Ad image

ಟೊಮೆಟೊ ಇದ್ಯಾ? ಹಾಗಾದ್ರೆ ಸಿಂಪಲ್ ಆಗಿ ಟೊಮೊಟೊ ರೈಸ್ ಮಾಡಿಕೊಳ್ಳಿ!

Vijayanagara Vani
ಟೊಮೆಟೊ ಇದ್ಯಾ? ಹಾಗಾದ್ರೆ ಸಿಂಪಲ್ ಆಗಿ ಟೊಮೊಟೊ ರೈಸ್ ಮಾಡಿಕೊಳ್ಳಿ!

ಪೋಷಕಾಂಶ ಸಮೃದ್ಧ ರುಚಿಕರ ಮತ್ತು ಆರೋಗ್ಯಕರ ಆಯ್ಕೆ ಆಗಿದೆ ಟೊಮ್ಯಾಟೋ ರೈಸ್. ಟೊಮೆಟೊ ರೈಸ್ ಸ್ವಲ್ಪ ಮಸಾಲೆಯುಕ್ತ ಆಗಿದ್ದರೂ, ಇದು ಸುಲಭವಾಗಿ ತಯಾರಿಸ ಬಹುದು. ಜೊತೆಗೆ ತಿನ್ನೋದಕ್ಕೂ ಸಖತ್ ಟೇಸ್ಟಿ ಆಗಿರುತ್ತೆ. ಘಮ ಘಮಿಸುವ ಟೊಮ್ಯಾಟೋ ರೈಸ್ ಮಕ್ಕಳಿಗೂ ಫೇವರೆಟ್ ಆಗಿದೆ. ಹಾಗಾದರೆ ಟೊಮೋಟೋ ರೈಸ್ ಮಾಡೋದು ಹೇಗೆ? ತಲೆ ಕೆಡಿಸಿಕೊಳ್ಳಬೇಡಿ, ಸಿಂಪಲ್ ರೆಸಿಪಿ ಇಲ್ಲಿದೆ ಓದಿ

ಸಿಂಪಲ್ ಆಗಿ ಮಾಡಬಹುದು ಟೊಮೆಟೊ ರೈಸ್

ಟೊಮೆಟೊ ರೈಸ್ ಅನ್ನು 15 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತಯಾರಿಸಬಹುದು. ಟೊಮೆಟೊ, ಕೊತ್ತಂಬರಿ, ಜೀರಿಗೆ, ತುಪ್ಪ, ಶುಂಠಿ, ಬೆಳ್ಳುಳ್ಳಿ, ಅಕ್ಕಿ ಮತ್ತು ಹಸಿರು ಮೆಣಸಿನಕಾಯಿ ಇಷ್ಟಿದ್ದರೆ ಸಾಕು. ಇವನ್ನೇ ಕತ್ತರಿಸಿ ಈಸಿಯಾಗಿ ಟೊಮೆಟೊ ರೈಸ್ ಮಾಡಲು ಬಳಕೆ ಮಾಡಬಹುದು.

ಟೊಮೆಟೊ ರೈಸ್ ಮಾಡಲು ಬೇಕಾಗುವ ಪದಾರ್ಥಗಳುಟೊಮೆಟೊ ರೈಸ್ ಮಾಡಲು ಬಾಸ್ಮತಿ ಅಕ್ಕಿ, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಲವು ಕರಿಬೇವಿನ ಎಲೆಗಳು, 1 ಟೀ ಸ್ಪೂನ್ ಸಾಸಿವೆ ಎಣ್ಣೆ, ½ ಟೀ ಸ್ಪೂನ್ ಜೀರಿಗೆ, ½ ಟೀ ಸ್ಪೂನ್ ಕಪ್ಪು ಸಾಸಿವೆ, ¼ ಟೀ ಸ್ಪೂನ್ ಅರಿಶಿನ ಪುಡಿ, ¼ ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ, ½ ಟೀ ಸ್ಪೂನ್ ಕೊತ್ತಂಬರಿ ಪುಡಿ, 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ, ½ ಕಪ್ ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕತ್ತರಿಸಿದ ಟೊಮ್ಯಾಟೊ, ನಿಂಬೆ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೇಕು.

ಟೊಮೆಟೊ ರೈಸ್ ಮಾಡುವ ವಿಧಾನಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ, ಸಿಡಿಸಿ. ಇದಕ್ಕೆ ಹಸಿರು ಮೆಣಸಿನಕಾಯಿ, ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಟೊಮೆಟೊ, ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಸೇರಿಸಿ. ಒಂದು ಮುಚ್ಚಳವನ್ನು ಮುಚ್ಚಿ ಮತ್ತು ಬೇಯಿಸಿ. ಟೊಮೆಟೊಗಳು ಚೆನ್ನಾಗಿ ಬೇಯಿಸಿದಾಗ ನೀರು ಸೇರಿಸಿ. ಅದಕ್ಕೆ ನಿಂಬೆರಸ ಸೇರಿಸಿ ಕುದಿಯಲು ಬಿಡಿ. ಈಗ ಅದನ್ನು ನೀರಿನಿಂದ ತೆಗೆದುಕೊಂಡು ಅಕ್ಕಿ ಸೇರಿಸಿ. ಮುಚ್ಚಿ ಬೇಯಿಸಿ. ಅಕ್ಕಿ ಚೆನ್ನಾಗಿ ಬೆಂದ ನಂತರ ಹಸಿರು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿ.

U.prashanth

Share This Article
error: Content is protected !!
";