ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಚಂದ್ರಶೇಖರ್.ಡಿ.ಉಪ್ಪಾರ್ ಅವಿರೋಧ ಆಯ್ಕೆ.

Vijayanagara Vani
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಚಂದ್ರಶೇಖರ್.ಡಿ.ಉಪ್ಪಾರ್ ಅವಿರೋಧ ಆಯ್ಕೆ.

ದೊಡ್ಡಬಳ್ಳಾಪುರ : ಪತ್ರಕರ್ತರ ಕಷ್ಟಗಳಿಗೆ ಸದಾ ಸ್ಪಂದಿಸುವ, ನೊಂದ ಪತ್ರಕರ್ತರ ಬೆಂಬಲವಾಗಿ ನಿಂತು ಶಕ್ತಿ ತುಂಬುವ   ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು. ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ  ಅನುಭವಿ ಪತ್ರಕರ್ತ  ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದಿನಪತ್ರಿಕೆ ವರದಿಗಾರಾದ ಚಂದ್ರಶೇಖರ್ .ಡಿ. ಉಪ್ಪಾರ್ ಅವರನ್ನು ಆಯ್ಕೆ ಮಾಡಲಾಗಿದೆ.


ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಣೆ ಮಾಡಿ ಮಾತನಾಡಿದ ಅವರು  ಪತ್ರಿಕೋದ್ಯಮ ಎಂಬುದು ವಾಣಿಜ್ಯ ಉದ್ಯಮವಲ್ಲ. ಇದೊಂದು ಸೇವೆ  ಸಮಾಜದ ಅಂಕು – ಡೊಂಕುಗಳನ್ನು ಸರಿಪಡಿಸುವ ಮಹತ್ಕಾರ್ಯ  ನಮ್ಮ ಪತ್ರಕರ್ತರಿಗೆ ಲಭಿಸಿದೆ.  ಉತ್ತಮ ಬರವಣಿಗೆ ನಮ್ಮೆಲ್ಲರ ಶಕ್ತಿಯಾಗಬೇಕಿದೆ. ನಿಮ್ಮ ಬೆಂಬಲಕ್ಕೆ ನಮ್ಮ ಸಂಘ ಸದಾ ಸಿದ್ಧವಿದ್ದು. ತಾಲ್ಲೂಕಿಗೆ  ಉತ್ತಮ ನಾಯಕತ್ವ ದೊರೆತಿದೆ ಎಂಬ ಭಾವನೆ ಇದೆ. ತಾಲ್ಲೂಕು ಘಟಕದಲ್ಲಿ  ಉತ್ತಮ ಅನುಭವಿ ಪತ್ರಕರ್ತರ ತಂಡವಿದ್ದು . ಸಂಘದ ಕಾರ್ಯವು ಸ್ಥಳೀಯ ಪತ್ರಕರ್ತರ ಅಭಿವೃದ್ಧಿಗೆ ಕಾರಣವಾಗಲಿ ಎಂದು ಹಾರೈಸಿದರು.
ಸಂಘದ ನೂತನ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಡಿ ಉಪ್ಪಾರ ಮಾತನಾಡಿ  ಪತ್ರಿಕೋದ್ಯಮದಲ್ಲಿ ನನ್ನ ಸೇವೆಯನ್ನು ಗಮನಿಸಿ ಹಿರಿಯರು ಕಲ್ಪಿಸಿ ಕೊಟ್ಟಿರುವ  ಉತ್ತಮ ಅವಕಾಶವನ್ನು ಸಂಘದ ಉನ್ನತಿಕರಣಕ್ಕೆ   ಹಾಗೂ ಪತ್ರಕರ್ತರ ಅಭಿವೃದ್ಧಿಗೆ  ಸದ್ಬಳಕೆ ಮಾಡಲಾಗುವುದು. ತಾಲ್ಲೂಕಿನಲ್ಲಿ ಪತ್ರಕರ್ತರ ಸಮಸ್ಯೆಗಳು ಸಾಕಷ್ಟಿದ್ದು, ತ್ವರಿತ ಗತಿಯಲ್ಲಿ ಸ್ಪಂದಿಸಲಾಗುವುದು. ಹಿರಿಯರ ಹಾಗೂ ಹಿತೈಷಿಗಳ ಮಾರ್ಗದರ್ಶನದೊಂದಿಗೆ ಸಂಘದ ನೂತನ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘದ ಕಾರ್ಯ ಚಟುವಟಿಕೆ ನಡೆಯಲಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್ ಮಾತನಾಡಿ  ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಮುಖಾಂತರ ಸಂಘದ ಕಾರ್ಯ ಚಟುವಟಿಕೆಗಳಿಗೆ ಮತ್ತಷ್ಟು ಬಲ  ನೀಡಿದ್ದೇವೆ. ನೂತನ ಪದಾಧಿಕಾರಿಗಳು ತಾಲ್ಲೂಕಿನ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ. ಸಂಘದಿಂದ ಪತ್ರಕರ್ತರ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ 
ಗೌರವಾಧ್ಯಕ್ಷ ಕೆ ಸಿ ರುದ್ರೇಶ್, ತಾಲೂಕು ಅಧ್ಯಕ್ಷ  ಚಂದ್ರಶೇಖರ್ ಡಿ ಉಪ್ಪಾರ್, ಉಪಾಧ್ಯಕ್ಷ – ಕೊತ್ತೂರಪ್ಪ,ಜೆ ಮುನಿರಾಜು, ಎಂ ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿ  – ಚಂದ್ರಪ್ಪ ( ನೆಲ್ಲುಗುದ್ದಿಗೆ ) ಕಾರ್ಯದರ್ಶಿಗಳಾಗಿ – ಪುರುಷೋತ್ತಮ ಗೌಡ, ಪುರುಷೋತ್ತಮ ಟಿವಿ,
ಸೈಯದ್ ಅಬ್ದುಲ್ ರೆಹಮಾನ್ , ಖಜಾಂಚಿಗಳಾಗಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದು.ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಕ್ತಾರ್ ಅಹಮದ್ ಸಿದ್ದಿಕ್ಕಿ ,ಎಂ ಮುನಿಯಪ್ಪ, ಪ್ರದೀಪ್,ಭೀಮೇಶ್,ಶ್ರೀನಿವಾಸ್ ತೆರಿದಾಳ್, ಗಂಗರಾಜು, ಲಿಂಗರಾಜ್, ಕೆ.ಮ್.ಸಂತೋಷ್,ಎನ್.ಎಂ.ನಟರಾಜ್,
ಮನುಕುಮಾರ್,ವೀರೇಂದ್ರನಾಥ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ನಿರ್ಧೇಶಕರು ರಫಿ ಉಲ್ಲಾ, ಮುರಳಿ ಮೋಹನ್, ಸುಗ್ಗರಾಜು, ಆನಂದ್, ರಾಘವೇಂದ್ರ ಆಚಾರ್ ,ದಿನ್ನೂರು ಮಂಜುನಾಥ್,ದೇವರಾಜು, ಬೀದಿ ಮನೆ ರಮೇಶ್, ಶರದೃತು ಸತೀಶ್ ಸೇರಿದಂತೆ ಹಲವು ಪತ್ರಕರ್ತ ಮುಖಂಡರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!