ಇಸ್ರೇಲ್ ಗುರಿಯಾಗಿಸಿ ಹಮಾಸ್ ರಾಕೆಟ್ ದಾಳಿ ನಡೆಸಿದ್ದು, ಆ ತಕ್ಷಣವೇ ಇಸ್ರೇಲ್ನ ಪ್ರಮುಖ ನಗರ ಟೆಲ್ಅವಿವ್ನಲ್ಲಿ ಸೈರನ್ ಸದ್ದು ಮೊಳಗಿದೆ. ಜನವರಿ ತಿಂಗಳ ನಂತರ ಹಮಾಸ್ನಿಂದ ಯಾವುದೇ ರೀತಿ ದಾಳಿ ನಡೆದಿರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ದಾಳಿ ಆಗಿರುವುದು ಭಾರಿ ಗೊಂದಲ ಮೂಡಿಸಿದೆ. ಜೊತೆಗೆ ಇಸ್ರೇಲ್ ಈಗ ಗಾಜಾ ಪ್ರದೇಶದಲ್ಲಿ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಗಾಜಾಪಟ್ಟಿ ಪ್ರದೇಶದಲ್ಲಿ ಜನ ಕೂಡ ಅನ್ನ & ಆಹಾರಕ್ಕೆ ಪರದಾಡುವ ಪರಿಸ್ಥಿತಿ ನರ‍್ಮಾಣವಾಗಿದೆ.
ಅಟ್ಯಾಕ್ ಬಗ್ಗೆ ಇಸ್ರೇಲ್ ಏನ್ ಹೇಳುತ್ತೆ? ಹಮಾಸ್ ನಡೆಸಿದ ರಾಕೆಟ್ ದಾಳಿ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಸೇನೆ ಈಗ, ಹಮಾಸ್ ದಾಳಿ ನಡೆಸಿದ ದಕ್ಷಿಣ ಗಾಜಾದ ರಫಾ ಪ್ರದೇಶದಿಂದ ಉಡಾವಣೆ ಆಗಿರುವ ೮ ಸ್ಫೋಟಕಗಳು ಇಸ್ರೇಲ್ ಪ್ರವೇಶ ಮಾಡಿದ್ದವು. ತಕ್ಷಣ ಹಲವು ರಾಕೆಟ್ಗಳನ್ನು ಗಡಿ ಭಾಗದಲ್ಲೇ ನಿಷ್ಕ್ರಿಯ ಮಾಡಿದ್ದೇವೆ ಎಂದಿದೆ ಇಸ್ರೇಲ್ ಸೇನೆ. ಮತ್ತೊಂದು ಕಡೆ ಜಾಗತಿಕ ಒತ್ತಡಕ್ಕೆ ಮಣಿದು ಮಾನವೀಯ ನೆರವು ತಂದ ಟ್ರಕ್ಗಳಿಗೆ ಗಾಜಾ ಪಟ್ಟಿ ಪ್ರವೇಶಕ್ಕೆ ಇಸ್ರೇಲ್ ಅವಕಾಶ ನೀಡಿದೆ ಎನ್ನಲಾಗಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ, ಹಮಾಸ್ ರಾಕೆಟ್ ಹಾರಿಸಿದ್ದು ಕೂಡ ಭಾರಿ ಗೊಂದಲ ಸೃಷ್ಟಿಸಿದೆ.
ಯುದ್ಧ ನಿಲ್ಲಿಸಲು ಭಾರಿ ಒತ್ತಡ ಅಕ್ಟೋಬರ್ ೭ಕ್ಕೆ ಶುರುವಾಗಿದ್ದ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈಗಾಗಲೇ ೩೫ ಸಾವಿರಕ್ಕೂ ಹೆಚ್ಚು ಜನರ ಜೀವ ಬಲಿಯಾಗಿದ್ದು. ಗಾಜಾ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಅಲ್ಲಿನ ಜನ ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದಾರೆ. ಈ ಸಂಕಷ್ಟದ ಸಮಯದಲ್ಲೇ ಯುದ್ಧ ನಿಲ್ಲಿಸಬೇಕು ಎಂಬ ಒತ್ತಡ ಕೂಡ ಹೆಚ್ಚಾಗಿದೆ. ಆದ್ರೂ ಯುದ್ಧ ನಿಲ್ಲಿಸಲು ಇಸ್ರೇಲ್ ಸಿದ್ಧವಿಲ್ಲ. ಇನ್ನೊಂದು ಕಡೆ ಯುದ್ಧ ನಿಲ್ಲಿಸಬೇಕು ಎನ್ನುವ ಒತ್ತಡ ಕೂಡ ಹೆಚ್ಚಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡ ಇದೇ ತರ‍್ಪು ನೀಡಿದೆ.
ಇಷ್ಟೆಲ್ಲಾ ಘಟನೆ ನಡುವೆ ಹಮಾಸ್ ರಾಕೆಟ್ ಉಡಾಯಿಸಿ ಪರಿಸ್ಥಿತಿ ಕೈಮೀರುವಂತೆ ಮಾಡಿದೆ. ಹಾಗೇ ರಫಾ & ಗಾಜಾ ಪಟ್ಟಿ ಪ್ರದೇಶದಲ್ಲಿ ಲಕ್ಷಾಂತರ ಪ್ಯಾಲೆಸ್ತೀನ್ ಜನರು ಅನ್ನ & ನೀರಿಗಾಗಿ ಪರದಾಡುತ್ತಿದ್ದಾರೆ. ಹೀಗಿದ್ದಾಗ ಯುದ್ಧ ನಿಂತರೆ ಸಾಕು ಅಂತಾ ಅವರೆಲ್ಲಾ ಬೇಡುತ್ತಿದ್ದಾರೆ. ಆದರೆ ಯುದ್ಧ ನಿಲ್ಲಿಸಲು ಇಸ್ರೇಲ್ ಮನಸ್ಸು ಮಾಡುತ್ತಿಲ್ಲ