ಹೃದಯ ಸ್ತಂಭನವು ಹೃದಯ ಬಡಿತ ಪ್ರಕ್ರಿಯೆಯನ್ನು ಏಕಾಏಕಿ ನಿಲ್ಲಿಸುತ್ತದೆ. (ಹೃದಯ ಬಡಿತವಿಲ್ಲದಿರುವುದನ್ನು ಸ್ಪರ್ಶಗೋಚರದಿಂದ ಅನುಭವಕ್ಕೆ ಬರುತ್ತದೆ). ಹೃದಯ ಸ್ತಂಭನವು ಸಾಮಾನ್ಯವಾಗಿ ಶೀಘ್ರ ಮಧ್ಯಪ್ರವೇಶದಿಂದ ಅಂದರೆ ಚಿಕಿತ್ಸೆ ನೀಡಿದಲ್ಲಿ ಮೊದಲಿನ ಸ್ಥಿತಿಗೆ ಬರುತ್ತದೆ. ಆದರೆ ಮಧ್ಯಪ್ರವೇಶ ಮಾಡದೇ ಇದ್ದಲ್ಲಿ ಇದು ಸಾವಿನ ಮನೆಗೆ ಕೊಂಡೊಯ್ಯುವುದು ನಿಶ್ಚಿತವಾಗಿದೆ. ಕೆಲ ಪ್ರಕರಣಗಳಲ್ಲಿ ನಿರೀಕ್ಷಿತ ಫಲಿತಾಂಶವಾಗಿ ತೀವ್ರ ಅಸ್ವಸ್ಥರಾಗುತ್ತಾರೆ.ಆದಾಗ್ಯೂ ಮೆದುಳಿಗೆ ಆವರಿಸಬೇಕಾದ ಸಾಮರ್ಥ್ಯದಲ್ಲಿ ಕಡಿಮೆಯಾದರೆ, ಆ ರೋಗಿಯು ಪ್ರಜ್ಞಾಹೀನನಾಗುತ್ತಾನೆ ಮತ್ತು ಉಸಿರಾಟವನ್ನು ನಿಲ್ಲಿಸುತ್ತಾನೆ. ಮುಖ್ಯವಾಗಿ ರೋಗ ನಿರ್ಣಯಕ್ಕೆ ಮಾನದಂಡವಾಗಿ ಹೃದಯಸ್ತಂಭನಕ್ಕೆ ಚಿಕಿತ್ಸೆಯನ್ನು ನೀಡಲಾಗುತ್ತದೆ. (ಇದಕ್ಕೆ ವಿರುದ್ಧವಾಗಿ ಉಸಿರಾಟ ಅಥವಾ ಶ್ವಾಸೋಚ್ವ್ಸಾಸದ ಸ್ತಂಭನವು ಇದೇ ರಿತಿಯ ಹಲವು ಲಕ್ಷಣಗಳನ್ನು ಹಂಚಿಕೊಂಡಿರುತ್ತದೆ.) ರಕ್ತಸಂಚಾರದ ಕೊರತೆಯಿರುತ್ತದೆ. ಆದರೂ ಇದನ್ನು ನಿರ್ಧರಿಸಲು ಹಲವಾರು ದಾರಿಗಳು ಇರುತ್ತದೆ.
ಹೃದಯಕ್ಕೆ ರಕ್ತಒದಗಿಸುವ ರಕ್ತನಾಳಕ್ಕೆ ಸಂಬಂಧಿಸಿದ ರೋಗವು ದಿಢೀರ್ ಹೃದಯ ಸ್ತಂಭನಕ್ಕೆ ಪ್ರಮುಖ ಕಾರಣವಾಗಬಹುದು. ಕೆಲವು ಹೃದಯ ಸಂದಂಧಿ ಮತ್ತು ಹೃದಯೇತರ ಆರೋಗ್ಯ ಸ್ಥಿತಿಯೂ ತೊಂದರೆಯನ್ನು ಹೆಚ್ಚು ಮಾಡುತ್ತದೆ.
ಹೃದಯಕ್ಕೆ ಸಂಬಂಧಿಸಿದ ರಕ್ತನಾಳ ರೋಗ
ಅಂದಾಜಿನಂತೆ 60ರಿಂದ 70 ಪ್ರತಿಶತದಷ್ಟು ಎಸ್ ಸಿ ಡಿ (ಹಠಾತ್ ಹೃದಯ ಸಾವು) ಯು ಹೃದಯಕ್ಕೆ ಸಂಬಂಧಿಸಿದ ರಕ್ತನಾಳದಿಂದ ಉಂಟಾಗುವ ರೋಗದಿಂದ ಸಂಭವಿಸುತ್ತದೆ. ವಯಸ್ಕರಲ್ಲಿ ಹೃದಯಕ್ಕೆ ರಕ್ತಕೊರತೆಯ ರೋಗವು ಹೃದಯಸ್ತಂಭನಕ್ಕೆ ಪ್ರಬಲವಾದ ಕಾರಣವಾಗಿದೆ. ಶೇಕಡಾ 30ರಷ್ಟು ಜನರ ಶವಪರೀಕ್ಷೆ ವೇಳೆ ಅವರ ಹೃದಯದ ಸ್ನಾಯುವಿನ ಊತಕ ಸತ್ತುಹೋಗಿರುವ ಕರುಹು ಕಾಣಸಿಗುತ್ತದೆ.
