ಕೊರೊನಾ ನಂತರ ಬಂದಿದೆ ಭೀಕರ ಫ್ಲಷ್ ಈಟಿಂಗ್ ಬ್ಯಾಕ್ಟಿರಿಯಾ. ಜಪಾನ್ನಲ್ಲಿ 1000 ಜನರಿಗೆ ಈ ಸೋಂಕು ತಗುಲಿದ್ದು ಭಯ ಹುಟ್ಟಿಸಿದೆ. ಈ ಸೋಂಕಿನ ಭೀಕರತೆ ಎಂದರೆ ಇದು ತಗುಲಿದ ಕೆಲವೇ ಗಂಟೆಗಳಲ್ಲಿ ವ್ಯಕ್ತಿ ಸಾವನ್ನಪ್ಪುತ್ತಿದ್ದಾರೆ. ಜೂನ್ 2ಕ್ಕೆ 977 ಕೇಸ್ ದಾಖಲಾಗಿತ್ತು, ಇದೀಗ ಅದರ ಸಂಖ್ಯೆ 941ಕ್ಕೆ ಏರಿಕೆಯಾಗಿದೆ ಎಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್ಫೆಕ್ಷಯಸ್ ಡಿಸೇಜ್ ಹೇಳಿದೆ.
ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS ) STSS ಎಂಬುವುದು ಅಪರೂಪದ ಬ್ಯಾಕ್ಟಿರಿಯಾ ಸೋಂಕು ಆಗಿದೆ. ಇದು ರಕ್ತನಾಳದ ಒಳಗಡೆ ಹೊಕ್ಕಿ ದೇಹದಲ್ಲಿ ವಿಷಾಂಶ ಹಚ್ಚಿಸಿ ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ತುಂಬಾನೇ ಕಷ್ಟವಾಗುವುದು.
STSS ಕಾಯಿಲೆಯ ಲಕ್ಷಣಗಳು ಚಳಿ ಜ್ವರ, ಮೈಕೈ ನೋವು, ವಾಂತಿ ಈ ಬಗೆಯ ಲಕ್ಷಣಗಳು 24-48 ಗಂಟೆಯ ಒಳಗಡೆ ಉಂಟಾಗುವುದು. ವಯಸ್ಸಾದವರಿಗೆ ಊತ, ಜ್ವರ ಕಡಿಮೆ ರಕ್ತದೊತ್ತಡ, ಅಂಗಾಂಗಗಳ ವೈಫಲ್ಯ, ಅತ್ಯಧಿಕ ಹೃದಯ ಬಡಿತ, ತೀವ್ರ ಉಸಿರಾಟ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಮಕ್ಕಳಲ್ಲಿ ಗಂಟಲು ಕೆರೆತ ನೋವು ಕಂಡು ಬಂದರೆ, ದೊಡ್ಡವರಲ್ಲಿ ಸ್ನಾಯುಗಳಲ್ಲಿ ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಇದರಿಂದಾಗಿ ಉಸಿರಾಟದಲ್ಲಿ ತೊಂದರೆ , ಅಂಗಾಂಗಗಳ ವೈಫಲ್ಯ ಉಂಟಾಗುವುದು. 50 ವರ್ಷ ಮೇಲ್ಪಟ್ಟವರಲ್ಲಿ ಸಾವು ಕೂಡ ಸಂಭವಿಸಲಿದೆ.ಈ ಕಾಯಿಲೆ ಬಂದ ತಕ್ಷಣ ಕೂಡಲೇ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ಕಡಿಮೆಯಾಗುವುದು. ಈ ಸೋಂಕು ತಡೆಗಟ್ಟುವುದು ಹೇಗೆ? ಶುಚಿತ್ವ ಕಡೆಗೆ ತುಂಬಾನೇ ಗಮನಹರಿಸಬೇಕು. ಸೋಪು ಹಚ್ಚಿ ಚೆನ್ನಾಗಿ ಕೈ ತೊಳೆಯಿರಿ. ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡಹಿಡಿಯಿರಿ.
ಪತ್ತೆಹಚ್ಚುವುದು ಹೇಗೆ? STSS ಬಗ್ಗೆ ಅನೇಕ ರೀತಿಯಲ್ಲಿ ಪರೀಕ್ಷೆ ಮಾಡಬೇಕು. ರಕ್ತ ಪರೀಕ್ಷೆ ಮಾಡಲಾಗುವುದು. ಈ ಸೋಂಕು ತಗುಲಿದರೆ ಕಿಡ್ನಿ, ಲಿವರ್ ಈ ಬಗೆಯ ಅಂಗಾಂಗಗಳ ವೈಫಲ್ಯ ಉಂಟಾಗಿರುತ್ತದೆ. ಚಿಕಿತ್ಸೆಯೇನು? ಬ್ಯಾಕ್ಟಿರಿಯಾ ಕೊಲ್ಲಲು antibiotics ಅನ್ನು ಐವಿ ಮೂಲಕ ನೀಡಲಾಗುವುದು, ರೋಗಿಯ ದೇಹದಲ್ಲಿ ರಕ್ತದೊತ್ತಡ ಸರಿಯಾಗಿದ್ದರೆ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಕೆಲವು ಕೇಸ್ಗಳಲ್ಲಿ ಸರ್ಜರಿ ಕೂಡ ಬೇಕಾಗುವುದು. ಇದರಿಂದಾಗಿ ಈ ಸೋಂಕಿನಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬಹುದು.