೊಟ್ಟೂರು : ತಾಲೂಕಿನ ಯೋಜನಾ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮತ್ತು ಬಾಗಿರಥಿ  ಪದವಿ ಪೂರ್ವ ಕಾಲೇಜ್ ಸಹಬಾಗಿತ್ವದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಆಚರಿಸಲಾಯಿತು ಕಾರ್ಯಕ್ರಮ ದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ನವೀನ್ ಕುಮಾರ್ ಮಾತನಾಡಿ ಮಾದಕ ವಸ್ತುಗಳ ಸೇವನೆ ಯಿಂದ ಆರೋಗ್ಯ ದ ಮೇಲೆ ಆಗುವ ದುಷ್ಟಪರಿಣಾಮ ಗಳ ಬಗ್ಗೆ ತಿಳಿಸಿದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಮದ್ಯ ವರ್ಜನಾ ಶಿಬಿರಗಳನ್ನು ಮಾಡಲಾಗುತ್ತಿದೆ. ಮೂಗ ಬಸವೇಶ್ವರ ಆಸ್ಪತ್ರೆ ಯ ವೈದ್ಯರಾದಂತಹ ಡಾ || ಮೂಗಬಸಪ್ಪ ರವರು ಬಿಡಿ, ಸಿಗರೇಟ್ ಸೇವನೆ, ಮದ್ಯಪಾನ, ಡ್ರಗ್ಸ್ ಸೇವನೆ ಯಿಂದ ಕ್ಯಾನ್ಸರ್ ಕಾಯಿಲೆ ಬರುತ್ತದೆ ಇದನ್ನು ವಾಸಿಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮಕ್ಕಳು ಓದಿನ ಕಡೆ ಹೆಚ್ಚು ಗಮನ ನೀಡಬೇಕು ಅಮಲು ಪದಾರ್ಥ ಗಳಬಗ್ಗೆ ಗಮನನಿಡಬಾರದೆಂದು ತಿಳಿಸಿದರು,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರೇವಣಸಿದ್ದಪ್ಪ ರವರು ಮಕ್ಕಳಲ್ಲಿ ಮಾದಕ ವಸ್ತುಗಳ ಸೇವನೆ ಯಿಂದ ಸಮಾಜದಲ್ಲಿ ಗೌರವ ಸಿಗುವುದಿಲ್ಲವೆಂದು ತಿಳಿಸಿದರು, ಶ್ರೀಮತಿ ನಿರ್ಮಲ ಶಿವನಗುತ್ತಿ ಯವರು ಮಕ್ಕಳು ಮಾದಕ ವಸ್ತುಗಳನ್ನು ಸೇವನೆ ಮಾಡಿ ದುಶ್ಚಟ ಕ್ಕೆ ಬಲಿಯಾಗಿ ವಿದ್ಯಾಭ್ಯಾಸ ವನ್ನು ಹಾಳುಮಾಡಿಕೊಳ್ಳದೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಕಲಿತು ಸಮಾಜದಲ್ಲಿ ಉತ್ತಮವ್ಯಕ್ತಿ ಆಗಬೇಕೆಂದು ತಿಳಿಸಿದರು.ಕಾರ್ಯಕ್ರಮ ದಲ್ಲಿ ಮೇಲ್ವಿಚಾರಕರಾದ ರುದ್ರೇಶ್, ಕೃಷಿ ಅಧಿಕಾರಿ ಮಹಾಂತೇಶ, ಸೇವಾಪ್ರತಿನಿಧಿ ಗಳಾದ ಸುಧಾ, ಲಕ್ಷ್ಮಿ ಹಾಗು ಶಾಲೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು

WhatsApp Group Join Now
Telegram Group Join Now
Share This Article
error: Content is protected !!