ಸಿರುಗುಪ್ಪ.ಮೇ.2:- ಮೇ.7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಚುನಾವಣಾ ಆಯೋಗದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ಚುನಾವಣೆ ಶಾಂತಿಯುತವಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾಧಿಕಾರಿ ನಳೀನ್ ಅತುಲ್ ತಿಳಿಸಿದರು.
ನಗರದ ಶ್ರೀ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯ ಅಂಗವಾಗಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳಿಗೆ ಎರ್ಪಡಿಸಿದ್ದ 2 ನೇ ಹಂತದ ತರಬೇತಿಯಲ್ಲಿ ಮಾತನಾಡಿದರು.
ಸಹಾಯಕ ಚುನಾವಣಾಧಿಕಾರಿ ಡಾ.ತಿರುಮಲೇಶ್ ಮಾತನಾಡಿ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಯವರಿಗೆ ಅಂಚೆ ಮತದಾನ ಮಾಡಲು ತರಬೇತಿ ಕೇಂದ್ರದಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್ ತೆರೆಯಲಾಗಿದ್ದು 201 ಸಿಬ್ಬಂದಿಗಳು ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದ್ದು ಬಾಕಿ ಉಳಿದಿರುವ ಸಿಬ್ಬಂದಿಯವರಿಗೆ ಮೇ.2 ರಿಂದ 12ರ ವರೆಗೆ ತಾಲೂಕು ಕಛೇರಿಯಲ್ಲಿ ಸ್ಥಾಪಿಸಿರುವ ವೋಟರ್ ಫೆಸಿಲಿಟೇಷನ್ ಸೆಂಟರ್‌ಗೆ ಬಂದು ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಹೇಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕಿ ಹೇಮ್ ಪುಷ್ಪ ಶರ್ಮ ಮತ್ತು ತಹಶೀಲ್ದಾರ್ ಶಂಷಾಲA, ಸಿಬ್ಬಂದಿ ಇದ್ದರು.