ಕರ್ನಟಕದ ಮಸಲ ಪಲಾವ್ …. ಬೇಕಾಗುವ ಸಾಮಾಗ್ರಿಗಳು ಮತ್ತು ಮಡೋದು ಹೇಗೆ ತೀಳಿಯಿರಿ

Vijayanagara Vani
ಕರ್ನಟಕದ ಮಸಲ ಪಲಾವ್ …. ಬೇಕಾಗುವ ಸಾಮಾಗ್ರಿಗಳು ಮತ್ತು   ಮಡೋದು ಹೇಗೆ ತೀಳಿಯಿರಿ

ಹಲವರ ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಪಲಾವ್ ಫಿಕ್ಸ್ ಆಗಿರುತ್ತೆ. ಏಕೆಂದರೆ ಮಾಡುವುದು ತುಂಬಾನೆ ಸುಲಭ ಹಾಗೂ ತರಕಾರಿಗಳ ಹಾಕೋದ್ರಿಂದ ಆರೋಗ್ಯಕ್ಕೂ ಇದು ಉತ್ತಮ ಎಂಬ ಮನೋಭಾವದಲ್ಲಿ ಪಲಾವ್ ಮಾಡಲಾಗುತ್ತದೆ. ಅದ್ರಲ್ಲೂ ಪಲಾವ್ ಎಂದರೆ ಈಗಂತು ಹತ್ತು ಹಲವು ವಿಧದಲ್ಲಿ ಮಾಡಲಾಗುತ್ತದೆ.

ಈಗ ಬಿರಿಯಾನಿ ಶೈಲಿಯಲ್ಲಿ ಪಲಾವ್ ಮಾಡಲಾಗುತ್ತದೆ. ಪಲಾವ್ ಜೊತೆಗೆ ಮೊಸರು ಬಜ್ಜಿ ಇದ್ದರೆ ಆ ತಿಂಡಿಗೆ ಮತ್ತಷ್ಟು ರುಚಿ ಬರುತ್ತದೆ. ಕೆಲವೊಂದು ಹೋಟೆಲ್ಗಳಂತೂ ಈ ಪಲಾವ್ ಖಾದ್ಯದಿಂದಲೇ ಫೇಮಸ್ ಆಗಿವೆ. ಮತ್ತೆ ಕೆಲವರು ಈ ಪಲಾವ್ ಸವಿಯಲೆಂದೇ ಹೋಟೆಲ್ಗಳಿಗೆ ಭೇಟಿ ನೀಡುತ್ತಾರೆ.

ಇಷ್ಟೊಂದು ವಿಚಾರ ತನ್ನಲ್ಲಿಟ್ಟುಕೊಂಡಿರುವ ಈ ಪಲಾವ್, ಭಾರತೀಯ ಮನೆಯ ಖಾದ್ಯ, ಬೆಳಗ್ಗೆ ತಿಂಡಿಗೆ ಮಧ್ಯಾಹ್ನದ ಲಂಚ್ ಬಾಕ್ಸ್ಗೆ ಥಟ್ ಅಂತ ರೆಡಿಯಾಗುವ ಏಕೈಕ ತಿಂಡಿ. ಈ ರೀತಿ ಇದ್ದರೂ ಕೆಲವರಿಗೆ ಪಲಾವ್ ಎಂದರೆ ಆಗುವುದಿಲ್ಲ. ಏಕೆಂದರೆ ಯಾವಾಗಲು ಇಂದೇ ರೀತಿಯ, ಒಂದೇ ರುಚಿಯ ಪಲಾವ್ ಮಾಡಿದರೆ ಎಂತವರಿಗೂ ಬೇಜಾರಾಗುತ್ತದೆ. ಆದ್ರೆ ರುಚಿಯಲ್ಲೂ ಸ್ವಲ್ಪ ಬದಲಾವಣೆ ನೀವು ಮಾಡಿದ್ರೂ ಬಾಯಿ ಚಪ್ಪರಿಸಿ ಸವಿಯುತ್ತಾರೆ.

