ಬೇಸಿಗೆ ಬಂತೆಂದರೆ ದೇಹದ ಉಷ್ಣತೆಯಿಂದ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಈ ಋತುವಿನಲ್ಲಿ ತಾಪಮಾನ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ನೀರು ಕುಡಿಯಬೇಕು. ಪಾನೀಯಗಳನ್ನು ಆಗಾಗ ತೆಗೆದುಕೊಳ್ಳಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸಬೇಕು. ಹಣ್ಣಿನಲ್ಲಿ ವಿಶೇಷವಾಗಿ ಕಲ್ಲಂಗಡಿ, ಕರ್ಬೂಜಾ ಜೊತೆಗೆ ಸೌತೇಕಾಯಿ, ಪೇರು ಹಣ್ಣು ಇವೆಲ್ಲವೂ ದೇಹಕ್ಕೆ ತಂಪನ್ನು ನೀಡುತ್ತವೆ. ಈ ಹಣ್ಣುಗಳ ಸಾಲಿನಲ್ಲಿ ತಾಳೆ ಹಣ್ಣು ಕೂಡ ಸೇರಿದೆ.
ತಾಲೆ ಹಣ್ಣು ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುತ್ತದೆ. ಕೈಯಲ್ಲಿ ಜಾರುವ, ಬಾಯಲ್ಲಿ ಕರಗುವ ತಾಳೆ ಹಣ್ಣು ಆರೋಗ್ಯಕ್ಕೆ ಆಸ್ತಿ ಅಂತಲೇ ಹೇಳಬಹುದು. ಹಾಗಾದರೆ ತಾಳೆ ಹಣ್ಣಿನಲ್ಲಿರುವ ಆರೋಗ್ಯಕರ ಪ್ರಯೋಜನಗಳು ಯಾವವು? ಅವುಗಳಿಂದ ದೇಹಕ್ಕೆ ಯಾವೆಲ್ಲಾ ಲಾಭವಿದೆ ಎನ್ನುವುದನ್ನು ತಿಳಿಯೋಣ.
ಪೋಷಕಾಂಶಗಳ ಆಗರ: ತಾಳೆ ಹಣ್ಣು ಸಾಕಷ್ಟು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ವಿಟಮಿನ್ ಬಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿವೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವಿದೆ .ದೇಹದಲ್ಲಿನ ಕೆಟ್ಟ ಕೊಬ್ಬನ್ನು ನಿಯಂತ್ರಿಸುವ ಶಕ್ತಿ ಇದಕ್ಕಿದೆ.
ಈ ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನಲು 5 ಕಾರಣಗಳು ಇಲ್ಲಿವೆ:
- ಆರೋಗ್ಯಕರ ಆಹಾರವಾಗಿದ್ದು, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.
- ಪೌಷ್ಟಿಕತಜ್ಞರ ಪ್ರಕಾರ, ಆಗಾಗ್ಗೆ ತಲೆನೋವು ಮತ್ತು ಆಮ್ಲೀಯತೆಯ ಘಟನೆಗಳಿಗೆ ಈ ತಾಳೆ ಹಣ್ಣು ಉತ್ತಮ ಪರಿಹಾರವಾಗಿದೆ.
- ನೀವು ಮಲಬದ್ಧತೆ ಇಲ್ಲದಿದ್ದಾಗ ಈ ಹಣ್ಣು ತಿನ್ನಿವುದು ಉತ್ತಮ ಆಯ್ಕೆಯಾಗಿದೆ.
- ಈ ತಾಳೆ ಹಣ್ಣು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
- ಬೇಸಿಗೆಯ ದಿನಗಳು ನಿಮ್ಮಗೆ ಕಿರಿಕಿರಿಯನ್ನು ಉಂಟುಮಾಡುವುದರಿಂದ ಈ ತಾಳೆಹಣ್ಣು ಸೇವನೆಯೂ ನಿಮ್ಮ ದೇಹ ತಂಪು ನೀಡುತ್ತದೆ ಮತ್ತು ಕಿರಿಕಿರಿಯಿಂದ ಶಾಂತಗೊಳಿಸುತ್ತದೆ.