Ad image

ಶಿಕ್ಷಕರ ಸಂಘಕ್ಕೆ ನೇಮಕ ಪದಾಧಿಕಾರಿಗಳಿಗೆ ಸನ್ಮಾನ:

Vijayanagara Vani
ಶಿಕ್ಷಕರ ಸಂಘಕ್ಕೆ ನೇಮಕ ಪದಾಧಿಕಾರಿಗಳಿಗೆ ಸನ್ಮಾನ:
ಗಂಗಾವತಿ: ನಗರದ ಶಿಕ್ಷಕರ ಗುರುಭವನದಲ್ಲಿ ಶನಿವಾರ ಮಧ್ಯಾಹ್ನ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಹನುಮಂತಪ್ಪ ಗಿಡ್ಡಿ ಇವರ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶಿಕ್ಷಕರ ಸಂಘದ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು.ವೇದಿಕೆ ಅಧ್ಯಕ್ಷತೆಯನ್ನು ಹನುಮಂತಪ್ಪ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗಂಗಾವತಿ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮತ್ತು ಗಂಗಾವತಿ ತಾಲೂಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷರಾದ ಶರಣಗೌಡ ಪೊಲೀಸ್ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗೌರವಾಧ್ಯಕ್ಷರಾದ ಚಾಂದ್ ಪಾಷಾ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್, ಮತ್ತು ಬಲ ಭೀಮಸೇನ, ಉಪಾಧ್ಯಕ್ಷರಾದ ರುದ್ರಗೌಡ ಪಾಟೀಲ್, ಶ್ರೀಮತಿ ಲತಾ ಎಸ್, ಖಜಾಂಚಿ ವಿರೂಪಾಕ್ಷಪ್ಪ ಮಾಲಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಹಟ್ಟಿ, ಶ್ರೀಮತಿ ರಾಜಮ್ಮ, ಸಹ ಕಾರ್ಯದರ್ಶಿ ಶ್ರೀಮತಿ ಶಾರದಮ್ಮ ಆಗಮಿಸಿದ್ದರು.ಶಿಕ್ಷಕರ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಶಿಕ್ಷಕರ ವಿದ್ಯೆಯನ್ನು ಕಲಿತ ಇಂದಿನ ಯುವಕರು, ರಾಜ್ಯ ಮತ್ತು ದೇಶವನ್ನು ಮುನ್ನಡೆಸುವಂತಹ ಉನ್ನತ ಹುದ್ದೆಗಳವರೆಗೆ ಮುಂದುವರೆದಿದ್ದಾರೆ, ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರವಾದದ್ದು ಇದಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಬರದ ಹಾಗೆ ಪ್ರಾಥಮಿಕ ಶಾಲಾ ಶಿಕ್ಷಕರು ನಡೆದುಕೊಳ್ಳಬೇಕು, ಸಂಘದಲ್ಲಿ ತಮಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಅರಿತು, ಶಿಕ್ಷಕರ ಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ತಮ್ಮದೇ ಆದ ಅಳಿಲು ಸೇವೆಯನ್ನು ಉತ್ತಮ ರೀತಿಯಲ್ಲಿ ಸಲ್ಲಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷರಾದ ಶರಣಗೌಡ ಮಾಲಿಪಾಟೀಲ್ ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶನ ರಾಜ್ಯ ಉಪಾಧ್ಯಕ್ಷರಾಗಿ ಗಂಗಾವತಿ ನಗರದ ಹಿರಿಯ ಶಿಕ್ಷಕರಾದ ಹನುಮಂತಪ್ಪ ಗಿಡ್ಡಿ ಇವರನ್ನು ಸರ್ವಾನುಮತದಿಂದ ರಾಜ್ಯ ಪದಾಧಿಕಾರಿಗಳು ರಾಜ್ಯ ಉಪಾಧ್ಯಕ್ಷರ ಹುದ್ದೆಗೆ ನೇಮಕ ಮಾಡಲಾಗಿತ್ತು, ಇದರ ಜೊತೆಗೆ ತಾಲೂಕ ಘಟಕದ ಕಾರ್ಯಕಾರಿ ಸಮಿತಿಗೆ ರಮೇಶ್ ನಾಯಕ ಇವರನ್ನು ನೇಮಕ ಮಾಡಲಾಗಿದೆ ಅದರಂತೆ, ಶ್ರೀಮತಿ ಸುವರ್ಣ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಹಾಗೂ ಶ್ರೀಮತಿ ಮಾಲಾ, ಶ್ರೀಮತಿ ಕವಿತಾ ಅಸುಂಡಿ ಇವರನ್ನು ಜಿಲ್ಲಾ  ಘಟಕ ನಾಮ ನಿರ್ದೇಶನ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಪದಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಗೌರವ ಸನ್ಮಾನವನ್ನು ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ ಸಿಲ್ಲಿನ್, ನಿಜಲಿಂಗಪ್ಪ ಮೆಣಸಿಗಿ, ಪತ್ರಪ್ಪ , ಶ್ರೀಮತಿ ಶಾರದಮ್ಮ, ಶ್ರೀಮತಿ ಮಂಜುಳಾ, ಶ್ರೀಧರ, ಗವಿಸಿದ್ದಪ್ಪ, ಶ್ರೀಮತಿ ಲೀಲಾವತಿ ಸೇರಿದಂತೆ ಅನೇಕ ಶಿಕ್ಷಕ, ಶಿಕ್ಷಕರು ಉಪಸ್ಥಿತರಿದ್ದರು.
Share This Article
error: Content is protected !!
";