ಅಸ್ವಸ್ಥಗೊಂಡ ವಸತಿ ನಿಲಯದ ವಿದ್ಯಾರ್ಥಿಗಳನ್ನು ವಿಚಾರಿಸಿದ : ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ

Vijayanagara Vani
ಅಸ್ವಸ್ಥಗೊಂಡ ವಸತಿ ನಿಲಯದ ವಿದ್ಯಾರ್ಥಿಗಳನ್ನು ವಿಚಾರಿಸಿದ : ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ
ಮಾನ್ವಿ: ಪಟ್ಟಣದಲ್ಲಿನ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜೆಡಿಎಸ್ ಪ.ಪಂಗಡ ಮೋರ್ಚಾದ ರಾಜ್ಯಧ್ಯಕ್ಷ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಭೇಟಿ ನೀಡಿ ರಾಜಲಬಂಡ ಮೂರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಶುಕ್ರವಾರ ರಾತ್ರಿ ಅಹಾರ ದೋಷದಿಂದ ಅಸ್ವಸ್ಥರಾದ ವಿದ್ಯಾರ್ಥಿಗಳ ಅರೋಗ್ಯ ವಿಚಾರಿಸಿ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಿ ಮಾತನಾಡಿ ಕಳೆದ ೬ ತಿಂಗಳ ಕೆಳಗೆ ವಸತಿ ನಿಲಯದ ವಿದ್ಯಾರ್ಥಿಗಳು ಅಹಾರ ದೋಷದಿಂದಾಗಿ ಅಸ್ವಸ್ಥರಾದ ಪ್ರಕರಣ ವರದಿಯಾಗಿತ್ತು ವರ್ಷದಲ್ಲಿ ಎರಡು ಬಾರಿ ಈ ರೀತಿ ಘಟನೆಗಳು ನಡೆಯುತ್ತಿರುವುದು ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಅಹಾರ ದೊರೆಯುತ್ತಿಲ್ಲ ಎನ್ನುವುದನ್ನು ತೋರಿಸುತ್ತಿದ್ದು ಇದು ಸಂಪೂರ್ಣವಾಗಿ ತಾಲೂಕು ಆಡಳಿತದ ನಿರ್ಲಕ್ಷ ಹಾಗೂ ವೈಫಲ್ಯವನ್ನು ತೋರಿಸುತ್ತದೆ. ಮುಂದಿನದಿನಗಳಲ್ಲಿ ವಸತಿ ನಿಲಯಗಳ ಸುಧರಣೆಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಹಾಗೂ ೫೦ಸಾವಿರ ಜನಸಂಖ್ಯೆಯುಳ್ಳ ಪಟ್ಟಣಕ್ಕೆ  ೬೦ ಹಾಸಿಗೆಗಳ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಬ್ಬರೆ ಮಕ್ಕಳ ತಜ್ಞರು ಇರುವುದರಿಂದ ವೈದ್ಯರಿಗೆ ಕೆಲಸದ ಒತ್ತಾಡ ಹೆಚ್ಚಾಗುತ್ತಿದೆ ಕೂಡಲೆ ಸರಕಾರದಿಂದ ಹೆಚ್ಚಿನ ತಜ್ಞ ವೈದ್ಯರನ್ನು, ಸ್ತಿçÃರೋಗ ತಜ್ಞರನ್ನು ನೇಮಕ ಮಾಡದೆ ಇದ್ದಲ್ಲಿ ಪುರಸಭೆ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ನಂತರ ಸಂಗಪೂರ ರಸ್ತೆಯಲ್ಲಿನ ರಾಜಲಬಂಡ ಮೂರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳ ಅರೋಗ್ಯ ವಿಚಾರಿಸಿದರು
ವಸತಿ ನಿಲಯದ ಪ್ರಾಚಾರ್ಯರಾದ ರೇವಣಸಿದ್ದಪ್ಪ ಹಾಗೂ ನಿಲಯ ಮೇಲ್ವಿಚಾರಕರಾದ ಸುನಿತಾರವರಿಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿದರು.
ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ ತಾ.ಅಧ್ಯಕ್ಷ ಮಲ್ಲಿಕಾರ್ಜುನಪಾಟೀಲ್, ಪುರಸಭೆ ಸದಸ್ಯರಾದ ಶರಣಪ್ಪ ಮೇದಾ,ಖಲೀಲ್ ಖುರೇಷಿ,ಸಂತೋಷ ಹುಗಾರ,ಜಾವಿದ್ ಖಾನ್,ನಾಗರಾಜ ಭೋಗವತಿ,ಪಿ.ರವಿ. ಹೆಚ್.ಮೌನೇಶ್ ಸೇರಿದಂತೆ ಪಕ್ಷದ ಮುಖಂಡರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!