ಬಳ್ಳಾರಿ.ಜೂನ್.20: ನಗರದ ಕೆ.ಸಿ ರಸ್ತೆಯಲ್ಲಿರುವ ಜಿಲ್ಲಾ ಜೆ.ಡಿ.ಎಸ್ ಕಛೇರಿಯಲ್ಲಿ ಇಂದು ಬೆಂಗಳೂರಿನ ವೈದೇಹಿ ಆಸ್ಪತ್ರೆ ಮತ್ತು ಜನತಾ ದಳ ಜಾತ್ಯಾತೀತ ಪಕ್ಷದ ಸಹಯೋಗದಲ್ಲಿ ಮುಂಜಾನೆ 9.30 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಉಚಿತ ಆರೋಗ್ಯ ಶಿಬಿರವನ್ನು ನಡೆಸಲಾಯಿತು. ಈ ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಕಣ್ಣಿನ ತೊಂದರೆ, ನರರೋಗದ ಸಮಸ್ಯೆ, ಎಲುಬು ಮತ್ತು ಕೀಲುಗಳ ಸಮಸ್ಯೆ, ಕಿಡ್ನಿ ಕಲ್ಲಿನ ಸಮಸ್ಯೆ ಮತ್ತು ಕ್ಯಾನರ್ಸ್ ತೊಂದರೆ ಸೇರಿದಂತೆ ಹಲವಾರು ಖಾಯಿಲೆಗಳನ್ನು ತಪಾಷಣೆ ಮಾಡಿ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು. ಇದರಲ್ಲಿ ಗಂಭೀರ ಕಾಯಿಲೆ ಕಂಡು ಬಂದಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕಳಿಸಿಕೊಡಲಾಯಿತು. ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್ ಕಾಡ್ರ್ ಹೊಂದಿದ ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ವೈದೇಹಿ ಆಸ್ಪತ್ರೆಯ ಕೆ ಮಲ್ಲಿಕಾರ್ಜುನ ಹಚ್ಚೊಳ್ಳಿ ತಿಳಿಸಿದರು.
ಸುಮಾರು 350 ರಿಂದ 400 ಜನರು ಈ ಶಿಬಿರದಲ್ಲಿ ದೈಹಿಕ ತಪಾಷಣೆ ಮಾಡಿಸಿಕೊಂಡರು. ಇದರಲ್ಲಿ ಇಪ್ಪತ್ತು ಜನ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಜಿಲ್ಲಾದ್ಯಕ್ಷ ಮೀನಳ್ಳಿ ತಾಯಣ್ಣ, ಮುಖಂಡರಾದ ಅದ್ದಿಗೇರಿ ರಾಮಣ್ಣ, ವನ್ನೂರಸ್ವಾಮಿ, (ವಂಡ್ರಿ) ರಾಮಾಂಜಿನಿ, ಬಸಪ್ಪ, ನಾಗರಾಜ್, ಭವಾನಿ, ಕಿರಣ್, ಅಶೋಕ್, ಮಹಿಳಾ ಘಟಕದ ಜಮೀಲಾ, ರೇಣುಕಾ, ನೀಲಾ, ವರಲಕ್ಷ್ಮಿ, ಯಶೋಧ, ರುಮಾನ, ನಾಗಮಣಿ ಸೇರಿದಂತೆ ಹಲವರಿದ್ದರು.