Ad image

ಯುವತಿ ಕಾಣೆ: ಪತ್ತೆಗೆ ಮನವಿ

Vijayanagara Vani
ಯುವತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜೂ.24
ಸಿರುಗುಪ್ಪ ಪಟ್ಟಣದ ಸದಾಶಿವ ನಗರದ ನಿವಾಸಿ ಈರಮ್ಮ ಎನ್ನುವ 25 ವರ್ಷದ ಯುವತಿ ಜೂ.21 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ 5 ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು, ಕೆಂಪನೇ ಮೈಬಣ್ಣ, ಹಸಿರು ಬಣ್ಣದ ಚೂಡಿದಾರ, ಹಸಿರು ಬಣ್ಣದ ಟಾಪ್ ಧರಿಸಿರುತ್ತಾಳೆ. ಕನ್ನಡ ಮತ್ತು ತೆಲುಗು ಭಾಷೆ ಮಾತಾನಾಡುತ್ತಾಳೆ.
ಯುವತಿಯ ಬಗ್ಗೆ ಮಾಹಿತಿ ಸಿಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ ದೂ.08396-220333, ಸಿರುಗುಪ್ಪ ವೃತ್ತ ಸಿ.ಪಿ.ಐ ದೂ.08396-220003, ಸಿರುಗುಪ್ಪ ಉಪವಿಭಾಗ ಡಿ.ಎಸ್.ಪಿ ದೂ.08392-276000, ಬಳ್ಳಾರಿ ಎಸ್.ಪಿ ಅವರ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";