ಹಾಗಾದ್ರೆ ನಾವಿಂದು ಎಲ್ಲರಿಗೂ ಇಷ್ಟವಾಗುವಂತಹ ಮಸಾಲ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಮಸಾಲ ಪಲಾವ್ ಮಾಡಲು ಏನೆಲ್ಲಾ ಬೇಕು? ಮಾಡುವ ವಿಧಾನವೇನು? ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು

ಒಂದು ಕಪ್ ಅಕ್ಕಿ ,ಒಂದು ಕಪ್ ಕ್ಯಾರೆಟ್,, ಒಂದು ಕಪ್ ಆಲುಗಡ್ಡೆ, ಒಂದು ಕಪ್ ಟಮೊಟೊ, ಒಂದು ಕಪ್  ಈರುಳ್ಳಿ,ಅರ್ಧ ಕಪ್ ಮೆನಸಿನಕಾಯಿ , ಸ್ವಲ್ಪ  ಅಡುಗೆ ಎಣ್ಣೆಸ್ವಲ್ಪ ಕೊತ್ತುಂಬರಿ   ಸ್ವಲ್ಪ ಕರಿಬೆವು ಹಾಗೂ ಸ್ವಲ್ಪ ಪುದೀನ ಮತ್ತು 6 ರಿಂದ 8  ಎಸಳು ಬೆಳ್ಳುಳ್ಳಿ ಮತ್ತು ಸ್ವಲ್ಪ ಅಲ್ಲ ಹಾಗೂ ಚೆಕ್ಕೆ,ಲಂವಂಗ ,ಪತ್ರಿ ಎಲೆ ದನಿಯಾ ಜಿರಿಗೆ, ಹೂ ,ಹರಿಸಿನ, ಉದ್ದಿಬಳೆ, ಕಡ್ಲಬೆಳೆ ,ಶೇಂಗ ವಗ್ಗರಣೆಗೆ ಬೇಕದಾಷ್ಟು

ಮಾಡುವ ವಿದಾನ

ಕೂಕರ್ ನಲ್ಲಿ ಸಲ್ಪ ಎಣ್ಣೆ ಉದ್ದಿನ ಬೇಳೆ,ಶೇಂಗ ಕಡ್ಲೆ ಬೇಳೆ, ಎಲ್ಲ ಹಚ್ಚಿದ ತಾರಕಾರಿಗಳನ್ನು ಹಾಕಿ ಕುಟ್ಟಿ ಪುಡಿಮಾಡಿದ ದನಿಯಾ ಚೆಕ್ಕೆ ಪೌಡರ್ ಅನ್ನು ಹಾಕಿ ರುಚಿಗೆ ತಕ್ಕಷ್ಡು ಉಪ್ಪು  ಅಕಿ ಚನ್ನಾಗಿ ಕಂದು ಬಣ್ಣ ಬರುವಾಗೆ ಹುರಿದುಕೋಳ್ಳಿ ನಂತರ 1 ಕಪ್ ಅಕ್ಕಿ ಯನ್ನು ಆಕಿ 2 ನಿಮಿಷ  ಬಿಸಿಮಾಡಿ ನಂತರ 2 ಕಪ್ ನೀರು ಹಾಕಿ  ಕುಕರ್ ಅನ್ನು ಮುಚ್ಚಿ  2 ವಿಸಿಲ್ ಬರುವರೆಗು ಹಾಕಿಸಿ . ಈಗ ಘಮ್ ಎಂಬ ಪರಿಮಳದೋದಿಗೆ ಕರ್ನಟಕದ ಮಸಲ ಪಲವ್ ರೇಡಿ ಹಾಗೆ ಬಿಸಿ ಬಿಸಿ  ಪಲವ್    ಸವಿಯಿರಿ  ….

U.prashanth

 

WhatsApp Group Join Now
Telegram Group Join Now
Share This Article
error: Content is protected !!