ನಗರದತಾಲೂಕು ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ತಿರುಮಲೇಶ್.

Vijayanagara Vani
ನಗರದತಾಲೂಕು ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ತಿರುಮಲೇಶ್.

ಲೋಕ ಸಭೆ ಚುನಾವಣೆಗೆ ಸಕಲ ಸಿದ್ದತೆ

ಸಿರುಗುಪ್ಪ.ಮೇ.೦6: ಮೇ.೦7ರಂದು ನಡೆಯಲಿರುವಲೋಕಸಭಾ ಚುನಾವಣೆ ಅಂಗವಾಗಿ ತಾಲೂಕಿನಲ್ಲಿ ಸಕಲಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕಚುನಾವಣಾಧಿಕಾರಿ ತಿರುಮಲೇಶ್ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಭಾನುವಾಋ ನಡೆಸಿದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿವಿಧಾನಸಭಾ ಚುನಾವಣೆಯಲ್ಲಿ 2,10,881 ಮತದಾರರಿದ್ದರು.ಆದರೆ ಈ ಬಾರಿ ಹೊಸ ಮತದಾರರ ಸೇರ್ಪಡೆಯಿಂದಾಗಿ 2,25,326ಮತದಾರರಿದ್ದು, ಇದರಲ್ಲಿ 1,1೦,207 ಪುರುಷಮತದಾರರು, 1,15.018 ಮಹಿಳಾ ಮತದಾರರಿದ್ದು, ಇತರೆ ೪೪ಒಟ್ಟು, 2,2,329 ಮತದಾರರಿದ್ದು, ಪುರುಷ ಮತದಾರರಿಗಿಂತ4,811 ಮಹಿಳಾ ಮತದಾರರೆ ಹೆಚ್ಚಾಗಿರುತ್ತಾರೆ. 228 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 456 ಇ.ವಿ.ಎಂ. 228ವಿ.ವಿ.ಪ್ಯಾಟ್‌ಗಳನ್ನು ಸಿದ್ದಪಡಿಸಿಕೊಂಡಿದ್ದು, ಹೆಚ್ಚುವರಿಯಾಗಿ 104 ಇ.ವಿ.ಎಂ. ಮೆಷಿನ್ ಮತ್ತು 81  ವಿ.ವಿ.ಪ್ಯಾಟ್‌ಗಳನ್ನುಕಾಯ್ದಿರಿಸಲಾಗಿದೆ. ಯಾವುದೇ ಮತಗಟ್ಟೆಯಲ್ಲಿ

ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆಇ.ವಿ.ಎಮ್. ಮೆಷಿನ್ ಇಂಜಿನೀಯರ್‌ಗಳನ್ನು ಸಂಪರ್ಕಿಸಿ ತಕ್ಷಣವೇದೋಷ ಸರಿಪಡಿಸುವ ಅಥವಾ ಬೇರೆ ಮಿಷನ್ ಕೊಡುವವ್ಯವಸ್ಥೆ ಮಾಡಲಾಗುವುದು. ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ನುರಿತತರಬೇತುದಾರರಿಂದ ತರಬೇತಿಯನ್ನು ನೀಡಲಾಗಿದ್ದು,ಸುಗಮವಾಗಿ ಚುನಾವಣೆ ನಡೆಸಲು ಸಿಬ್ಬಂದಿಗೆ ವಿವಿರವಾದಮಾಹಿತಿಯನ್ನು ನೀಡಲಾಗಿದೆ.

ವಿವೇಕಾನಂದ ವಸತಿಶಾಲೆಯಲ್ಲಿ ಮತ ಪೆಟ್ಟಿಗೆಗಳನ್ನು ಸಿದ್ದಪಡಿಸಲಾಗಿದ್ದು,ಇಲ್ಲಿಂದಲೇ ಮತಗಟ್ಟೆಗಳಿಗೆ ಮತಪೆಟ್ಟಿಗೆಗಳನ್ನುಚುನಾವಣಾ ಸಿಬ್ಬಂದಿಯೊಂದಿಗೆ ಕಳುಹಿಸಲು 61ರೂಟ್‌ಗಳನ್ನು ಹಾಕಿಕೊಳ್ಳಲಾಗಿದ್ದು, ಬಸ್ ಮತ್ತುಟ್ರಾö್ಯಕ್ಸ್ ಮೂಲಕ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆತೆರಳಲಿದ್ದಾರೆ. ತಾಲೂಕಿನ ಸಿರಗುಪ್ಪ, ರಾರಾವಿ,ಹಳೇಕೋಟೆ ಗ್ರಾಮದಲ್ಲಿ ಒಂದು ಪಿಂಕ್ ಮತಗಟ್ಟೆ,ತೆಕ್ಕಲಕೋಟೆ, ಕೆಂಚನಗುಡ್ಡ ತಾಂಡದಲ್ಲಿ