ರಕ್ತಕೊರತೆ ಇಲ್ಲದ ಹೃದ್ರೋಗ[
ಹಲವು ಸಂಖ್ಯೆಯ ಹೃದಯ ಸಂಬಂಧೀ ವೈಪರಿತ್ಯಗಳಿಂದಾಗಿ ಎಸ್ ಸಿ ಡಿ (ಹಠಾತ್ ಹೃದಯ ಸಾವು) ಯ ತೊಂದರೆ ಹೆಚ್ಚಾಗುತ್ತದೆ. ಇದು ಕಾರ್ಡಿಯೋಮ್ಯೂಪತಿ, ಹೃದಯ ಬಡಿತದಲ್ಲಿ ಅಡಚಣೆ, ಹೃದಯದ ಅಧಿಕ ರಕ್ತದೊತ್ತಡ ರೋಗ, ರಕ್ತಸಂಚಾರದಿಂದಾದ ಹೃದಯ ವೈಫಲ್ಯವನ್ನು ಒಳಗೊಂಡಿದೆ. ಮಿಲಟರಿಯಲ್ಲಿರುವ 18ರಿಂದ 35 ವಯಸ್ಸಿನ ಅನನುಭವಿ ಸೈನಿಕರ ಗುಂಪಿನಲ್ಲಿ, ಹೃದಯ ಅಸಮತೋಲನತೆಯ ಶೇಕಡಾ 51ರಷ್ಟು ಎಸ್ ಸಿ ಡಿ ಪ್ರಕರಣವು ಸಿಗುತ್ತದೆ. ಇದರಲ್ಲಿ ಶೇಕಡಾ 35 ರಷ್ಟು ಪ್ರಕರಣಗಳ ಕಾರಣಗಳು ತಿಳಿಯುವುದಿಲ್ಲ. ರೋಗಶಾಸ್ತ್ರದ ಆಧಾರದ ಮೇಲೆ ಹೃದಯದ ಅಪಧಮನಿ (ಹೃದಯದಿಂದ ಇತರ ಭಾಗಗಳಿಗೆ ರಕ್ತ ಒಯ್ಯುವ ನಾಳ) ಯ ವೈಪರೀತ್ಯವು (ಶೇಕಡಾ 61), ಹೃದಯ ಸ್ನಾಯುವಿನ ಉರಿಯೂತ (ಶೇಕಡಾ 20), ಮತ್ತು ಅತಿಯಾಗಿ ಬೆಳೆದ ಕಾರ್ಡಿಯೋಮ್ಯೋಪಥಿ ಅವಯವ (ಶೇಕಡಾ 13) ಇರುತ್ತದೆ ಎಂದು ಹೇಳಲಾಗಿದೆ. ರಕ್ತದೊತ್ತಡದ ಹೃದಯ ವೈಫಲ್ಯವು ಎಸ್ ಸಿ ಡಿ ತೊಂದರೆಯನ್ನು ಐದು ಪಟ್ಟು ಹೆಚ್ಚಾಗಿಸುತ್ತದೆ
ಹೃದಯನಾಳೇತರ ಸಮಸ್ಯೆಗಳು
ಎಸ್ ಸಿ ಡಿ (ಹಠಾತ್ ಹೃದಯ ಸಾವು) ವು ಶೇಕಡಾ 33ರಷ್ಟು ಪ್ರಕರಣಗಳಲ್ಲಿ ಹೃದಯ ತೊಂದರೆಗೆ ಸಂಬಂಧಿಸಿದ್ದಾಗಿರುವುದಿಲ್ಲ. ಹೃದ್ರೋಗವಲ್ಲದ ಮುಖ್ಯವಾದ ಸಾಮಾನ್ಯ ಕಾರಣಗಳೆಂದರೆ, ಮಾನಸಿಕ ಅಥವಾ ದೈಹಿಕ ಆಘಾತ (ಗಾಯ), ದೈಹಿಕ ಗಾಯಕ್ಕೆ ಸಂಬಂಧಿಸಲ್ಲದ ರಕ್ತಸ್ರಾವ (ಅವುಗಳೆಂದರೆ ಕರುಳಿನಭಾಗದಲ್ಲಿನ ರಕ್ತಸ್ರಾವ, ಮಹಾಪಧಮನಿ ಬಿರುಕಿನಿಂದ ಉಂಟಾದ ಊತ ಮತ್ತು ತಲೆಬುರುಡೆಯೊಳಗಿನ ಆಘಾತ, ಅತಿಯಾದ ಪ್ರಮಾಣದ ಔಷಧಿ ಸೇವನೆ, ರಕ್ತನಾಳದಲ್ಲಾಗುವ ಅಡಚನೆಯಿಂದ ಶ್ವಾಸಕೋಶದಲ್ಲಿ ತೊಂದರೆಯಾಗಿ ಉಸಿರುಗಟ್ಟುವುದು.