ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಸರ್ಕಾರ ವಿಫಲ ಬಿಜೆಪಿ ಮಹಿಳಾ ಮೋರ್ಚ ಆರೋಪ

Vijayanagara Vani
ಮಹಿಳೆಯರ ಮೇಲೆ ನಡೆಯುತ್ತಿರುವ  ದೌರ್ಜನ್ಯ  ತಡೆಯುವಲ್ಲಿ ಸರ್ಕಾರ ವಿಫಲ ಬಿಜೆಪಿ ಮಹಿಳಾ ಮೋರ್ಚ ಆರೋಪ

ಬಳ್ಳಾರಿ ಮೇ  18   ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜ್ಯನ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು ಅವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ, ಇತ್ತಿಚೆಗೆ ಯುವತಿಯರ ಕೊಲೆ ಪ್ರಕರಣಗಳು ಹೆಚ್ಚಾಗಿದ್ದು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಬಿಜೆಪಿ ಮಹಿಳಾ ಯುವ ಮೋರ್ಚಾದವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಗೃಹಮಂತ್ರಿಗಳಿಗೆ  ಮನವಿ ಪತ್ರ ಸಲ್ಲಿಸಿ ಆರೋಪಿಸಿದ್ದಾರೆ.  

ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಇಲಾಖೆಗೆ ಪತ್ರವ ಬರೆದು, ಹುಬ್ಬಳಿಯ ನೇಹಾ ಹಿರೇಮಠ್ ಹತ್ಯೆಯ ಬೆನ್ನಲೆ ಹುಬ್ಬಳ್ಳಿ ನಗರದಲ್ಲಿ ಅಂಜಲಿಯ ಹತ್ಯೆ ಹಾಗೂ ಕೊಡಗಿನ ಸೋಮವಾರಪೇಟೆಯ 16 ವರ್ಷದ ಅಪ್ರಾಪ್ತೆ ಮೀನಾಳ ಹತ್ಯೆಯಾಗಿದೆ, ಕೊಲೆಗಾರರಿಗೆ ಭಯವೆಂಬುದೇ ಇಲ್ಲವಾಗಿದೆ, ಕಾರಣ ಈ ಕೊಲೆಗಡುಕರಿಗೆ ಕಠಿಣ ಶಿಕ್ಷಯನ್ನು ನೀಡುವ ಮೂಲಕ ಭಯಬೀತರನ್ನಾಗಿಸಬೇಕು, ಮತ್ತು ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ ಕೊಲೆ ಘಟನೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಸಿ.ಬಿ.ಐ ಗೆ ಒಪ್ಪಿಸಬೇಕು ಮತ್ತು ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಮೇಲೆ ನಡೆಯತ್ತಿರುವ ಈ ದೌರ್ಜನ್ಯವನ್ನು  ತಡೆಗಟ್ಟಬೇಕು  ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಸಾಧನ‌ ಹಿರೇಮಠ ಜ್ಯೋತಿ ಪ್ರಕಾಶ್ ಮಹಿಳಾ ಮೊರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ ಅದ್ಯಕ್ಷ ರು ನಗರ ಮಹಿಳಾ ಮೊರ್ಚಾ ರಾಜೇಶ್ವರಿ ಗೌಸಿಯಾ ಮೇಘನ ಜೋಶಿ ಶೈಲ ಸೀತಾರಾಮ ರೊಪ ಪುಷ್ಪ ಚಾಂದಿನಿ ಉಷಾ ಪರಿಮಳ ಪವಿತ್ರ, ತನುಶ್ರಿ, ಕ್ರಪಾವತಿ, ಗೀತಾ, ಉಷಾ ಪಾಟೀಲ್ ಸೇರಿದಂತೆ ಮಹಿಳಾ ಘಟಕದ ಹಲವಾರಿದ್ದರು.

WhatsApp Group Join Now
Telegram Group Join Now
Share This Article
error: Content is protected !!