ಸಾಂಪ್ರದಾಯಿಕ ಮತಗಟ್ಟೆಯನ್ನು ತೆರೆಯಲಾಗಿದೆ. ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತಸೌಲಭ್ಯಗಳಾದ ವಿದ್ಯುತ್, ರ‍್ಯಾಂಪ್, ಶೌಚಾಲಯ, ಕುಡಿಯುವನೀರು ವ್ಯವಸ್ಥೆಯನ್ನು ಸೆಕ್ಟರ್ ಅಧಿಕಾರಿಗಳ ಮೂಲಕಹಾಗೂ ಸ್ಥಳೀಯ ಅಧಿಕಾರಿಗಳ ಮೂಲಕ ವ್ಯವಸ್ಥೆಮಾಡಲಾಗಿದೆ. ನಮ್ಮಲ್ಲಿ ಮನೆ ಮನೆ ಮತದಾನಕ್ಕಾಗಿ 20 ಜನಅರ್ಜಿ ಸಲ್ಲಿಸಿದ್ದು, ಒಬ್ಬರು ಮೃತ ಪಟ್ಟಿದ್ದರಿಂದ 19

ಮತದಾರರ ಮನೆಗೆ ತೆರಳಿ ಮತವನ್ನು ಸಂಗ್ರಹಿಸಿಅವುಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.ತಾಲೂಕಿನಲ್ಲಿ 32 ಸೂಕ್ಷö್ಮ, ೮ ಅತಿಸೂಕ್ಷö್ಮ

ಮತಗಟ್ಟೆಗಳಿವೆ. ಚುನಾವಣೆಯ ಮತದಾನಕಾರ್ಯದಲ್ಲಿ ಪೊಲೀಸ್ ಹೊರತುಪಡಿಸಿ ೧೦೫೮ ಸಿಬ್ಬಂದಿಗಳುಕಾರ್ಯನಿರ್ವಹಿಸಲಿದ್ದಾರೆ. ತಾಲೂಕಿನಲ್ಲಿ ಅತಿ ಹೆಚ್ಚುಮತದಾರರನ್ನು ಹೊಂದಿರುವ ವಾರ್ಡ್ ೨, ಸರ್ಕಾರಿ ಪ್ರೌಢಶಾಲೆವಾದಿರಾಜನಗರ ಮತಗಟ್ಟೆಯಲ್ಲಿ , 1528 ಅತಿ ಕಡಿಮೆಮತದಾರರನ್ನು ಹೊಂದಿರು ತಾಲೂಕಿನ ಬಸರಳ್ಳಿ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 412ಮತದಾರರನ್ನು ಹೊಂದಿದೆ.ಪ್ರತಿಮತಗಟ್ಟೆಯಲ್ಲಿಅಣಕುಮತದಾನಮಾಡಲಾಗುವುದು. ಮೇ.೦೭ರಂದು ಬೆಳಿಗ್ಗೆ೫ಗಂಟೆಗೆ ಪ್ರತಿ ಮತಗಟ್ಟೆಯಲ್ಲಿ ಅಣಕುಮತದಾನವನ್ನು ಚುನಾವಣೆ ಸಿಬ್ಬಂದಿ ಏಜೆಂಟರ ಸಮ್ಮುಖದಲ್ಲಿಪ್ರದರ್ಶನ ನಡೆಸಲಾಗುವುದು.ಬೆಳಿಗ್ಗೆ ೭-೦೦ ಗಂಟೆಯಿAದ ಸಂಜೆ ೬-೦೦ ಗಂಟೆ ವರೆಗೆಮತದಾರರು ಮತದಾನ ಮಾಡಲು ಅವಕಾಶವಿರುತ್ತದೆ.ಆದ್ದರಿಂದ ಪ್ರತಿಯೊಬ್ಬ ಮತದಾರರು ತಮ್ಮ ಮತದಾನದಹಕ್ಕನ್ನು ಚಲಾಯಿಸಬೇಕೆಂದು ಕರೆ ನೀಡಿದರುತಹಶೀಲ್ದಾರ್ ಶಂಷಾಲ ಇದ್ದರು.

WhatsApp Group Join Now
Telegram Group Join Now
Share This Article
error: Content is protected !!